More

    ಜಯಚಾಮರಾಜೇಂದ್ರ ವಾಗ್ಗೇಯ ವೈಭವ ಬಿಡುಗಡೆ

    ವಿದ್ವಾನ್ ವಿ.ನಂಜುಂಡಸ್ವಾಮಿ ರಚಿಸಿರುವ ‘ಶ್ರೀ ವಿದ್ಯಾ ವಿಶಾರದ ಶ್ರೀ ಜಯಚಾಮರಾಜೇಂದ್ರ ವಾಗ್ಗೇಯ ವೈಭವ’ ಗ್ರಂಥವನ್ನು ಸೋಮವಾರ ಸಂಜೆ ಬಿಡುಗಡೆಗೊಳಿಸಲಾಯಿತು.

    ನೃತ್ಯಗಿರಿ ಪ್ರದರ್ಶಕ ಕಲೆ- ಸಂಶೋಧನಾ ಕೇಂದ್ರದ ವತಿಯಿಂದ ಗಾನಭಾರತಿಯ ರಮಾಗೋವಿಂದ ಕಲಾ ವೇದಿಕೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಿಟೀಲು ವಿದ್ವಾಂಸರಾದ ಮೈಸೂರು ಎಂ.ನಾಗರಾಜ್, ಮೈಸೂರು ಎಂ.ಮಂಜುನಾಥ್ ಬಿಡುಗಡೆಗೊಳಿಸಿದರು.

    ಮಾಹಿತಿ ಕಣಜ

    ಕೃತಿ ಪರಿಚಯಿಸಿದ ನೂಪುರ ಸಂಸ್ಥೆ ನಿರ್ದೇಶಕ ಪ್ರೊ.ಕೆ.ರಾಮಮೂರ್ತಿರಾವ್ ಅವರು, ಶ್ರೀ ವಿದ್ಯಾ ವಿಶಾರದ ಶ್ರೀ ಜಯಚಾಮರಾಜೇಂದ್ರ ವಾಗ್ಗೇಯ ವೈಭವ ಇಂಗ್ಲಿಷ್ ಕೃತಿಯನ್ನು 2016ರಲ್ಲಿ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಬಿಡುಗಡೆ ಮಾಡಿದ್ದರು. ಇಂದು ಬಿಡುಗಡೆಯಾಗಿರುವುದು ಕನ್ನಡ ಭಾಷಾ ಕೃತಿ. ಸಾಹಿತ್ಯ-ರಾಗ-ವ್ಯಾಖ್ಯಾನಗಳ ಜತೆಗೆ ಮೈಸೂರಿನ ಆಕಾಶವಾಣಿಯಲ್ಲಿ ಪ್ರಸಾರವಾದ ವಿದ್ವಾನ್ ನಂಜುಂಡಸ್ವಾಮಿ ಅವರ ನಿರೂಪಣಾ ಸಾಹಿತ್ಯವನ್ನೂ ಒಳಗೊಂಡಿದೆ. ಇದು ಮಾಹಿತಿ ಕಣಜವಾಗಿದೆ ಎಂದರು.

    ಗಮನ ಸೆಳೆದ ನೃತ್ಯ ಪ್ರದರ್ಶನ

    ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಾಂತ ಕಾರ್ಯಕಾರಿಣಿ ಸದಸ್ಯ ಮ.ವೆಂಕಟರಾಮು, ಗ್ರಂಥಕರ್ತೃ ವಿ.ನಂಜುಂಡಸ್ವಾಮಿ, ಜೆಎಸ್‌ಎಸ್ ವಿದ್ಯಾಸಂಸ್ಥೆಯ ನಿವೃತ್ತ ಗ್ರಂಥಪಾಲಕಿ ಎಚ್.ಎಸ್.ಉಮಾದೇವಿ, ವಿದುಷಿ ಕೃಪಾ ಫಡ್ಕೆ ಇನ್ನಿತರರಿದ್ದರು.

    ಬಳಿಕ ಯುವ ಕಲಾವಿದರಾದ ಸುಮಂತ್ ಮಂಜುನಾಥ್, ಎ.ರಾಧೇಶ್, ಎಸ್.ಮಂಜುನಾಥ್ ಅವರಿಂದ ಪಿಟೀಲುವಾದನ ನಡೆಯಿತು. ವಿದ್ವಾನ್ ಬದ್ರಿ ದಿವ್ಯ ಭೂಷಣ್, ಕೆ.ಆರ್.ವಿಶ್ವದೀಪ್, ವಿದುಷಿಯರಾದ ಜ್ಯೋತಿ ಹೆಗಡೆ, ಚೇತನ ರಾಧಾಕೃಷ್ಣ, ಅಂಜನಾ ಭೂಷಣ್, ವಾರಿಜಾ ನಳಿಗೆ ತಂಡದಿಂಧ ನೃತ್ಯ ಪ್ರದರ್ಶನ ಗಮನ ಸೆಳೆಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts