More

    ಬಸ್ಸಿನಲ್ಲಿದ್ದ 41 ಜನರನ್ನು ಬಲಿಪಡೆದ ಟ್ರಕ್​ ಚಾಲಕ: ತನಿಖೆಯಲ್ಲಿ ಬಯಲಾಯ್ತು ಭಯಾನಕ ಸತ್ಯ!

    ಬ್ರಾಸಿಲಿಯಾ: ಬುಧವಾರ ಬ್ರೆಜಿಲ್​ನ ಹೆದ್ದಾರಿಯಲ್ಲಿ ಸಂಭವಿಸಿದ ಟ್ರಕ್​ ಮತ್ತು ಬಸ್​ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬಸ್ಸಿನಲ್ಲಿದ್ದ 41 ಮಂದಿ ದಾರುಣವಾಗಿ ಸಾವಿಗೀಡಾಗಿದ್ದರು.

    ಇದೀಗ ಘಟನೆಗೆ ಕಾರಣ ಬಹಿರಂಗವಾಗಿದ್ದು, ಟ್ರಕ್​ ಚಾಲಕ ಗೀಸನ್ ಗೊನ್ವಾಲ್ವ್ಸ್ ಕ್ಲಾಸ್​ ಡಿ ಲೈಸೆನ್ಸ್​ ಹೊಂದಿರಲಿಲ್ಲ ಎಂದು ತಿಳಿದುಬಂದಿದೆ. ಬೃಹತ್​ ಟ್ರಕ್​ಗಳನ್ನು ಚಲಾಯಿಸಲು ದಕ್ಷಿಣ ಅಮೆರಿಕದಲ್ಲಿ ಕ್ಲಾಸ್​ ಡಿ ಲೈಸೆನ್ಸ್​ ತುಂಬಾ ಅವಶ್ಯಕ.

    ಗೀಸನ್ ತಾತ್ಕಾಲಿಕ ಚಾಲನ ಪರವಾನಗಿಯನ್ನು ಮಾತ್ರ ಹೊಂದಿದ್ದನಂತೆ. ಈತ ಯಾವಾಗಲೂ ಲೈಸೆನ್ಸ್​ ಹೊಂದಿದ್ದ ಟ್ರಕ್​ ಡ್ರೈವರ್​ ಜತೆ ಇರುತ್ತಿದ್ದ. ಆದರೆ, ಆತನು ಕೂಡ ಬುಧವಾರ ಸಂಭವಿಸಿದ ದುರಂತರಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾನೆ.

    ಇನ್ನು ಅಪಘಾತದಲ್ಲಿ ಸಂಪೂರ್ಣ ನುಜ್ಜುಗುಜ್ಜಾಗಿರುವ ಬಸ್ಸಿನ ಮಾಲೀಕರಾದ ಸ್ಟಾರ್ ಟುರಿಸ್ಮೊ, ತಮ್ಮ ವಾಹನವನ್ನು ರಾಷ್ಟ್ರೀಯ ಭೂ ಸಾರಿಗೆ ಸಂಸ್ಥೆಯಲ್ಲಿ ನೋಂದಾಯಿಸಿಲ್ಲ ಎಂಬುದು ತಿಳಿದುಬಂದಿದೆ. ಆದರೆ, ಅಪಘಾತಕ್ಕೆ ನಿಖರ ಕಾರಣ ಏನೆಂಬುದು ಇನ್ನು ತಿಳಿದುಬಂದಿಲ್ಲ. ಸದ್ಯ ತನಿಖೆ ಮುಂದುವರಿದಿದೆ.

    ಇದನ್ನೂ ಓದಿ: ಇನ್ನೇನು ಮೃತದೇಹ ಶವಗಾರದಲ್ಲಿಡಬೇಕು ಅಷ್ಟರಲ್ಲಿ ದಿಢೀರನೆ ಎದ್ದು ಕುಳಿತು ಕಣ್ಣೀರಿಟ್ಟ ಸತ್ತ ವ್ಯಕ್ತಿ!

    ಘಟನೆ ಹಿನ್ನೆಲೆ ಏನು?
    ಬುಧವಾರ ಬ್ರಜಿಲ್​ನ ಸಾವೋಪೋಲೋ ರಾಜ್ಯದ ಹೆದ್ದಾರಿಯಲ್ಲಿ ಅವಘಡ ಸಂಭವಿಸಿದೆ. ಜವಳಿ ಕಾರ್ಖಾನೆಗೆ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಬಸ್​ ಹಾಗೂ ಟ್ರಕ್​ ನಡುವೆ ಮುಖಾಮುಖಿ ಡಿಕ್ಕಿಯಾಗಿ ದುರಂತ ನಡೆದಿದ್ದು, 41 ಮಂದಿ ಮೃತಪಟ್ಟಿದ್ದಾರೆ.

    ಆರಂಭದಲ್ಲಿ 32 ಮಂದಿ ಮೃತಪಟ್ಟಿರುವುದಾಗಿ ವರದಿಯಾಗಿತ್ತು. ಕೆಲವೇ ಸಮಯದಲ್ಲಿ ಮೃತರ ಸಂಖ್ಯೆ 37ಕ್ಕೇರಿತ್ತು. ಅಂತಿಮವಾಗಿ 41 ಮಂದಿ ಮೃತಪಟ್ಟಿರುವುದು ಖಚಿತವಾಗಿದೆ. ಕೆಲ ಮೃತದೇಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, ಕರುಣಾಜನಕವಾಗಿತ್ತು. ಸ್ಥಳೀಯ ಮಾಧ್ಯಮ ವರದಿಯ ಪ್ರಕಾರ ಬಸ್ಸಿನಲ್ಲಿ 53 ಮಂದಿ ಇದ್ದರು ಎನ್ನಲಾಗಿದೆ. ಇನ್ನು ಟ್ರಕ್​ ಚಾಲಕ ಅಪಘಾತದಿಂದ ಪಾರಾಗಿದ್ದಾನೆ.

    ಬ್ರೆಜಿಲ್​ನ ಅತ್ಯಂತ ದೊಡ್ಡ ನಗರ ಮತ್ತು ವಾಣಿಜ್ಯ ನಗರಿ ಪಶ್ಚಿಮ ಸಾವಪೋಲೋದಿಂದ ಸುಮಾರು 210 ಮೈಲಿ ದೂರದಲ್ಲಿರುವ ತಗುಯಿ ಪಟ್ಟಣದ ಹೊರವಲಯದಲ್ಲಿ ಭೀಕರ ಅಪಘಾತ ಸಂಭವಿಸಿತ್ತು. (ಏಜೆನ್ಸೀಸ್​)

    ಟ್ರಕ್​-ಬಸ್​ ನಡುವೆ ಭೀಕರ ಅಪಘಾತ: 37 ಮಂದಿ ಸಾವು, ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಮೃತದೇಹಗಳು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts