More

    ಶ್ರೇಷ್ಠ ಕುಲದಲ್ಲಿ ಜನಿಸಿದ ಅಂಬಿಗರು ಸ್ವಾಭಿಮಾನಿಗಳು

    ಗುತ್ತಲ: ಅಂಬಿಗ ಸಮಾಜದವರು ಕೀಳರಿಮೆ ಬಿಟ್ಟು ತಾವು ಶ್ರೇಷ್ಠ ಕುಲದಲ್ಲಿ ಜನಿಸಿದ್ದನ್ನು ಮರೆಯಬಾರದು. ನೀವು ಕಾಯಕ ನಿಷ್ಠೆಯ ಕುಲದಲ್ಲಿ ಜನಿಸಿದ್ದೀರಿ, ಸ್ವಾಭಿಮಾನಿಗಳಾಗಿದ್ದೀರಿ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

    ನಿಜ ಶರಣ ಅಂಬಿಗರ ಚೌಡಯ್ಯನವರ 904ನೇ ಜಯಂತ್ಯುತ್ಸವ ಹಾಗೂ 6ನೇ ಶರಣ ಸಂಸ್ಕೃತಿ ಉತ್ಸವ, ಶಾಂತಮುನಿ ಸ್ವಾಮಿಗಳ 8ನೇ ಸ್ಮರಣೋತ್ಸವ, ಶಾಂತಭೀಷ್ಮ ಚೌಡಯ್ಯ ಸ್ವಾಮಿಗಳ 8ನೇ ಪೀಠಾರೋಹಣ ವಾರ್ಷಿಕ ಮಹೋತ್ಸವ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮದ ಅಂಗವಾಗಿ ಭಾನುವಾರ ಆಯೋಜಿಸಿದ್ದ ಸಾಂಸ್ಕೃತಿಕ ಮತ್ತು ಜಾನಪದ ಕಲಾ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

    ಅಂಬಿಗರಿಗೆ ನದಿಯಲ್ಲಿ ದೋಣಿ ನಡೆಸುವಾಗ ಸಾವು ಅವರಿಗೆ ಹತ್ತಿರ ಬಂದರೂ ಅದನ್ನು ಮೆಟ್ಟಿ ನಿಂತು ನಂಬಿದ ಜನರನ್ನು ದಡಕ್ಕೆ ಸೇರಿಸುತ್ತಾರೆ. ಈ ಹಿಂದೆ ಅಧಿಕಾರದಲ್ಲಿದ್ದಾಗ ಪೀಠಕ್ಕೆ ಹೆಚ್ಚಿನ ಅನುದಾನ ನೀಡಿದ್ದೇವೆ ಎಂದರು.

    ಮಾಜಿ ಶಾಸಕ ಅರುಣಕುಮಾರ ಪೂಜಾರ ಮಾತನಾಡಿ, ಮಠ ಮಾನ್ಯಗಳಿಗೆ ಹೆಚ್ಚಿನ ಕೊಡುಗೆ ನೀಡಿರುವುದು ಬಿಜೆಪಿ ಸರ್ಕಾರ. ಬಸವರಾಜ ಬೊಮ್ಮಾಯಿ ಹಾಗೂ ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಅಂಬಿಗರ ಪೀಠಕ್ಕೆ ಹೆಚ್ಚಿನ ಕೊಡುಗೆ ನೀಡಿದ್ದಾರೆ ಎಂದರು.

    ಗುರುಪೀಠದ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ ಮಾತನಾಡಿ, ಪೀಠದ ಅಭಿವೃದ್ಧಿಗೆ ಅನೇಕ ಭಕ್ತರ ಪರಿಶ್ರಮವಿದೆ. ಅಂಬಿಗರ ಚೌಡಯ್ಯನವರ ವಚನಗಳು ಸಮಾಜದ ಅಂಕು ಡೊಂಕುಗಳನ್ನು ತಿದ್ದುವಲ್ಲಿ ಸಹಕಾರಿಯಾಗಿದೆ. ಚೌಡಯ್ಯನವರು ಕಲ್ಲಿನ ದೋಣಿ ನಡೆಸಿದ, ಅನೇಕರ ರೋಗ ರುಜಿನಗಳನ್ನು ವಾಸಿ ಮಾಡಿದ ಪವಾಡ ಅವಿಸ್ಮರಣೀಯವಾಗಿದೆ ಎಂದರು.

    ಬೆಳಗ್ಗೆ ಸುಮಂಗಲೆಯರಿಂದ ತೊಟ್ಟಿಲೋತ್ಸವ, ನಿಜಶರಣ ಅಂಬಿಗರ ಚೌಡಯ್ಯನವರ ಗದ್ದುಗೆ ಪೂಜೆ ನಂತರ ರಕ್ತದಾನ ಶಿಬಿರ ನೆರವೇರಿತು.

    ಬಾಗಲಕೋಟೆ ಜಿಲ್ಲೆಯ ಸೀಮಿಕೇರಿ ರಾಮಾರೂಢಮಠದ ಪರಮರಾಮಾರೂಢ ಸ್ವಾಮೀಜಿ, ಜಂಗಮ ಕ್ಷೇತ್ರ ಲಿಂಗನಾಯಕನಹಳ್ಳಿಯ ಚನ್ನವೀರ ಸ್ವಾಮೀಜಿ, ಗುತ್ತಲ-ಅಗಡಿ ಮಠದ ಗುರುಸಿದ್ಧ ಸ್ವಾಮೀಜಿ, ಬಾಗಲಕೋಟೆ ಜಿಲ್ಲೆಯ ಶಿರೂರ ಮಹಾಂತಿತೀರ್ಥಮಠದ ಬಸವಲಿಂಗ ಸ್ವಾಮೀಜಿ, ಹಾವನೂರ ದಳವಾಯಿ ಮಠದ ಶಿವಕುಮಾರ ಸ್ವಾಮೀಜಿ, ರಾಣೆಬೆನ್ನೂರ ತಾಲೂಕಿನ ಗಂಗಾಪುರ ಸಿದ್ಧಾರೂಢಮಠದ ಮರುಳ ಶಂಕರದೇವರ, ಕೆಎಂಎಫ್ ನಿರ್ದೇಶಕ ಬಸವರಾಜ ಅರಬಗೊಂಡ, ಕೆಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಮುತ್ತಣ್ಣ ಯಲಿಗಾರ, ಗವಿಸಿದ್ದಪ್ಪ ದ್ಯಾಮಣ್ಣನವರ, ಇತರರು ಉಪಸ್ಥಿತರಿದ್ದರು.

    ಶ್ರೇಯಾ ರ್ಬಾ, ಸಂಸ್ಕೃತಿ ಶೆಲ್ಲಿಕೇರಿಯಿಂದ ಭರತನಾಟ್ಯ, ಅಶೋಕ ಬಸ್ತಿ ಅವರಿಂದ ಚಲನಚಿತ್ರ ನಟರ ಅಭಿನಯ ಪ್ರಸ್ತುತ ಪಡಿಸುವರು. ಬಾಬುರಾವ್ ಕೋಬಾಳ, ಎಸ್.ಆರ್. ಸಪ್ಪನಗೋಳ ತಂಡದವರಿಂದ ವಚನ ಗಾಯನ, ಸುಗಮ ಸಂಗೀತ ಹಾಗೂ ಭಕ್ತಿ ಸಂಗೀತ ಕಾರ್ಯಕ್ರಮ, ಸೂರ್ಯಕಾಂತ ಚೆಂಗಟಾ ಅವರಿಂದ ರಸ ಮಂಜರಿ ಕಾರ್ಯಕ್ರಮ, ರಕ್ತರಾತ್ರಿ ಪೌರಾಣಿಕ ನಾಟಕ ಪ್ರದರ್ಶನಗೊಂಡಿತು.

    ಬಸವರಾಜ ಸಪ್ಪನಗೋಳ ಹಾಗೂ ವರ್ಷಾ ಬಾರಕೇರ ಕಾರ್ಯಕ್ರಮ ನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts