More

    ಗಡಿ ಭಾಗದಲ್ಲಿ ಕರೊನಾ ತಪಾಸಣೆ ಚುರುಕುಗೊಳಿಸುವಂತೆ ಜೈ ಕನ್ನಡ ರಕ್ಷಣಾ ವೇದಿಕೆ ಒತ್ತಾಯ

    ರಾಯಚೂರು: ಜಿಲ್ಲೆಯೊಳಗೆ ಬರುವ ಅನ್ಯರಾಜ್ಯದ ವ್ಯಕ್ತಿಗಳನ್ನು ತಪಾಸಣೆ ಮಾಡಲು ಗಡಿ ಭಾಗದಲ್ಲಿ ಕಟ್ಟು ನಿಟ್ಟಿನ ಕ್ರಮ ವಹಿಸಬೇಕೆಂದು ಜೈ ಕನ್ನಡ ರಕ್ಷಣಾ ವೇದಿಕೆ ಜಿಲ್ಲಾ ಸಮಿತಿ ಒತ್ತಾಯಿಸಿದೆ. ನಗರದ ಡಿಸಿ ಕಚೇರಿಗೆ ಆಗಮಿಸಿದ ಸಂಘಟನೆ ಪದಾಧಿಕಾರಿಗಳು ಶುಕ್ರವಾರ ಸ್ಥಾನಿಕ ಅಧಿಕಾರಿ ಮೂಲಕ ಡಿಸಿಗೆ ಮನವಿ ಸಲ್ಲಿಸಿದರು. ಗಡಿಯಲ್ಲಿನ ಚೆಕ್‌ಪೋಸ್ಟ್‌ಗಳಲ್ಲಿ ವೈದ್ಯಕೀಯ ತಂಡ ನಿಷ್ಠುರತೆಯಿಂದ ವರ್ತಿಸಿ ತಪಾಸಣೆ ಮಾಡಬೇಕು. ಮದ್ಯಪಾನ ಮಾಡಿದ ವ್ಯಕ್ತಿ ಬಾಯಲ್ಲಿ ಪರೀಕ್ಷಿಸುವ ಯಂತ್ರವಿಟ್ಟು, ಅದನ್ನೆ ಮತ್ತೊಬ್ಬರಿಗೆ ಬಳಸದಂತೆ ಕಡಿ ವಾಣ ಹಾಕಬೇಕು. ಕರೊನಾ ಬಗ್ಗೆ ಹೆಚ್ಚಿನ ಅರಿವು ಮೂಡಿಸಬೇಕು ಎಂದು ಮನವಿ ಮಾಡಿದರು.

    ಸಂಘಟನೆ ಅಧ್ಯಕ್ಷ ಶರಣಪ್ಪ ಅಸ್ಕಿಹಾಳ, ಜಿಲ್ಲಾಧ್ಯಕ್ಷ ಶರಣಬಸವ, ಉಪಾಧ್ಯಕ್ಷ ರಮೇಶ, ತಾಲೂಕಾಧ್ಯಕ್ಷ ಗೋಪಾಲ, ಸದಸ್ಯರಾದ ವಾಜೀದ್, ಶೇಖ ಅಲಿ, ವಸೀಮ್, ರಶೀದ್, ವಿಜ್ಜು, ಫಾರುಕ್, ಉಮರ್, ರಾಮಪ್ಪ, ಅನಿಲ್, ವೆಂಕಟೇಶ, ಪ್ರಹ್ಲಾದ್ ರಡ್ಡಿ, ನರಸಪ್ಪ ಸೇರಿಂತೆ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts