More

    ಮುಂಡದಿಂದ ಆಂತರಿಕವಾಗಿ ಬೇರ್ಪಟ್ಟ ಶಿರವನ್ನು ಯಶಸ್ವಿಯಾಗಿ ಜೋಡಿಸಿದ ವೈದ್ಯರು…!

    ಇಸ್ರೇಲ್​​: ದೇಹದಿಂದ ಆಂತರಿಕವಾಗಿ ಬೇರ್ಪಟ್ಟ ಬಾಲಕನ ತಲೆಯನ್ನು ಯಶಸ್ವಿಯಾಗಿ ಮರು ಜೋಡಿಸಿರುವ ಘಟನೆ ಇಸ್ರೇಲ್​ನಲ್ಲಿ ನಡೆದಿದೆ.

    ಇದನ್ನೂ ಓದಿ: VIDEO | ಮಾಲ್‌ನಲ್ಲಿ ಬೆಂಕಿ, ಅಪಾಯದಿಂದ ಪಾರಾಗಲು 3ನೇ ಮಹಡಿಯಿಂದ ಜಿಗಿದ ವ್ಯಕ್ತಿ

    ಹಸನ್​(12) ಎಂಬ ಬಾಲಕ ಬೈಕ್‌ನಲ್ಲಿ ಹೋಗುತ್ತಿದ್ದಾಗ ಕಾರಿಗೆ ಡಿಕ್ಕಿ ಹೊಡೆದು ಪ್ರಜ್ಞೆ ತಪ್ಪಿ ಬಿದ್ದಿದ್ದ. ಕೂಡಲೇ ಆತನನ್ನು ಸಮೀಪದ ಮೆಡಿಕಲ್ ಸೆಂಟರ್‌ಗೆ ಕರೆದೊಯ್ದು ಪರೀಕ್ಷಿಸಿದಾಗ ಅಲ್ಲಿನ ವೈದ್ಯರು ಬಾಲಕನ ಕುತ್ತಿಗೆ ಬುಡವು ಬೆನ್ನುಮೂಳೆಯ ಮೇಲಿನ ಕಶೇರುಖಂಡದಿಂದ ಬೇರ್ಪಟ್ಟಿರುವುದನ್ನು ಗಮನಿಸಿದ್ದಾರೆ. ಈ ಸ್ಥಿತಿಯನ್ನು ದ್ವಿಪಕ್ಷೀಯ ಅಟ್ಲಾಂಟೊ ಆಕ್ಸಿಪಿಟಲ್ ಜಂಟಿ ಡಿಸ್ಲೊಕೇಶನ್ ಎಂದು ಕರೆಯಲಾಗುತ್ತದೆ.

    ಕೂಡಲೇ ವೈದ್ಯರು, ಆತನಿಗೆ ಅಪರೂಪದ ಶಸ್ತ್ರಚಿಕಿತ್ಸೆಗೆ ಮುಂದಾಗಿದ್ದು, ಇಲ್ಲಿ ಬಾಲಕನ ಬದುಕುಳಿಯುವಿಕೆಯ ಪ್ರಮಾಣವು ಕೇವಲ 50% ಆಗಿತ್ತು. ಆದರೆ ಶಸ್ತ್ರಚಿಕಿತ್ಸಕರು ತಂಡವು ಹುಡುಗನ ಜೀವವನ್ನು ಉಳಿಸುವುದನ್ನು ಸವಾಲಾಗಿ ಸ್ವೀಕರಿಸಿ, ದೀರ್ಘ ಶಸ್ತ್ರಚಿಕಿತ್ಸೆ ನಡೆಸಿ ಕೊನೆಗೂ ಬಾಲಕನ ತಲೆಯನ್ನು ಯಶಸ್ವಿಯಾಗಿ ಮರು ಜೋಡಿಸಿ ಆತನ ಜೀವ ಉಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಇದನ್ನೂ ಓದಿ: ಗ್ರಾಹಕರಿಗೆ ತಟ್ಟಲಿದೆ ಹಾಲಿನ ದರ ಏರಿಕೆಯ ಬಿಸಿ? ಸಿಎಂ ಜತೆ ಹಾಲು ಒಕ್ಕೂಟದ ಮಹತ್ವದ ಸಭೆ, ಸಂಜೆ ತೀರ್ಮಾನ ಸಾಧ್ಯತೆ

    ಈ ಕುರಿತು ಮೂಳೆಚಿಕಿತ್ಸಕ ತಜ್ಞ ಡಾ. ಓಹಾದ್ ಐನಾವ್ ಮಾತನಾಡಿದ್ದು, ಶಸ್ತ್ರಚಿಕಿತ್ಸೆಯ ವಿಧಾನವು ಅತ್ಯಂತ ಸವಾಲಿನ ಕೆಲಸದ್ದಾಗಿತ್ತು. ಅಂತಹ ಸಂದರ್ಭಗಳಲ್ಲಿ ಮೆದುಳಿಗೆ ರಕ್ತದ ಹರಿವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯವಾಗಿತ್ತು. ಹಾನಿಗೊಳಗಾದ ತಲೆ ಬುರುಡೆಯ ತಳಭಾಗದ ಪ್ರದೇಶದಲ್ಲಿ ಪ್ರಮುಖ ರಕ್ತನಾಳಗಳು ಹಾಗೇ ಉಳಿದುಕೊಂಡಿದ್ದವು. ದೀರ್ಘ ಪ್ರಕ್ರಿಯೆಯ ಹೊರತಾಗಿಯೂ, ಬಾಲಕನ ಕುತ್ತಿಗೆ ಯಾವುದೇ ವಸ್ತುವಿನ ಸಹಾಯವಿಲ್ಲದೇ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದ್ದಾರೆ.

    ಈ ಪವಾಡದ ಶಸ್ತ್ರಚಿಕಿತ್ಸೆಯು ವೈದ್ಯಕೀಯ ತಂತ್ರಜ್ಞಾನದಲ್ಲಿನ ಪ್ರಗತಿಗಳು ಮತ್ತು ಆರೋಗ್ಯ ವೃತ್ತಿಪರರ ಸಮರ್ಪಣೆಗೆ ಸಾಕ್ಷಿಯಾಗಿದೆ. ಆಂತರಿಕ ಶಿರಚ್ಛೇದನದ ನಂತರ ಹುಡುಗನ ತಲೆಯನ್ನು ಯಶಸ್ವಿಯಾಗಿ ಮರುಜೋಡಿಸುವುದು ಗಮನಾರ್ಹ ಸಾಧನೆಯಾಗಿದ್ದು ಅದು ಜೀವಗಳನ್ನು ಉಳಿಸುವಲ್ಲಿ ನಾವೀನ್ಯತೆ ಮತ್ತು ಪರಿಣತಿಯ ಶಕ್ತಿಯನ್ನು ಪ್ರದರ್ಶಿಸುತ್ತದೆ.(ಏಜೇನ್ಸಿಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts