More

    ಅಪ್ಪನ ಬೆನ್ನಿಗೆ ಚೂರಿ ಇಟ್ಟ ಆ ಹುಡುಗ, “ಬೈಕ್ ಓಡಿಸು” ಅಂದ; ಮುಂದೇನಾಯಿತು..

    ಕೊರಟ್ಟಿ: ಕೇರಳದ ತ್ರಿಶ್ಶೂರ್ ಜಿಲ್ಲೆಯ ಪೊಂಗಾಮ್ ಎಂಬಲ್ಲಿ ಅಮ್ಮಂದಿರ ದಿನವೇ ನಡೆದ ವಿಲಕ್ಷಣ ಘಟನೆ ಇದು. ಲಾಕ್​ಡೌನ್ ಇದ್ದ ಕಾರಣ ಯಾರೂ ಮನೆಯಿಂದ ಹೊರಗೆ ಇಳಿಯುವಂತಿಲ್ಲ. ಆದರೂ, ಅಪ್ಪ-ಮಗ ಬೈಕ್​ನಲ್ಲಿ ಬರುತ್ತಿರುವುದನ್ನು ಪೊಲೀಸರು ಗಮನಿಸಿದರು. ಸ್ಥಳೀಯ ವೃತ್ತ ನಿರೀಕ್ಷಕ ಬಿ.ಕೆ.ಅರುಣ್ ತಪಾಸಣೆಗಾಗಿ ಆ ಅಪ್ಪ-ಮಗನನ್ನು ತಡೆದಾಗ ಅವರು ಹೇಳಿದ ಕಾರಣ ಕೇಳಿ ಬೆಚ್ಚಿ ಬಿದ್ದರು. ಆ ಸನ್ನಿವೇಶ ಹೀಗಿತ್ತು…

    ವೃತ್ತ ನಿರೀಕ್ಷಕ ಬಿ.ಕೆ.ಅರುಣ್​- ಎಲ್ಲಿ ನಿಮ್ಮ ಟ್ರಾವೆಲ್ ಪಾಸ್?
    ಅಪ್ಪನಿಂದ ಉತ್ತರ ಬರದೇ ಇದ್ದಾಗ ಅವರನ್ನೊಮ್ಮೆ ಅವಲೋಕಿಸಿದರು ಅರುಣ್. ಆ ಅಪ್ಪನ ಮುಖದ ತುಂಬಾ ಬೆವರು. ಏನೋ ನಡೆಯುತ್ತಿದೆ ಎಂದು ಕೊಂಡು ಅಪ್ಪನ ಜತೆಗಿದ್ದ ಮಗನ ಕಡೆಗೊಮ್ಮೆ ನೋಡಿದರು. ಆತ ಮುಗುಮ್ಮಾಗಿ ಅಪ್ಪನ ಬೆನ್ನಿಗೆ ತಾಗಿ ಕುಳಿತಿದ್ದ. ಇಬ್ಬರನ್ನೂ ಬೈಕ್​ನಿಂದ ಕೆಳಗಿಳಿಯುವಂತೆ ಹೇಳಿದ್ರು. ನಂತರ ಸಮೀಪದಲ್ಲೇ ಇದ್ದ ಪೊಲೀಸ್ ಠಾಣೆಗೆ ಕರೆದೊಯ್ದರು. ಅಲ್ಲಿ, ಏನಾಯಿತು ಎಂದು ಕೇಳಿದ್ರು. ಆಗ ಅಪ್ಪ ಹೇಳಿದ್ದಿಷ್ಟು-

    ಇದನ್ನೂ ಓದಿ: ಕರೊನಾ ಬಿಕ್ಕಟ್ಟು ನಿರ್ವಹಣೆಗಾಗಿ 20 ಲಕ್ಷ ಕೋಟಿ ರೂ.ವಿಶೇಷ ಆರ್ಥಿಕ ಪ್ಯಾಕೇಜ್​ ಘೋಷಿಸಿದ ಪ್ರಧಾನಿ ಮೋದಿ

    “ನನ್ನ ಮಗ ಈತ. ಅಮ್ಮ ಅಂದರೆ ಆಯಿತು. ಅಷ್ಟೊಂದು ಹಚ್ಚಿಕೊಂಡಿದ್ದಾನೆ. ಈಗ ಕೆಲವು ದಿನಗಳ ಹಿಂದೆ ಅಮ್ಮನಿಗೆ ಸ್ವಲ್ಪ ಆರೋಗ್ಯ ಸರಿ ಇಲ್ಲದ ಕಾರಣ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದೇವೆ. ಅಂದಿನಿಂದ ನಿತ್ಯವೂ ನಾನೇ ಅಡುಗೆ ಮಾಡುತ್ತಿದ್ದೇನೆ. ಇಂದು ಇಡ್ಲಿ ಮಾಡಿ ಕೊಟ್ಟಿದ್ದೇನೆ. ಆದರೆ ಅದು ಆತನಿಗೆ ಇಷ್ಟವಾಗಿಲ್ಲ. ಅವನಿಗೆ ಅಮ್ಮ ಮಾಡಿಕೊಡುವ ಬರ್ಗರ್​ ಮತ್ತು ಕೋಲಾ ಕುಡಿಯದೇ ಇದ್ದರೆ ಸಮಾಧಾನವೇ ಇಲ್ಲ. ಅದು ಆತನ ಇಷ್ಟದ ಆಹಾರ. ಕೆಲವು ದಿನಗಳಿಂದ ಬರ್ಗರ್ ಮತ್ತು ಕೋಲಾ ಸಿಗದೇ ಇದ್ದ ಕಾರಣ ಸಿಡಿಮಿಡಿಗೊಂಡಿದ್ದ. ಇಂದು ಅಮ್ಮಂದಿರ ದಿನವಾದ ಕಾರಣ ಆತನ ಸ್ನೇಹಿತರೆಲ್ಲ ಅಮ್ಮನ ಜತೆಗಿರುವ ಫೋಟೊಗಳನ್ನು ಸಾಮಾಜಿಕ ತಾಣಗಳಲ್ಲಿ ಹಾಕಿಕೊಂಡಿದ್ದಾರೆ. ಹೀಗಾಗಿ ಬೆಳಗ್ಗೆಯಿಂದಲೇ ಆತ ಸಿಡಿಮಿಡಿಗೊಂಡಿದ್ದ. ತಾಯಿಯನ್ನು ಭೇಟಿ ಮಾಡಬೇಕು ಎಂದು ಒತ್ತಾಯಿಸುತ್ತಿದ್ದ.

    ಲಾಕ್​ಡೌನ್ ಆದ ಕಾರಣ ಆಸ್ಪತ್ರೆಗೆ ಹೋಗಲಾಗದು. ಅಮ್ಮನನ್ನು ಭೇಟಿ ಮಾಡುವುದು ಕಷ್ಟ ಎಂಬುದನ್ನು ಮಗನಿಗೆ ಅರ್ಥ ಮಾಡಿಸಿಕೊಡಲು ಪ್ರಯತ್ನಿಸಿದ್ದೆ. ಆದರೆ ಆತ ಸಮಾಧಾನಗೊಳ್ಳಲಿಲ್ಲ. ನೇರವಾಗಿ ಅಡುಗೆ ಮನೆಗೆಹೋಗಿ ಚಾಕು ತಗೊಂಡು ಬಂದ. ನನ್ನನ್ನು ಬೆದರಿಸಿ, ಬೈಕ್​ನಲ್ಲಿ ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗು ಎಂದ. ಆ ಬೆದರಿಕೆಯಿಂದ ಭಯಭೀತನಾಗಿರುವೆ.”

    ಇದನ್ನೂ ಓದಿ: ಸ್ಥಳೀಯ ಉತ್ಪನ್ನಗಳ ಮಹತ್ವ ತಿಳಿಸಿದೆ ಕೊವಿಡ್​-19, ಸ್ವಾವಲಂಬಿಯಾಗುವುದೇ ಗುರಿ: ಪ್ರಧಾನಿ ಮೋದಿ

    ಅಪ್ಪನ ಮಾತು ಕೇಳಿದ ವೃತ್ತ ನಿರೀಕ್ಷಕ ಅರುಣ್​ ಕೂಡಲೇ ಅವರನ್ನು ಹೊರಗೆ ಕಳುಹಿಸಿ, ಮಗನನ್ನು ಒಳಗೆ ಕರೆಯಿಸಿಕೊಂಡರು. ಆತ ಹೇಳಿದ್ದನ್ನೂ ಕೇಳಿದ ಬಳಿಕ ಮನವೊಲಿಸಿದರು. ತಂದೆ ಹೇಳಿದ ಮಾತನ್ನು ಕೇಳಿ ಅನುಸರಿಸಬೇಕು. ಈಗ ಪರಿಸ್ಥಿತಿ ಸರಿ ಇಲ್ಲ ಎಂಬುದನ್ನೂ ಬಾಲಕನಿಗೆ ವಿವರಿಸಿ ಹೇಳಿದರು. ನಂತರ, ಅರೌಂಡ್​ ದ ವರ್ಲ್ಡ್​ ಇನ್ 80 ಡೇಸ್​ ಮತ್ತು ರೋಬಿನ್​ಸನ್​ ಕ್ರೂಸೋ ಎಂಬ ಎರಡು ಪುಸ್ತಕಗಳ ಓದಿ ವಿಮರ್ಶೆ ಬರೆದುಕೊಟ್ಟರೆ ಬರ್ಗರ್ ಕೊಡುವುದಾಗಿ ಹೇಳಿ ಮನೆಗೆ ಕಳುಹಿಸಿಕೊಟ್ಟಿದ್ದರು. ಮಾರನೇ ದಿನ ಠಾಣೆಗೆ ಬರುವಂತೆ ಸೂಚಿಸಿದಾಗ ಅಪ್ಪ-ಮಗ ಇಬ್ಬರೂ ಹಾಜರಾಗಿದ್ದರು. ಮಗನಲ್ಲಿ ಬದಲಾವಣೆ ಆಗಿರುವ ವಿಚಾರವನ್ನು ಅವರು ವೃತ್ತ ನಿರೀಕ್ಷಕರಿಗೆ ತಿಳಿಸಿದರು. (ಏಜೆನ್ಸೀಸ್​)

    54 ವರ್ಷದ ಮಹಿಳೆಗೆ ಅವಳಿ ಮಕ್ಕಳು, ಪತಿಗೆ 64 ವರ್ಷ- ದಂಪತಿಯ ಬದುಕೇ ಒಂದು ಕರುಣಾಜನಕ ಕಥೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts