More

    ಇಂದಿನಿಂದ ಬ್ರಹ್ಮ ಕಳಶೋತ್ಸವ

    ಮಡಿಕೇರಿ: ತಾಳತ್ತಮನೆಯ ಪುರಾತನ ಲಿಂಗರೂಪಿಣಿ ಶ್ರೀ ದುರ್ಗಾಭಗವತಿ ದೇವಾಲಯದ ಮರುಪ್ರತಿಷ್ಠಾಪನೆ ಹಾಗೂ ಬ್ರಹ್ಮ ಕಳಶೋತ್ಸವ ಫೆ.7ರಿಂದ 12ರವರೆಗೆ ನಡೆಯಲಿದೆ. ಈ ಪ್ರಯುಕ್ತ ಗುರುವಾರ ತಾಳತ್ತಮನೆಯ ನೇತಾಜಿ ಯುವಕ ಮಂಡಲ ವತಿಯಿಂದ ಹಸಿರು ಹೊರೆ ಕಾಣಿಕೆ ಮೆರವಣಿಗೆ ನಡೆಯಿತು

    ಮೆರವಣಿಗೆಯಲ್ಲಿ ಗ್ರಾಮದ ಜನರು, ಹೆಚ್ಚಿನ ಭಕ್ತರು ಪಾಲ್ಗೊಂಡಿದ್ದರು. ಶ್ರದ್ಧಾಭಕ್ತಿ ಕೇಂದ್ರವಾಗಿ 1 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ದೇವಾಲಯದ ಅಭಿವೃದ್ಧಿಗೆ ವಿವಿಧ ಸಂಘ-ಸಂಸ್ಥೆಗಳು, ಜನಪ್ರತಿನಿಧಿಗಳು, ಗ್ರಾಮಸ್ಥರು, ದಾನಿಗಳು ಹಾಗೂ ಸಾರ್ವಜನಿಕರು ಧನಸಹಾಯ ನೀಡಿದ್ದಾರೆ.

    ಕಾಡು ಪ್ರದೇಶದಲ್ಲಿ ಪತ್ತೆಯಾದ ಲಿಂಗದ ಬಗ್ಗೆ ಅಷ್ಟಮಂಗಲ ಪ್ರಶ್ನೆ ಕೇಳಿದಾಗ ಲಿಂಗರೂಪಿಣಿ ದುರ್ಗಾಭಗವತಿ ಎಂದು ತಿಳಿದು ಬಂದಿತ್ತು. ಇದೀಗ ತಾಳತ್ತಮನೆಯಲ್ಲಿ ದೊಡ್ಡ ದೇವಾಲಯ ನಿರ್ಮಾಣಗೊಂಡಿದ್ದು, ಫೆ.7 ರಿಂದ 12ರವರೆಗೆ ವಿವಿಧ ಧಾರ್ಮಿಕ ಪೂಜಾ ಕಾರ್ಯಗಳು ಜರುಗಲಿವೆ.
    7ರಂದು ಸಂಜೆ 5 ಗಂಟೆಗೆ ತಂತ್ರಿಗಳ ಆಗಮನವಾಗಲಿದ್ದು, ದೇವತಾ ಪ್ರಾರ್ಥನೆ, ಆಚಾರ್ಯವರಣ, ಪುಣ್ಯಾಹವಾಚನ, ರಾಕ್ಷೋಘ್ನ ಹೋಮ, ವಾಸ್ತುಹೋಮ, ವಾಸ್ತುಬಲಿ, ಪುಣ್ಯಹಂತ ನಡೆಯಲಿದೆ. ಪುತ್ತೂರಿನ ವೈದೇಹಿ ವೈಷ್ಣವಿ ಮಹಿಳಾ ಭಜನಾ ಸಂಘದಿಂದ ಭಜನೆ ನಡೆಯಲಿದೆ. 6.30 ಗಂಟೆಗೆ ಬ್ರಹ್ಮಶ್ರೀ ಕುಂಟಾರು ರವೀಶ್ ತಂತ್ರಿ ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದು, ಸುಳ್ಯದ ಶ್ರೀ ಕೇಶವ ಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನದ ಅಧ್ಯಕ್ಷ ಬ್ರಹ್ಮಶ್ರೀ ವೇ.ಮೂ.ಪುರೋಹಿತ ನಾಗರಾಜ್ ಭಟ್ ಉಪನ್ಯಾಸ ನೀಡಲಿದ್ದಾರೆ. ಸಂಜೆ 7.30ಕ್ಕೆ ರವಿ ಭೂತನಕಾಡು ಮತ್ತು ತಂಡದಿಂದ ಭಕ್ತಿ ಸುಧೆ ಗಾಯನ ನಡೆಯಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts