More

    ಎರಡು ವರ್ಷದೊಳಗೆ ಬ್ರಹ್ಮಕಲಶ

    ಉಳ್ಳಾಲ: ಕರಾವಳಿ ಭಾಗದಲ್ಲಿ ಅತ್ಯಂತ ವಿರಳವಾಗಿರುವ ಅರ್ಧ ನಾರೀಶ್ವರ ದೇವಸ್ಥಾನ ಜೀರ್ಣೋದ್ಧಾರ ಹರೇಕಳದಲ್ಲಿ ನಡೆಯುತ್ತಿದ್ದು, 2022 ಜನವರಿ, ಫೆಬ್ರವರಿಯಲ್ಲಿ ಕಾಮಗಾರಿ ಪೂರ್ಣಗೊಂಡು ಬ್ರಹ್ಮಕಲಶ ನಡೆಯಲಿದೆ ಎಂದು ದೇವಸ್ಥಾನ ಪುನಃನಿರ್ಮಾಣ ಸಮಿತಿ ಅಧ್ಯಕ್ಷ ರಾಜೀವ್ ಆಳ್ವ ಹೇಳಿದರು.

    ಹರೇಕಳ ಸಂಪಿಗೆದಡಿ ಅರ್ಧನಾರೀಶ್ವರ ದೇವಸ್ಥಾನದ ಪುನಃ ನಿರ್ಮಾಣ ಪ್ರಯುಕ್ತ ಶುಕ್ರವಾರ ನಿಧಿಕುಂಭ, ಇತರ ಧಾರ್ಮಿಕ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದರು.

    ಕಾರ್ಕಳ ತಾಲೂಕಿನ ಹೆಬ್ರಿ, ಮುದ್ರಾಡಿ ಮತ್ತು ಅಜೆಕಾರಿನಲ್ಲಿ ಹೊರತುಪಡಿಸಿ ಕರಾವಳಿಯ ಹರೇಕಳದಲ್ಲಿ ಮಾತ್ರ ಅರ್ಧನಾರೀಶ್ವತ ದೇವಸ್ಥಾನ ಇತ್ತಾದರೂ ಭೂಗರ್ಭ ಸೇರಿತ್ತು. ಇದೀಗ ಮಾಗಣೆಯ ಎಲ್ಲ ಜನರ ಸಹಕಾರದಲ್ಲಿ ನಿಧಿಕುಂಭ ನಡೆಯುತ್ತಿದ್ದು ಸ್ಥಳೀಯರ ಸಹಕಾರ ಅನನ್ಯ ಎಂದು ತಿಳಿಸಿದರು.

    ಕಾರ್ಯದರ್ಶಿ ರವೀಂದ್ರ ಶೆಟ್ಟಿ ಉಳಿದೊಟ್ಟು ಮಾತನಾಡಿ, ಧಾರ್ಮಿಕ ಕಾರ್ಯಕ್ಕೆ ಭಯ, ಭಕ್ತಿ ಅಗತ್ಯ. ಅದರಂತೆ ನೂರಾರು ವರ್ಷಗಳ ಹಿಂದೆ ಭೂಗರ್ಭ ಸೇರಿದ್ದ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ಭರದಿಂದ ಸಾಗುತ್ತಿದ್ದು ಭಕ್ತರು ಪೂರ್ಣಪ್ರಮಾಣದಲ್ಲಿ ತೊಡಗಿಸಿಕೊಂಡಿದ್ದಾರೆ. ಭಜನಾ ಕಾರ್ಯದಲ್ಲಿ ತಂಡಗಳು ಭಾಗವಹಿಸಿವೆ ಎಂದರು.

    ನೀಲೇಶ್ವರ ಪದ್ಮನಾಭ ತಂತ್ರಿ ನೇತೃತ್ವದಲ್ಲಿ ನಿಧಿಕುಂಭ ನಡೆಯಿತು. ಪುನಃರ್ನಿರ್ಮಾಣ ಸಮಿತಿ ಗೌರವಾಧ್ಯಕ್ಷ ಟಿ.ಆರ್.ಪೂಂಜ, ಉಪಾಧ್ಯಕ್ಷ ಡೆಬ್ಬೇಲಿ ಮಹಾಬಲ ಹೆಗ್ಡೆ, ರವಿರಾಜ ರೈ, ಸದಸ್ಯ ನಂದರಾಜ ರೈ, ಉದ್ಯಮಿ ಸೂರಜ್ ಮುಂಬೈ, ಪ್ರಮುಖರಾದ ಬಾಬು ಆಳ್ವ, ಮೋಹನ್‌ದಾಸ್ ಶೆಟ್ಟಿ ಉಳಿದೊಟ್ಟು, ಭಾಸ್ಕರ್ ರೈ, ಮನೋಹರ ಶೆಟ್ಟಿ ಹರೇಕಳಗುತ್ತು ಮತ್ತಿತರರು ಉಪಸ್ಥಿತರಿದ್ದರು.

    ದೇವಸ್ಥಾನ ಜೀರ್ಣೋದ್ಧಾರಕ್ಕೆ ಸಂಪಿಗೆದಡಿ ಕುಟುಂಬ ಮುಂದಾಗಿದ್ದು, ಊರಿನವರು ಸಂಪೂರ್ಣ ರೀತಿ ಸಹಕಾರ ನೀಡುತ್ತಿದ್ದಾರೆ. ಎರಡು ವರ್ಷದಲ್ಲಿ ಕಾಮಗಾರಿ ಪೂರ್ಣಗೊಳ್ಳುವಂತಾಗಲಿ.
    ಮಹಾಬಲ ಹೆಗ್ಡೆ ದೆಬ್ಬೇಲಿಗುತ್ತು, ಉಪಾಧ್ಯಕ್ಷ, ಪುನರ್ನಿರ್ಮಾಣ ಸಮಿತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts