More

    ಎರಡು ವರ್ಷಗಳ ಜ್ಞಾನಪೀಠ ಪ್ರಶಸ್ತಿ ಒಟ್ಟಿಗೇ ಪ್ರಕಟ: ಯಾರ್ಯಾರಿಗೆ..? ಇಲ್ಲಿದೆ ವಿವರ..

    ನವದೆಹಲಿ: 2020 ಮತ್ತು 2021ನೇ ಸಾಲಿನ ಜ್ಞಾನಪೀಠ ಪ್ರಶಸ್ತಿಗಳೂ ಇಂದು ಒಟ್ಟಿಗೇ ಪ್ರಕಟವಾಗಿವೆ. ಅಸ್ಸಾಂ ಲೇಖಕ ನೀಲಮಣಿ ಫೂಕನ್ ಅವರು 56ನೇ (2020) ಮತ್ತು ಕೊಂಕಣಿ ಲೇಖಕ ದಾಮೋದರ ಮೌಜೋ ಅವರು 57ನೇ ಜ್ಞಾನಪೀಠ ಪ್ರಶಸ್ತಿ(2021)ಗೆ ಪಾತ್ರರಾಗಿದ್ದಾರೆ. ಈ ಮೂಲಕ ಅಸ್ಸಾಮಿಗೆ ಇದು ಮೂರನೇ ಜ್ಞಾನಪೀಠ ಪ್ರಶಸ್ತಿಯಾಗಿದ್ದರೆ, ಕೊಂಕಣಿಗೆ ಇದು ಎರಡನೇ ಜ್ಞಾನಪೀಠವಾಗಿದೆ.

    1933ರಲ್ಲಿ ಅಸ್ಸಾಂನ ದೇರ್ಗಾಂವ್​ನಲ್ಲಿ ಜನಿಸಿದ ಫೂಕನ್ ಅವರು 1950ರಿಂದಲೇ ಬರೆಯುತ್ತ ಬಂದವರು. ಅಸ್ಸಾಂ ಸಾಹಿತ್ಯಕ್ಕೆ ಫ್ರೆಂಚ್ ಸಿಂಬೋಲಿಸಮ್ ಆಧರಿತ ಆಧುನಿಕತೆಯನ್ನು ತಂದುಕೊಟ್ಟ ಅವರು ಭಾಷೆಯ ಗಡಿಗಳನ್ನು ವಿಸ್ತರಿಸುತ್ತ ಅಸ್ಸಾಮ್ ಭಾಷೆಯ ಶಕ್ತಿಯನ್ನು ಹೆಚ್ಚಿಸಿದವರು.

    1944ರಲ್ಲಿ ಗೋವಾದಲ್ಲಿ ಜನಿಸಿದ ದಾಮೋದರ ಮೌಜೋ ಅವರು ತಮ್ಮ ಸಣ್ಣ ಕತೆಗಳು ಮತ್ತು ಕಾದಂಬರಿಗಳಿಗೆ ಪ್ರಸಿದ್ಧರು. ಜಾತಿ, ಮತ, ಲಿಂಗ ಇತ್ಯಾದಿಗಳು ಮಾನವ ಸಂಬಂಧಗಳಲ್ಲಿ ತಂದೊಡ್ಡುವ ಬಿರುಕುಗಳನ್ನು ಅವರು ದಿಟ್ಟವಾಗಿ ಮತ್ತು ವ್ಯಂಗ್ಯವಾಗಿ ಅಭಿವ್ಯಕ್ತಿಸಿದ್ದಾರೆ. ಜಿ.ಎನ್.ದೇವಿ, ಎಂ.ಎಂ. ಕಲಬುರ್ಗಿ ಮೊದಲಾದವರೊಡನೆ ಕೆಲಸ ಮಾಡಿದ ಮೌಜೋ ತಮ್ಮ ಕ್ರಿಯಾಶೀಲತೆಗೂ ಹೆಸರಾದವರು.

    26 ಮಕ್ಕಳಿದ್ದ ಶಾಲಾ ಬಸ್​ ಅಪಘಾತ; ದಾರಿ ತಪ್ಪಿ ಹೊಲದ ಏರಿಗೆ ಡಿಕ್ಕಿ ಹೊಡೆದ ಬಸ್…

    ರಾಜಧಾನಿ ಬೆಂಗಳೂರಿನಲ್ಲಿ ಮದ್ಯ ಸಿಗಲ್ಲ; ಯಾಕೆ, ಎಷ್ಟು ದಿನ, ಎಲ್ಲೆಲ್ಲಿ..? ಇಲ್ಲಿದೆ ವಿವರ…

    ದೇವಸ್ಥಾನಗಳ ಬಾಗಿಲು ಮುರಿದು ಒಳಹೊಕ್ಕು ವಿಗ್ರಹಗಳ ಧ್ವಂಸ; ಆರೋಪಿಗಳ ಬಂಧನಕ್ಕೆ ಗ್ರಾಮಸ್ಥರ ಆಗ್ರಹ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts