More

    ರೋಡ್​ ರೇಜ್​ ನಾಟಕವಾಡಿ ವಾಹನಗಳನ್ನು ಕದಿಯುತ್ತಿದ್ದ ಬೌನ್ಸರ್​ಗಳ ಗತಿ ಏನಾಯಿತು ನೋಡಿ…

    ನವದೆಹಲಿ: ದೆಹಲಿಯ ಲೇಡಿ ಹರ್ಡಿಂಗೆ ಆಸ್ಪತ್ರೆಯಲ್ಲಿ ಭದ್ರತಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಮೂವರು ಮಾಜಿ ಬೌನ್ಸರ್​ಗಳು ರೋಡ್​ ರೇಜ್​ (ರಸ್ತೆ ಕ್ರೋಧ-ಮೊತ್ತೊಬ್ಬ ವಾಹನ ಚಾಲಕನ ಕಿಡಿಗೇಡಿತನದಿಂದ ವಾಹನದ ಚಾಲಕನೊಬ್ಬ ಸಿಟ್ಟಾಗುವುದು) ನಾಟಕವಾಡಿ ವಾಹನಗಳನ್ನು ಕದಿಯುವುದನ್ನೇ ಕಾಯಕವನ್ನಾಗಿ ಮಾಡಿಕೊಂಡಿದ್ದರು. ಇದೀಗ ಅವರು ದೆಹಲಿ ಪೊಲೀಸರ ಕೈಗೆ ಸಿಕ್ಕಿಬಿದ್ದು ಜೈಲು ಪಾಲಾಗಿದ್ದಾರೆ.

    ದೀಪಕ್​ ದಲಾಲ್​, ಬ್ರಿಜ್​ ಬಿಹಾರಿ ಮತ್ತು ನಿರಾಲಾ ಬಂಧಿತರು. ಈ ಹಿಂದೆ ಬೌನ್ಸರ್​ಗಳಾಗಿ ಕೆಲಸ ಮಾಡುತ್ತಿದ್ದ ಇವರನ್ನು ಖಾಸಗಿ ಗುತ್ತಿಗೆದಾರನೊಬ್ಬ ಲೇಡಿ ಹರ್ಡಿಂಗೆ ಆಸ್ಪತ್ರೆಯ ಭದ್ರತಾ ವಿಭಾಗಕ್ಕೆ ನೇಮಕ ಮಾಡಿಕೊಂಡಿದ್ದ. ಗುತ್ತಿಗೆ ಅವಧಿ ಮುಗಿದ ಬಳಿಕ ಗುತ್ತಿಗೆದಾರ ಇವರನ್ನು ಕೆಲಸದಿಂದ ವಜಾ ಮಾಡಿದ್ದ. ಆನಂತರದಲ್ಲಿ ಈ ಮೂವರು ವಾಹನ ಕದಿಯುವುದನ್ನೇ ವೃತ್ತಿ ಮಾಡಿಕೊಂಡಿದ್ದರು ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

    ಸೋಮವಾರ ಮಧ್ಯಾಹ್ನ ಈ ಮೂವರು ಕಾರೊಂದನ್ನು ನಿಲ್ಲಿಸಿಕೊಂಡು ಶಾಲಿಮಾರ್​ ಪ್ಯಾಲೇಸ್​ ಬ್ಯಾಂಕ್ವೆಟ್​ ಹಾಲ್​ ಬಳಿ ನಿಂತಿದ್ದರು. ಈ ಸಂದರ್ಭದಲ್ಲಿ ಅದೇ ಮಾರ್ಗವಾಗಿ ಬಂದ ಎಕ್ಸ್​ಯುವಿ-500 ವಾಹವನ್ನು ಗುರಿಯಾಗಿಸಿಕೊಂಡು ಅದನ್ನು ಬೆನ್ನಟ್ಟಿದ್ದರು. ಕೊನೆಗೂ ಆ ವಾಹನವನ್ನು ನಿಲ್ಲಿಸುವಲ್ಲಿ ಸಫಲರಾದ ಅವರು, ತಮ್ಮ ವಾಹನಕ್ಕೆ ತಾಗಿಸಿಕೊಂಡು ಹೋಗಿದ್ದಾಗಿ ಹೇಳಿ ಚಾಲಕ ಬ್ರಿಜ್​ ಮೋಹನ್​ ಶ್ರೀವಾಸ್ತವ ಜತೆ ಜಗಳ ತೆಗೆದಿದ್ದರು.

    ಇದನ್ನೂ ಓದಿ: ಪ್ರವಾಹದ ನಡುವೆ ತುಂಬು ಗರ್ಭಿಣಿಯನ್ನು ಆಸ್ಪತ್ರೆಗೆ ಸಾಗಿಸಿದ್ದು ಹೀಗೆ ನೋಡಿ…

    ಜಗಳವಾಡುತ್ತಿರುವಂತೆ ಮೂವರು ಬೌನ್ಸರ್​ಗಳ ಪೈಕಿ ಒಬ್ಬಾತ ಮುಂಬಾಗಿಲು ತೆಗೆದು ಚಾಲಕನ ಸ್ಥಾನದಲ್ಲಿದ್ದ ಬ್ರಿಜ್​ ಮೋಹನ್​ ಶ್ರೀವಾಸ್ತವರನ್ನು ಬಲವಂತವಾಗಿ ಪಕ್ಕಕ್ಕೆ ಸರಿಸಿ ವರ್ತುಲ ರಸ್ತೆಯಲ್ಲಿ ನಿರಹಂಕಾರಿ ಮಂಡಲ್​ ಗೇಟ್​ನತ್ತ ತೆರಳಿದ್ದರು. ಇಲ್ಲಿನ ನಿರ್ಜನ ಪ್ರದೇಶದಲ್ಲಿ ವಾಹನದ ಮಾಲೀಕನನ್ನು ಹೊರದಬ್ಬಿದ ಕಾರುಗಳ್ಳರು ವಾಹನ ಸಮೇತ ಪರಾರಿಯಾಗಿದ್ದರು.

    ಅದೃಷ್ಟವಶಾತ್​ ಬ್ರಿಜ್​ ಮೋಹನ್​ ಶ್ರೀವಾಸ್ತವ ಬಳಿಯಿದ್ದ ಮೊಬೈಲ್​ ಫೋನ್​ ಕಸಿದುಕೊಳ್ಳಲು ಅವರು ಮರೆತಿದ್ದರು. ಹಾಗಾಗಿ ಬ್ರಿಜ್​ ಮೋಹನ್​ ಶ್ರೀವಾಸ್ತವ ತಕ್ಷಣವೇ ಪೊಲೀಸರಿಗೆ ಫೋನ್​ ಮಾಡಿ ಘಟನೆಯನ್ನು ವಿವರಿಸಿದ್ದರು.

    ತಕ್ಷಣವೇ ಕಾರ್ಯಾಚರಣೆ ಆರಂಭಿಸಿದ ಪೊಲೀಸರು ಬೌನ್ಸರ್​ಗಳು ಕದ್ದಿದ್ದ ಎಕ್ಸ್​ಯುವಿ-500ನ ಬೆನ್ನುಬಿದ್ದಿದ್ದರು. ಸಾಕಷ್ಟು ದೂರ ಚೇಸ್​ ಮಾಡಿದರೂ ವಾಹನವನ್ನು ಹಿಂದಿಕ್ಕಲು ಅವರಿಗೆ ಸಾಧ್ಯವಾಗಿರಲಿಲ್ಲ. ಹೀಗಾಗಿ ಅಕ್ಕಪಕ್ಕದ ಎಲ್ಲ ಪೊಲೀಸ್​ ಠಾಣೆಗಳಿಗೆ ವಾಹನದ ನೋಂದಣಿ ಸಂಖ್ಯೆ ರವಾನಿಸಿ, ನಾಕಾಬಂದಿ ಏರ್ಪಡಿಸಿ ಕೊನೆಗೂ ಕಾರುಗಳ್ಳರನ್ನು ಹಿಡಿಯುವಲ್ಲಿ ಸಫಲರಾದರು.

    ಅಯೋಧ್ಯೆ ರಾಮಮಂದಿರದಲ್ಲಿ ಶಿವನಿಗೂ ಸಿಗಲಿ ಸ್ಥಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts