More

    200 ಪ್ಯಾಸೆಂಜರ್​ ರೈಲುಗಳ ಟಿಕೆಟ್​ ಬುಕ್ಕಿಂಗ್​ ಆರಂಭ

    ನವದೆಹಲಿ: ಭಾರತೀಯ ರೈಲ್ವೆ ಜೂನ್​ 1ರಿಂದ ಆರಂಭಿಸಲು ಉದ್ದೇಶಿಸಿರುವ 200 ಪ್ಯಾಸೆಂಜರ್​ ರೈಲುಗಳ ಟಿಕೆಟ್​ ಬುಕ್ಕಿಂಗ್​ ಗುರುವಾರ ಬೆಳಗ್ಗೆ 10 ಗಂಟೆಯಿಂದ ಆರಂಭವಾಗಿದೆ. ಐಆರ್​ಸಿಟಿಸಿ ವೆಬ್​ಸೈಟ್​ ಅಥವಾ ಆ್ಯಪ್​ ಮೂಲಕ ಎಸಿ ಮತ್ತು ನಾನ್​ ಎಸಿ ಬೋಗಿಗಳಲ್ಲಿ ಸಂಚರಿಸಲು ಟಿಕೆಟ್​ಗಳನ್ನು ಮುಂಗಡವಾಗಿ ಕಾಯ್ದಿರಿಸಬಹುದಾಗಿದೆ.

    ಜೂನ್​ 1ರಿಂದ ಸಂಚಾರ ಆರಂಭಿಸಲಿರುವ 200 ಪ್ಯಾಸೆಂಜರ್​ ರೈಲುಗಳ ಪೈಕಿ ಕರ್ನಾಟಕ ಸಂಪರ್ಕ ಕ್ರಾಂತಿ ಎಕ್ಸ್​ಪ್ರೆಸ್​, ನೇತ್ರಾವತಿ ಎಕ್ಸ್​ಪ್ರೆಸ್​ ಮತ್ತು ಹೌರಾದಿಂದ ಯಶಂತಪುರಕ್ಕೆ ಬರುವ ಡುರಾಂಟೋ ಎಕ್ಸ್​ಪ್ರೆಸ್​ ರೈಲುಗಳು ಕರ್ನಾಟಕಕ್ಕೆ ಸಂಪರ್ಕ ಒದಗಿಸಲಿವೆ.
    ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಿರುವ ಭಾರತೀಯ ರೈಲ್ವೆ, ನಿಗದಿತ ರೈಲು ಹೊರಡುವ 2 ಗಂಟೆ ಮುಂಚಿನವರೆಗೂ ಟಿಕೆಟ್​ಗಳನ್ನು ಕಾಯ್ದಿರಿಸಬಹುದಾಗಿದೆ. ಜತೆಗೆ 30 ದಿನಗಳ ಅವಧಿಯವರೆಗೂ ಟಿಕೆಟ್​ಗಳನ್ನು ಕಾಯ್ದಿರಿಸಲು ಅವಕಾಶ ಮಾಡಿಕೊಡಲಾಗುತ್ತಿದೆ ಎಂದು ಹೇಳಿದೆ.

    ಇದನ್ನೂ ಓದಿ: ಸಾವಿನಲ್ಲೂ ಒಂದಾದ ವೃದ್ಧ ದಂಪತಿ: ಪತ್ನಿಯ ನಿಧನದ ಸುದ್ದಿ ಕೇಳಿ ಪತಿಗೂ ಹೃದಯಾಘಾತ

    ಟಿಕೆಟ್​ಗಳನ್ನು ಮುಂಗಡವಾಗಿ ಕಾಯ್ದಿರಿಸಿರುವವರು ತಮ್ಮ ರೈಲುಗಳು ಹೊರಡುವ 90 ನಿಮಿಷಗಳ ಮೊದಲೇ ರೈಲ್ವೆ ನಿಲ್ದಾಣಕ್ಕೆ ಬರುವುದು ಕಡ್ಡಾಯವಾಗಿದೆ. ಕೋವಿಡ್​ 19 ಸೋಂಕು ಹಿನ್ನೆಲೆಯಲ್ಲಿ ದೇಹದ ಉಷ್ಣಾಂಶ ಪರೀಕ್ಷಿಸುವುದು ಹಾಗೂ ಲಗೇಜ್​ಗಳನ್ನು ಸ್ಯಾನಿಟೈಸ್​ ಮಾಡುವುದು ಸೇರಿ ಇನ್ನಿತರ ಕಾರ್ಯಗಳನ್ನು ಮಾಡಬೇಕಿರುವುದು ಇದಕ್ಕೆ ಕಾರಣ. ಪರೀಕ್ಷೆಯ ವೇಳೆ ಕೋವಿಡ್​ 19 ಲಕ್ಷಣಗಳನ್ನು ಕಂಡು ಬಂದಲ್ಲಿ, ಅಂಥವರಿಗೆ ಪ್ರಯಾಣಿಸಲು ಅವಕಾಶ ನಿರಾಕರಿಸಲಾಗುತ್ತದೆ. ಜತೆಗೆ ಅವರಿಗೆ ಶೇ.100 ಟಿಕೆಟ್​ ಹಣವನ್ನು ಹಿಂದಿರುಗಿಸಲಾಗುತ್ತದೆ. ಪ್ರತಿಯೊಬ್ಬರೂ ಮಾಸ್ಕ್​ ಧರಿಸುವುದು ಹಾಗೂ ತಮ್ಮ ಮೊಬೈಲ್​ನಲ್ಲಿ ಆರೋಗ್ಯಸೇತು ಆ್ಯಪ್​ ಡೌನ್​ಲೋಡ್​ ಮಾಡಿಕೊಂಡಿರುವುದು ಕಡ್ಡಾಯವಾಗಿದೆ ಎಂದು ತಿಳಿಸಿದೆ.

    ಟಿಕೆಟ್​ಗಳನ್ನು ಮುಂಗಡವಾಗಿ ಕಾಯ್ದಿರಿಸುವಾಗ ಆರ್​ಎಸಿ ಮತ್ತು ವೇಟೆಡ್​ ಲಿಸ್ಟ್​ ಟಿಕೆಟ್​ಗಳಿಗೂ ಅವಕಾಶ ನೀಡಲಾಗುತ್ತದೆ. ಆರ್​ಎಸಿ ಟಿಕೆಟ್​ ಹೊಂದಿರುವವರಿಗೆ ಒಂದೇ ಸೀಟ್​ನಲ್ಲಿ ಇಬ್ಬರಿಗೆ ಪ್ರಯಾಣಿಸಲು ಅವಕಾಶ ಮಾಡಿಕೊಡಲಾಗುತ್ತದೆ. ಆದರೆ ಚಾರ್ಟ್​ ಸಿದ್ಧವಾದ ನಂತರದಲ್ಲಿ ಟಿಕೆಟ್​ ಕನ್ಫರ್ಮ್​ ಆಗದೇ ಇದ್ದರೆ, ಅಂಥವರಿಗೆ ಪ್ರಯಾಣಿಸಲು ಅವಕಾಶ ನಿರಾಕರಿಸಲಾಗುತ್ತದೆ ಎಂದು ಸ್ಪಷ್ಟಪಡಿಸಿದೆ.
    ಎಲ್ಲ ರೈಲು ನಿಲ್ದಾಣಗಳಲ್ಲೂ ಹೋಟೆಲ್​ಗಳು ಕಾರ್ಯನಿರ್ವಹಿಸುತ್ತವೆ. ಆದರೆ, ಅಲ್ಲೇ ತಿನ್ನಲು ಅವಕಾಶ ನೀಡಲಾಗುವುದಿಲ್ಲ. ಬದಲಿಗೆ ಪಾರ್ಸೆಲ್​ ತಂದು ರೈಲಿನಲ್ಲಿ ತಿನ್ನಲು ಅಡ್ಡಿಯಿಲ್ಲ ಎಂದು ಹೇಳಿದೆ.

    ಅಂಫಾನ್ ಚಂಡಮಾರುತಕ್ಕೆ 12 ಬಲಿ: ಕರೊನಾಗಿಂತ ಭೀಕರ ಎಂದ ಸಿಎಂ ಮಮತಾ ಬ್ಯಾನರ್ಜಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts