More

    ಅಂಕಕ್ಕಿಂತ ಮಕ್ಕಳು ಮುಖ್ಯ: ಶಿವಾನಿ

    ಉಡುಪಿ: ಒತ್ತಡಕ್ಕೆ ಒಳಗಾದ ಮಕ್ಕಳು ಚೀಟಿ ಬರೆದು ಹೊರಟು ಹೋಗುತ್ತಿದ್ದಾರೆ. ಪರೀೆ ವಿಷಯದಲ್ಲಿ ಮಕ್ಕಳಲ್ಲಿ ಒತ್ತಡವನ್ನು ಉಂಟು ಮಾಡಲಾಗುತ್ತಿದೆ. ನಮ್ಮ ಖುಷಿಯನ್ನು ಮಕ್ಕಳ ಮೇಲೆ ಹೇರುತ್ತಿದ್ದೇವೆ. ಅಂಕಕ್ಕಿಂತ ಮಕ್ಕಳು ಮುಖ್ಯ ಎಂಬುದನ್ನು ತಿಳಿದುಕೊಳ್ಳಬೇಕು ಎಂದು ಪ್ರಜಾಪಿತ ಬ್ರಹ್ಮಕುಮಾರೀಸ್​ ಈಶ್ವರಿಯ ವಿಶ್ವವಿದ್ಯಾಲಯದ ವಾಗ್ಮಿ ಬಿ.ಕೆ. ಶಿವಾನಿ ಹೇಳಿದರು.

    ಭಾನುವಾರ ಮಣಿಪಾಲದಲ್ಲಿ ಬ್ರಹ್ಮಕುಮಾರೀಸ್​ ಮಣಿಪಾಲ ಸೇವಾಕೇಂದ್ರದ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ “ಅಪಾರ ಸಂತೋಷಕ್ಕಾಗಿ ಪರಮಾತ್ಮನೊಂದಿಗೆ ಮನಸ್ಸನ್ನು ಜೋಡಿಸಿ” ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದರು.

    11ರಿಂದ 25ರವರೆಗಿನ ಶೇ.42 ಮಕ್ಕಳು ಮಾನಸಿಕ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಜೀವನದಲ್ಲಿ ಸಂತೋಷಕ್ಕಾಗಿ ಶ್ರಮ ಪಡುವ ಪೋಷಕರು ಮಕ್ಕಳಿಗೆ ಎಂಥಾ ಜಗತ್ತು ನಿರ್ಮಾಣಮಾಡುತ್ತಿದ್ದೇವೆ ಎಂಬ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.

    ಭಾವನಾತ್ಮಕ ಅನಾರೋಗ್ಯ
    ಹಳೆಯದನ್ನು ಮರೆಯಲು ಪ್ರಯತ್ನಿಸಿದ್ದಷ್ಟು ಜೀವನದಲ್ಲಿ ಸಂತೋಷವಾಗಿರಲು ಸಾಧ್ಯ. ನಾನು ಮರೆಯೋದಿಲ್ಲ. ಮರೆಯಲು ಸಾಧ್ಯವಾಗುವುದಿಲ್ಲ ಎಂಬುದನ್ನು ಮನಸ್ಸಿನಲ್ಲಿ ಇಷ್ಟುಕೊಂಡಷ್ಟು ಸಮಸ್ಯೆಗಳಿಗೆ ಸಮಾಧಾನವಿಲ್ಲ. ವ್ಯಕ್ತಿಗಳಲ್ಲಿರುವ ಭಾವನಾತ್ಮಕ ಅನಾರೋಗ್ಯದ ಬಗ್ಗೆಯೂ ಗಮನಹರಿಸಬೇಕು. ಇಂಥವರ ಜತೆಗೆ ಬೇಸರಪಟ್ಟುಕೊಳ್ಳುವುದು ಅಥವಾ ವಾದ ಮಾಡುವುದಕ್ಕಿಂತ ಶಾಂತಚಿತ್ತರಾಗಿ ಇರುವುದೇ ಲೇಸು ಎಂದು ಹೇಳಿದರು.

    ಶಾಸಕ ಯಶ್​ಪಾಲ್​ ಸುವರ್ಣ, ಉದ್ಯಮಿ ಅಜಯ್​ ಪಿ. ಶೆಟ್ಟಿ, ರಮೇಶ್​ ಬಂಗೇರ, ಸಂಧ್ಯಾ ಸುಭಾಷ್​ ಕಾಮತ್​, ವನಿತಾ ಪೈ, ಡಾ. ವಿರೂಪಾಕ್ಷ ದೇವರಮನೆ, ಡಾ. ರಾಜಲಕ್ಷಿ, ಮಣಿಪಾಲ ಬ್ರಹ್ಮಕುಮಾರಿ ಸಂಸ್ಥೆ ಮುಖ್ಯಸ್ಥೆ ಸಿಸ್ಟರ್​ ಸೌರಭಾ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts