More

    ಫ್ಲೊರಿಡಾದಲ್ಲಿ ಕಂಡುಬಂತೊಂದು ಬೆಚ್ಚಿಬೀಳಿಸುವ ಸೋಂಕು ರೋಗ – ನೆಗ್ಲೇರಿಯಾ ಫೌಲೇರಿ ಲಕ್ಷಣಗಳೇನು?.

    ವಾಷಿಂಗ್ಟನ್: ಫ್ಲೊರಿಡಾದಲ್ಲಿ ಮಿದುಳು ತಿನ್ನುವ ಅಪರೂಪದ ಅಮೀಬಾ ಪ್ರಕರಣ ಪತ್ತೆಯಾಗಿದೆ.
    ನೆಗ್ಲೇರಿಯಾ ಫೌಲೆರಿ ಮೆದುಳಿನ ಅಪರೂಪದ ಮತ್ತು ವಿನಾಶಕಾರಿ ಸೋಂಕನ್ನು ಉಂಟುಮಾಡುವ ಸಾಧ್ಯತೆ ಇದೆ ಎಂಬುದು ತಜ್ಞರ ಅಭಿಪ್ರಾಯ.
    ಟ್ಯಾಂಪಾ ಪ್ರದೇಶದ ವ್ಯಕ್ತಿಯೊಬ್ಬ ಅಪರೂಪದ ಮೆದುಳು ತಿನ್ನುವ ಅಮೀಬಾದಿಂದ ಸೋಂಕಿಗೆ ಒಳಗಾಗಿದ್ದಾರೆ ಎಂದು ಫ್ಲೋರಿಡಾ ಆರೋಗ್ಯ ಇಲಾಖೆ ಖಚಿತಪಡಿಸಿದೆ.
    ಮೆದುಳಿನ ಅಂಗಾಂಶದ ಮೇಲೆ ದಾಳಿ ಮಾಡುವ ಮೆದುಳು ತಿನ್ನುವ ಅಮೀಬಾ (ಏಕಕೋಶೀಯ ಜೀವಂತ ಜೀವಿ) ಎಂದು ಕರೆಯಲ್ಪಡುವ ನೇಗ್ಲೆರಿಯಾ ಫೌಲೆರಿ ಸೋಂಕು ಅಪರೂಪ, ಆದರೆ ಅವು ಅತ್ಯಂತ ಮಾರಕವಾಗಿವೆ.

    ಇದನ್ನೂ ಓದಿ: ಪಾಕ್​ ಆಕ್ರಮಿತ ಕಾಶ್ಮೀರದಲ್ಲಿ ಚೀನಾ ಮತ್ತು ಪಾಕ್ ವಿರುದ್ಧ ಭಾರಿ ಪ್ರತಿಭಟನೆ


    ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಆ್ಯಂಡ್ ಪ್ರಿವೆನ್ಷನ್ (ಸಿಡಿಸಿ) ಪ್ರಕಾರ, ಅಮೀಬಾ ಸಾಮಾನ್ಯವಾಗಿ ಬೆಚ್ಚಗಿನ ಸಿಹಿನೀರಿನಲ್ಲಿ (ಸರೋವರಗಳು, ನದಿಗಳು ಮತ್ತು ಬಿಸಿನೀರಿನ ಬುಗ್ಗೆಗಳು) ಮತ್ತು ಮಣ್ಣಿನಲ್ಲಿ ಕಂಡುಬರುತ್ತದೆ. ಕಲುಷಿತ ನೀರು ಮೂಗಿನ ಮೂಲಕ ಮಾನವ ದೇಹ ಸೇರಿದಾಗ ವ್ಯಕ್ತಿಗೆ ನೆಗ್ಲೆರಿಯಾ ಫೌಲೆರಿ ತಗಲಬಹುದು, ಇದು ಮೆದುಳಿನ ಉರಿಯೂತ ಮತ್ತು ಮೆದುಳಿನ ಅಂಗಾಂಶಗಳ ನಾಶಕ್ಕೆ ಕಾರಣವಾಗುತ್ತದೆ.
    ಹಿಲ್ಸ್‌ಬರೋ ಕೌಂಟಿಯ ವ್ಯಕ್ತಿಯೊಬ್ಬರು ಸೋಂಕಿಗೆ ತುತ್ತಾದ ನಂತರ ನಲ್ಲಿಗಳು ಮತ್ತು ನದಿಗಳು, ಸರೋವರಗಳು, ಕೊಳಗಳು ಮತ್ತು ಕಾಲುವೆಗಳಂತಹ ಜಲಮೂಲಗಳಿಂದ ನೀರಿನೊಂದಿಗೆ ಮೂಗಿನ ಸಂಪರ್ಕವನ್ನು ತಪ್ಪಿಸಲು ಆರೋಗ್ಯ ಅಧಿಕಾರಿಗಳು ಸ್ಥಳೀಯರಿಗೆ ತಿಳಿಸಿದ್ದಾರೆ. ಸಿಹಿನೀರಿನಲ್ಲಿ ಈಜುವುದು ಮತ್ತು ಶಾಖದ ಅಲೆಗಳು ನೇಗ್ಲೆರಿಯಾ ಫೌಲೆರಿಯ ಸೋಂಕಿನ ಅಪಾಯವನ್ನು ಹೆಚ್ಚಿಸುವ ಕೆಲವು ಅಂಶಗಳಾಗಿವೆ. ‘

    ಇದನ್ನು ಓದಿ: ಚೀನಾ ವಿರುದ್ಧ ಅಂತಾರಾಷ್ಟ್ರೀಯ ಕೋರ್ಟ್​ಗೆ ದೂರು ಒಯ್ದ ಉಯ್ಗುರ್​ ಸಮುದಾಯ


    ನೇಗ್ಲೆರಿಯಾ ಫೌಲೆರಿ ಸೋಂಕಿನ ಚಿಹ್ನೆಗಳು ಮತ್ತು ಲಕ್ಷಣಗಳು ಯಾವುವು? : ನೇಗ್ಲೆರಿಯಾ ಫೌಲೆರಿಯೊಂದಿಗಿನ ಸೋಂಕು ಪ್ರೈಮರಿ ಅಮೆಬಿಕ್ ಮೆನಿಂಗೊಎನ್ಸೆಫಾಲಿಟಿಸ್ (ಪಿಎಎಂ) ಎಂಬ ಕಾಯಿಲೆಯನ್ನು ಉಂಟುಮಾಡುತ್ತದೆ, ಇದರ ಪರಿಣಾಮ ಮೆದುಳಿನ ಉರಿಯೂತ ಮತ್ತು ಮೆದುಳಿನ ಅಂಗಾಂಶಗಳ ನಾಶವಾಗುತ್ತದೆ. ನೇಗ್ಲೆರಿಯಾ ಫೌಲೆರಿ ಸೋಂಕಿನ ಲಕ್ಷಣಗಳು ಬ್ಯಾಕ್ಟೀರಿಯಾದ ಸೋಂಕಿನಂತೆಯೇ ಇರುತ್ತವೆ, ಇದರಿಂದಾಗಿ ಆರಂಭದಲ್ಲಿ ಪಿಎಎಂ ರೋಗನಿರ್ಣಯ ಮಾಡುವುದು ಕಷ್ಟವೆಂದೇ ಹೇಳಬಹುದು.  ಈ ಅಮೀಬಾ ಕಾಣಿಸಿಕೊಂಡ 2 ರಿಂದ 15 ದಿನಗಳಲ್ಲಿ ರೋಗಲಕ್ಷಣಗಳು ಹೆಚ್ಚಾಗಬಹುದು.

    ಸೋಂಕಿನ ಸಾಮಾನ್ಯ ಲಕ್ಷಣಗಳು : ಜ್ವರ, ಹಠಾತ್, ತೀವ್ರ ಮುಂಭಾಗದ ತಲೆನೋವು, ವಾಸನೆ ಮತ್ತು ರುಚಿ ಅನುಭವದಲ್ಲಿ ಬದಲಾವಣೆ, ಕುತ್ತಿಗೆ ಸ್ಥಿರವಾಗಿ ಉಳಿದಂತಹ ಸ್ಥಿತಿ, ಮಾನಸಿಕ ಸ್ಥಿತಿಯಲ್ಲಿ ಬದಲಾವಣೆ, ರೋಗಗ್ರಸ್ತವಾಗುವಿಕೆ, ವಾಕರಿಕೆ, ವಾಂತಿ, ನಿದ್ರೆ, ಕೋಮಾದಂತಹ ಲಕ್ಷಣಗಳು ಕಂಡುಬರುತ್ತವೆ.
    ಈ ಚಿಹ್ನೆಗಳು ಮತ್ತು ಲಕ್ಷಣಗಳು ವೇಗವಾಗಿ ಹೆಚ್ಚಾಗಿ, ಒಂದು ವಾರದೊಳಗೆ ರೋಗಿ ಸಾವಿಗೆ ಕಾರಣಬಾಗಬಹುದು.
    ಆದ್ದರಿಂದ, ಈ ರೋಗಲಕ್ಷಣಗಳು ಕಂಡುಬಂದಲ್ಲಿ,  ವಿಶೇಷವಾಗಿ ಇತ್ತೀಚೆಗೆ ಬೆಚ್ಚಗಿನ, ಸಿಹಿನೀರಿನ ಸಂಪರ್ಕದಲ್ಲಿದ್ದವರು ತಕ್ಷಣ ವೈದ್ಯಕೀಯ ಸಹಾಯ ಪಡೆಯಬೇಕು.

    ಇದನ್ನೂ ಓದಿ: ಆಸ್ಪತ್ರೆಯ ಹುಳುಕು ತೋರಿಸಿದ್ದೇ ಪ್ರಾಣ ಕಸಿಯಿತೆ? ಪತ್ರಕರ್ತನ ಸಾವಿಗೆ ಟ್ವಿಸ್ಟ್‌


    ಆರಂಭಿಕ ರೋಗನಿರ್ಣಯ ಮತ್ತು ಚಿಕಿತ್ಸೆಯಿಂದ ಸಾವು ಸಂಭವಿಸುವುದನ್ನು ತಪ್ಪಿಸಬಹುದು. ನೇಗ್ಲೆರಿಯಾ ಸೋಂಕಿನ ಅಪಾಯವನ್ನು ತಗ್ಗಿಸಲು ಅಮೀಬಾವನ್ನು ಒಳಗೊಂಡಿರುವ ಬೆಚ್ಚಗಿನ, ಶುದ್ಧ ನೀರಿನ ಸಂಪರ್ಕದಿಂದ ದೂರವಿರುವಂತಹ ಮುಂಜಾಗೃತಾ ಕ್ರಮಗಳನ್ನು ಅಮೆರಿಕ ಆರೋಗ್ಯ ಸಂಸ್ಥೆ ಸೂಚಿಸಿದೆ. 

    ಆಸ್ಪತ್ರೆಯ ಹುಳುಕು ತೋರಿಸಿದ್ದೇ ಪ್ರಾಣ ಕಸಿಯಿತೆ? ಪತ್ರಕರ್ತನ ಸಾವಿಗೆ ಟ್ವಿಸ್ಟ್‌

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts