More

    ಮೆಲ್ಬೋರ್ನ್ ಟೆಸ್ಟ್‌ಗೆ ‘ಬಾಕ್ಸಿಂಗ್ ಡೇ’ ಹೆಸರು ಹೇಗೆ ಬಂತು ಗೊತ್ತೇ?

    ಮೆಲ್ಬೋರ್ನ್: ಆಸ್ಟ್ರೇಲಿಯಾದ ಮೆಲ್ಬೋರ್ನ್‌ನಲ್ಲಿ ಪ್ರತಿ ವರ್ಷ ಡಿಸೆಂಬರ್ 26ರಂದು ಆರಂಭಗೊಳ್ಳುವ ಟೆಸ್ಟ್ ಪಂದ್ಯವನ್ನು ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯ ಎಂದು ಕರೆಯಲಾಗುತ್ತದೆ. ಇದು ಸಾಕಷ್ಟು ಕ್ರಿಕೆಟ್ ಪ್ರೇಮಿಗಳಿಗೆ ಅಚ್ಚರಿ, ಗೊಂದಲ ಹುಟ್ಟಿಸುತ್ತ ಬಂದಿದೆ. ಕ್ರಿಕೆಟ್‌ಗೂ, ಬಾಕ್ಸಿಂಗ್‌ಗೂ ಏನು ಸಂಬಂಧ ಎಂದು ಹಲವರು ಆಗಾಗ ಪ್ರಶ್ನೆಗಳನ್ನು ಎತ್ತಿದ್ದಾರೆ. ಹಾಗಾದರೆ, ಮೆಲ್ಬೋರ್ನ್ ಟೆಸ್ಟ್ ಪಂದ್ಯವನ್ನು ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯ ಎಂದು ಯಾಕೆ ಕರೆಯುತ್ತಾರೆ ಎಂಬುದಕ್ಕೆ ಇಲ್ಲಿದೆ ವಿವರಣೆ.

    ನಿಜಕ್ಕಾದರೆ, ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯಕ್ಕೂ ಬಾಕ್ಸಿಂಗ್ ಆಟಕ್ಕೂ ‘ಬಾಕ್ಸಿಂಗ್ ಡೇ’ಗೂ ಸಂಬಂಧವಿಲ್ಲ. ಕ್ರಿಸ್‌ಮಸ್ ದಿನ ಪಡೆಯುವ ಗಿಫ್ಟ್ ‘ಬಾಕ್ಸ್’ಗಳನ್ನು ಮರುದಿನ ತೆರೆಯುವುದರಿಂದ ಕಾಮನ್ವೆಲ್ತ್ ದೇಶಗಳಲ್ಲಿ ಆ ದಿನವನ್ನು ‘ಬಾಕ್ಸಿಂಗ್ ಡೇ’ ಎನ್ನಲಾಗುತ್ತದೆ. ಹೀಗಾಗಿ ಆ ದಿನದಂದು ಆರಂಭಗೊಳ್ಳುವ ಟೆಸ್ಟ್ ಪಂದ್ಯವನ್ನು ಬಾಕ್ಸಿಂಗ್ ಡೇ ಟೆಸ್ಟ್ ಎಂದು ಕರೆಯಲಾಗುತ್ತದೆ.

    ಇದನ್ನೂ ಓದಿ: ನಾಲ್ಕೂವರೆ ತಿಂಗಳಿನಿಂದ ಪತ್ನಿಯನ್ನು ನೋಡದೆ ಚಡಪಡಿಸುತ್ತಿದ್ದಾರೆ ಸ್ಟೀವನ್ ಸ್ಮಿತ್!

    1950ರಲ್ಲಿ ಮೊದಲ ಬಾರಿಗೆ ಮೆಲ್ಬೋರ್ನ್‌ನಲ್ಲಿ ಬಾಕ್ಸಿಂಗ್ ಡೇ ಟೆಸ್ಟ್ ನಡೆದಿತ್ತು. 1980ರಿಂದ ಪ್ರತಿವರ್ಷ ಮೆಲ್ಬೋರ್ನ್ ಮೈದಾನದಲ್ಲೇ ಬಾಕ್ಸಿಂಗ್ ಡೇ ಟೆಸ್ಟ್ ನಡೆಯುವ ಸಂಪ್ರದಾಯವಿದೆ. ಈ ಪೈಕಿ ಪ್ರತಿ 4 ವರ್ಷಕ್ಕೊಮ್ಮೆ ಆಶಸ್ ಸರಣಿಯಲ್ಲಿ ಬಾಕ್ಸಿಂಗ್ ಡೇ ಟೆಸ್ಟ್ ನಡೆಯುತ್ತದೆ. 1989ರಲ್ಲೊಮ್ಮೆ ಮಾತ್ರ ಮೆಲ್ಬೋರ್ನ್‌ನಲ್ಲಿ ಆಸೀಸ್-ಲಂಕಾ ನಡುವೆ ಬಾಕ್ಸಿಂಗ್ ಡೇಯಂದು ಏಕದಿನ ಪಂದ್ಯ ನಡೆದಿತ್ತು. ಇನ್ನು ಕಾಮನ್ವೆಲ್ತ್ ದೇಶಗಳಾದ ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲೆಂಡ್‌ನಲ್ಲೂ ಡಿಸೆಂಬರ್ 26ರಂದು ಆರಂಭಗೊಳ್ಳುವ ಟೆಸ್ಟ್ ಪಂದ್ಯವನ್ನು ಬಾಕ್ಸಿಂಗ್ ಡೇ ಟೆಸ್ಟ್ ಎಂದೇ ಕರೆಯಲಾಗುತ್ತದೆ.

    ಬಾಕ್ಸಿಂಗ್ ಡೇ ಟೆಸ್ಟ್ ದಾಖಲೆ
    *ಭಾರತ: 8, ಜಯ: 1, ಸೋಲು: 5, ಡ್ರಾ: 2
    *ಆಸ್ಟ್ರೇಲಿಯಾ: 44, ಜಯ: 25, ಸೋಲು: 9, ಡ್ರಾ: 10,

    ಮೆಲ್ಬೋರ್ನ್ ನಿರ್ವಹಣೆ
    *ಭಾರತ: 13, ಜಯ: 3, ಸೋಲು: 8, ಡ್ರಾ: 2
    *ಆಸ್ಟ್ರೇಲಿಯಾ: 112, ಜಯ: 64, ಸೋಲು: 31, ಡ್ರಾ: 17

    ಇದನ್ನೂ ಓದಿ: ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲೂ ಕನ್ನಡಿಗ ಕೆಎಲ್ ರಾಹುಲ್‌ಗೆ ಸ್ಥಾನವಿಲ್ಲ; ಅಭಿಮಾನಿಗಳ ಆಕ್ರೋಶ

    ಈ ಬಾರಿ ಬಾಕ್ಸಿಂಗ್ ಡೇಯಂದು 3 ಟೆಸ್ಟ್ ಆರಂಭ
    ಮೆಲ್ಬೋರ್ನ್‌ನಲ್ಲಂತೂ ಪ್ರತಿ ವರ್ಷ ಬಾಕ್ಸಿಂಗ್ ಡೇಯಂದು ಟೆಸ್ಟ್ ಪಂದ್ಯ ಆರಂಭಗೊಳ್ಳುವ ಸಂಪ್ರದಾಯ ಇದೆ. ಈ ಬಾರಿ ಬಾಕ್ಸಿಂಗ್ ಡೇಯಂದು ಒಟ್ಟು 3 ಟೆಸ್ಟ್ ಆರಂಭಗೊಳ್ಳುತ್ತಿವೆ. ಮೌಂಟ್ ಮೌಂಗನುಯಿಯಲ್ಲಿ ಆತಿಥೇಯ ನ್ಯೂಜಿಲೆಂಡ್ ಮತ್ತು ಪಾಕಿಸ್ತಾನ ತಂಡಗಳ ನಡುವೆ ಟೆಸ್ಟ್ ಸರಣಿಯ ಮೊದಲ ಪಂದ್ಯ ಹಾಗೂ ಸೆಂಚುರಿಯನ್‌ನಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ ಮತ್ತು ಶ್ರೀಲಂಕಾ ತಂಡಗಳ ನಡುವೆ ಸರಣಿಯ ಮೊದಲ ಟೆಸ್ಟ್ ಪಂದ್ಯ ನಡೆಯಲಿವೆ. ಈ ಮೂರೂ ಸರಣಿಗಳು ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ನ ಭಾಗವಾಗಿದ್ದು, ಫೈನಲ್‌ಗೇರುವ ನಿಟ್ಟಿನಲ್ಲಿ ಆಸೀಸ್, ಭಾರತ, ನ್ಯೂಜಿಲೆಂಡ್‌ಗೆ ಪ್ರಮುಖವೆನಿಸಿದೆ.

    ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯಗಳು:
    ಮೆಲ್ಬೋರ್ನ್: ಭಾರತ-ಆಸ್ಟ್ರೇಲಿಯಾ; ಆರಂಭ: ಬೆಳಗ್ಗೆ 5.00
    ಮೌಂಟ್ ಮೌಂಗನುಯಿ: ನ್ಯೂಜಿಲೆಂಡ್-ಪಾಕಿಸ್ತಾನ; ಬೆಳಗ್ಗೆ 3.30
    ಸೆಂಚುರಿಯನ್: ದಕ್ಷಿಣ ಆಫ್ರಿಕಾ-ಶ್ರೀಲಂಕಾ; ಮಧ್ಯಾಹ್ನ 1.30.

    ಹೂವುಗಳೆಂದರೆ ಇಷ್ಟ ಎಂದ ಅಥಿಯಾ ಶೆಟ್ಟಿ, ಗುಲಾಬಿ ಕಳುಹಿಸಿದ್ರು ಕೆಎಲ್ ರಾಹುಲ್!

    ಗೌತಮ್ ಗಂಭೀರ್ ಕ್ಯಾಂಟೀನ್‌ನಲ್ಲಿ 1 ರೂಪಾಯಿಗೆ ಊಟ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts