More

    ರೈತರಿಂದ ಹಣ ವಸೂಲಿ ಮಾಡಿದ್ರೆ ಕಪ್ಪುಪಟ್ಟಿಗೆ : ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ಎಚ್ಚರಿಕೆ

    ಚಿಂತಾಮಣಿ : ರೈತರ ಬಳಿ ಹಣ ವಸೂಲಿ ಮಾಡುವ ಬೋರ್‌ವೆಲ್ ಗುತ್ತಿಗೆದಾರರ ಪರವಾನಗಿಯನ್ನು ಕಪ್ಪುಪಟ್ಟಿಗೆ ಹಾಕುವಂತೆ ಅಧಿಕಾರಿಗಳಿಗೆ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ಸೂಚಿಸಿದರು.

    ಅಂಬೇಡ್ಕರ್ ಅಭಿವೃದ್ಧಿ ನಿಗಮ ಮತ್ತು ವಾಲ್ಮೀಕಿ ನಿಗಮದಿಂದ ಗಂಗಾಕಲ್ಯಾಣ ಯೋಜನೆಯಡಿ ಕೊಳವೆಬಾವಿ ಕೊರೆಸಿದ್ದ ಲಾನುಭವಿಗಳಿಗೆ ನಗರದ ಪಾಲಿಟೆಕ್ನಿಕ್ ಮೈದಾನದಲ್ಲಿ ಮೋಟಾರ್, ಪಂಪು ಹಾಗೂ ಪೈಪ್‌ಗಳನ್ನು ಶನಿವಾರ ವಿತರಿಸಿ ಮಾತನಾಡಿದರು.

    ಗಂಗಾಕಲ್ಯಾಣಿ ಯೋಜನೆಯಡಿ ಆಯ್ಕೆಯಾಗಿರುವ ಫಲಾನುಭವಿಗಳಿಗೆ ಕೊಳವೆ ಬಾವಿ ಕೊರೆಯುವ ವೇಳೆ ಬೋರ್‌ವೆಲ್ ಏಜೆಂಟ್ ಅಬ್ಲೂಡ್ ಮಂಜುನಾಥ ಎಂಬುವವರು ರೈತರ ಬಳಿ 10 ರಿಂದ 20 ಸಾವಿರ ರೂ ಹಣ ವಸೂಲಿ ಮಾಡುತ್ತಿದ್ದಾರೆಂದು ರೈತರು ಶಾಸಕರಿಗೆ ದೂರು ನೀಡಿದರು. ದೂರಿಗೆ ಸ್ಪಂದಿಸಿದ ಶಾಸಕರು ರೈತರ ಬಳಿ ಹಣ ವಸೂಲಿ ಮಾಡುವ ಬೋರವೆಲ್ ಗುತ್ತಿಗೆದಾರರ ಪರವನಾಗಿಯನ್ನು ಬ್ಲಾಕ್ ಲಿಸ್ಟ್‌ಗೆ ಹಾಕುವಂತೆ ಅಧಿಕಾರಿಗಳಿಗೆ ಸೂಚಿಸಿದರು.

    ರೈತರಿಗೆ ವಿತರಣೆ ಮಾಡುತ್ತಿರುವ ಪಂಪು, ಮೋಟಾರ‌್ಗಳು ಕಳಪೆಯಿಂದ ಕೂಡಿದೆ ಎಂದು ರೈತರೊಬ್ಬರು ಆರೋಪಿಸಿದ್ದು ಇದಕ್ಕೆ ಪ್ರತಿಕ್ರಯಿಸಿದ ಶಾಸಕರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದಲ್ಲದೆ, ಗುಣಮಟ್ಟದ ಸಾಮಗ್ರಿ ವಿತರಿಸುವಂತೆ ಸೂಚನೆ ನೀಡಿದರು.

    ಮುಖಂಡರಾದ ಸೀಕಲ್ ಶ್ರೀನಿವಾಸರೆಡ್ಡಿ, ಕೆ.ವಿ.ಶ್ರೀನಿವಾಸ್, ಅಬ್ಬುಗುಂಡು ಮಧು, ಮುನುಗನಹಳ್ಳ ಶ್ರೀನಿವಾಸ್, ಟಿಪ್ಪುನಗರ ಸುಧಾಕರ್ , ವಾಲ್ಮೀಕಿ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಕೆಂಪಯ್ಯ, ಅಂಬೇಡ್ಕರ್ ಅಭಿವೃದ್ಧಿ ನಿಗಮದ ಫೀಲ್ಡ್ ಆಫೀಸರ್ ರಾಜಶೇಖರ್ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts