More

    ರಾಹುಲ್​ ಗಾಂಧಿ ವೀರನೂ ಅಲ್ಲ, ಶೂರನೂ ಅಲ್ಲ: ಬಸವರಾಜ ಬೊಮ್ಮಾಯಿ.

    ಕಾಂಗ್ರೆಸ್​ 40 ಸ್ಥಾನವೂ ಗೆಲ್ಲುವುದಿಲ್ಲ: ಸಿ.ಸಿ. ಪಾಟೀಲ

    ವಿಜಯವಾಣಿ ಸುದ್ದಿಜಾಲ ಗದಗ
    ಇಂಡಿ ಒಕ್ಕೂಟದ 26 ಪಕ್ಷಗಳಲ್ಲಿ ಪ್ರಧಾನಿ ಆಗುವ ಅರ್ಹತೆ ಯಾರಿಗೂ ಇಲ್ಲ. ಮೋದಿಯವರ ಸಮಾನಾದ ನಾಯಕರು ಯಾರೂ ಇಲ್ಲ. ನಾನು ಪ್ರಧಾನಿ ಆಗುವುದಿಲ್ಲ ಎಂದು ಸ್ವತಃ ರಾಹುಲ್​ ಗಾಂಧಿ ಹೇಳಿದ್ದಾರೆ. ಕೊಟ್ಟ ಕುದುರೆಯನ್ನು ಏರದ ರಾಹುಲ್​ ಗಾಂಧಿ ವೀರನೂ ಅಲ್ಲ, ಶೂರನೂ ಅಲ್ಲ ಎಂದು ಬಿಜೆಪಿ ಅಭ್ಯಥಿರ್ ಬಸವರಾಜ ಬೊಮ್ಮಾಯಿ ಹೇಳಿದರು.
    ಗದಗ ತಾಲೂಕಿನ ಕುರ್ತಕೋಟಿ, ಹತಿರ್, ಕಣವಿ, ಹೊಸುರು, ಶಿರುಂಧ, ಸೊರಟೂರು, ಬೆಳದಡಿ, ಬೆಳದಡಿ ತಾಂಡಾ, ನಾಗಾವಿ ಮತ್ತು ಮುಳಗುಂದ ಗ್ರಾಮದಲ್ಲಿ ಕಾರ್ಯಕರ್ತರ ಸಭೆ ಮತ್ತು ರೋಡ್​ ಶೋ ನಡೆಸಿ ಮಾತನಾಡಿದ ಬೊಮ್ಮಾಯಿ, ಇಂಡಿ ಒಕ್ಕೂಟದಲ್ಲಿ ಕೆಲವರು ಮಲ್ಲಿಕಾರ್ಜುನ ರ್ಖಗೆ ಪಿಎಂ ಅಭ್ಯಥಿರ್ ಎಂದು, ಇನ್ನೂ ಹಲವರು ರಾಹುಲ್​ ಗಾಂಧಿ ಎಂದು ಹೇಳಿಕೆ ನೀಡುತ್ತಿದ್ದಾರೆ. ಆದರೆ, ರಾಹುಲ್​ ಗಾಂಧಿ ನಾನು ಪಿಎಂ ಆಗುವುದಿಲ್ಲ ಎಂದು ಹೇಳಿದ್ದಾರೆ ಎಂದು ವ್ಯಂಗ್ಯ ವಾಡಿದರು. ಸವಾಲನ್ನು ಸ್ವೀಕಾರ ಮಾಡಿ ಅದನ್ನು ಗೆಲುವಾಗಿ ಪರಿವತಿರ್ಸುವ ಛಲ ನರೇಂದ್ರ ಮೋದಿಯವರಿಗೆ ಮಾತ್ರ ಇದೆ. ಹೀಗಾಗಿ ಮೋದಿಯವರು ಜನರ ನಾಯಕ ಆಗಿದ್ದಾರೆ ಎಂದರು.
    ವಿಶ್ವದ ಎಲ್ಲ ದೇಶಗಳಿಗೆ ಪೈಪೋಟಿ ಕೊಟ್ಟು ಭಾರತ ದೇಶ ಬೆಳೆಯುತ್ತಿದೆ. ಕೇವಲ ರಸ್ತೆ, ನೀರು ಕೊಡುವುದಷ್ಟೆ ಅಲ್ಲ. ಮಾಧ್ಯಮ, ಮೊಬೈಲ್​ ಮೂಲಕ ಪ್ರತಿಯೊಬ್ಬರ ಕೈಯಲ್ಲಿ ಮಾಹಿತಿ ನೀಡುವುದು ಅಭಿವೃದ್ಧಿಯ ಭಾಗವಾಗಿದೆ. ಎಲ್ಲರ ಕೈಗೆ ಮಾಹಿತಿ ತಂತ್ರಜ್ಞಾನ ನೀಡಿದ್ದು ಪ್ರಧಾನಿ ನರೆಂದ್ರ ಮೋದಿಯವರು ಎಂದರು.
    ಎಲ್ಲಿದೆ ಗರೀಬಿ ಹಠಾವೋ?:
    ಕಾಂಗ್ರೆಸ್​ ಪಕ್ಷ ಗರೀಬಿ ಹಠಾವೋ ಎಂದು ಹೇಳಿ 5 ಸಶಕವೇ ಕಳೆಯಿತು. ಆದರೆ, ಕಾಂಗ್ರೆಸ್​ ಅವಧಿಯಲ್ಲಿ ಬಡತನ ನಿರ್ಮೂಲನೆ ಆಗಲಿಲ್ಲ. ಕಳೆದ ಹತ್ತು ವರ್ಷದಲ್ಲಿ ಮೋದಿಯವರು 15 ಕೋಟಿ ಜನರನ್ನು ಬಡತನ ರೇಖೆಗಿಂತ ಮೇಲೆ ತಂದಿದ್ದಾರೆ. ರಾಜ್ಯದಲ್ಲಿ 36 ಲಕ್ಷ ಜನರಿಗೆ ಮುದ್ರಾ ಯೋಜನೆ ಅಡಿಯಲ್ಲಿ ಸಾಲ ದೊರೆತಿದೆ. 58 ಲಕ್ಷ ರೈತರಿಗೆ ಕಿಸಾನ್​ ಸಮ್ಮಾನ್​ ದೊರೆತಿದೆ. 12 ಲಕ್ಷ ಗ್ಯಾಸ್​ ಸಂಪರ್ಕ ನೀಡಿದ್ದಾರೆ. ಇದೆಲ್ಲವನ್ನು ಗ್ರಾಮೀಣ ಜನರಿಗೆ ತಲುಪಿಸುವ ಕೆಲಸವನ್ನು ಪ್ರಧಾನಿ ಮೋದಿ ಮಾಡಿದ್ದಾರೆ. ಮೋದಿಯವರು ಅಕ್ಕಿ ಕೊಡುತ್ತಿದ್ದಾರೆ. ಇವರು ತಮ್ಮದೇ ಭಾಗ್ಯ ಅಂತ ಹೇಳಿಕೊಳ್ಳುತ್ತಿದ್ದಾರೆ ಎಂದರು.

    ಕಾಂಗ್ರೆಸ್​ 40 ಸ್ಥಾನ ಗೆಲ್ಲುವುದಿಲ್ಲ: ಸಿಸಿಪಿ
    ಪ್ರಸ್ತುತ ನಡೆಯುತ್ತಿರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ ದೇಶ್ಯಾದ್ಯಂತ 40ಸ್ಥಾನ ಗೆಲ್ಲುವುದು ಕಷ್ಟವಿದೆ ಎಂದು ಶಾಸಕ ಸಿ.ಸಿ. ಪಾಟೀಲ ಹೇಳಿದರು. ಶುಕ್ರವಾರ ಪ್ರಚಾರದ ವೇಳೆ ಅಭ್ಯಥಿರ್ ಬೊಮ್ಮಾಯಿ ಜತೆ ಹೆಜ್ಜೆ ಹಾಕಿದ ಅವರು ಕಾಂಗ್ರೆಸ್​ ಪಕ್ಷವನ್ನು ತರಾಟೆಗೆ ತೆಗೆದುಕೊಂಡರು. ಕಳಸಾ ಬಂಡೂರಿ ಯೋಜನೆಯಲ್ಲಿ ಕಾಂಗ್ರೆಸ್​ ಜನರಿಗೆ ಅನ್ಯಾಯ ಮಾಡಿದೆ. ಈಗ ನಡೆದಿರುವ ಸಮೀಕ್ಷೆ ಪ್ರಕಾರ ಬಿಜೆಪಿ 400 ಕ್ಕಿಂತ ಹೆಚ್ಚು ಸ್ಥಾನ ಗೆಲ್ಲುತ್ತದೆ. ಕಾಂಗ್ರೆಸ್​ 40 ಸ್ಥಾನಕ್ಕೆ ಮಾತ್ರ ಸೀಮಿತಗೊಳ್ಳಲಿದೆ ಎಂದರು.
    ಮೋದಿ ಅವರು ಹತ್ತು ವರ್ಷದಲ್ಲಿ ದೇಶದ ಅಭಿವೃದ್ಧಿಗೆ ವೇಗ ನೀಡಿದ್ದಾರೆ. ಅವರು ಗುರಿ ಮುಟ್ಟಲು ಮೋದಿ ಅವರನ್ನು ಮತ್ತೆ ಪ್ರಧಾನ ಮಂತ್ರಿಯಾಗಿ ಮಾಡಬೇಕು. ಪಾಕಿಸ್ತಾನ ನಮ್ಮ ಮೇಲೆ ದಾಳಿ ಮಾಡುವಂತಾಗಿತ್ತು. ಮೋದಿಯವರು ಅವರಿಗೆ ತಕ್ಕ ಉತ್ತರ ಕೊಟ್ಟಿದ್ದಾರೆ. ಮೋದಿಯವರು ನಗರದಿಂದ ಗ್ರಾಮೀಣದವರೆಗೆ ಎಲ್ಲ ರಂಗದಲ್ಲಿಯೂ ಅಭಿವೃದ್ಧಿ ಮಾಡಿದ್ದಾರೆ. ಅವರು ಮತ್ತೆ ಬಂದರೆ ನಮ್ಮ ಊರು ಆಥಿರ್ಕವಾಗಿ ಸಬಲವಾಗುತ್ತದೆ. ಅದರಿಂದ ನಮ್ಮ ಆಥಿರ್ಕತೆ ಬಲಗೊಳ್ಳುತ್ತದೆ ಎಂದು ಸಿ.ಸಿ. ಪಾಟೀಲ ಹೇಳಿದರು.

    ಹಳ್ಳಿಗಳಲ್ಲಿ ಬೆಂಬಲ ಸಿಗುತ್ತಿದೆ:
    ನನಗೆ ರಾಜ್ಯದ ಹಳ್ಳಿ-ಹಳ್ಳಿಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಬೆಂಬಲ ಸಿಗುತ್ತಿದೆ. ನನ್ನಷ್ಟು ಹಳ್ಳಿ ತಿರುಗುವವರು ಯಾರೂ ಇಲ್ಲ. ನನಗೆ ಹಳ್ಳಿಗಳ ಸಂಪರ್ಕ ಇದೆ. ಜನರ ಪ್ರೀತಿ ವಿಶ್ವಾಸ ಮೇಲೆ ನನಗೂ ಪ್ರೀತಿ ಇದೆ. ಯಾವುದೇ ಸಮಯ ವ್ಯರ್ಥ ಮಾಡದೇ ಪ್ರತಿಯೊಂದು ಗ್ರಾಮಪಂಚಾಯಿತಿ ಮಟ್ಟಕ್ಕೆ ಹೋಗಿ ಪ್ರಚಾರ ಮಾಡುತ್ತಿದ್ದೇನೆ. ಮೊದಲ ಬಾರಿಗೆ ಲೋಕಸಭಾ ಚುನಾವಣೆಯಲ್ಲಿ ಹಳ್ಳಿಹಳ್ಳಿಗಳಲ್ಲಿ ಪ್ರಚಾರವಾಗುತ್ತಿದೆ. ಡೊಳ್ಳು ಬಾರಿಸುವ ಮೂಲಕ ಗದಗ ಕ್ಷೇತ್ರದ ಪ್ರಚಾರಕ್ಕೆ ಚಾಲನೆ ನೀಡಿದ್ದೇನೆ. ಇದೊಂದು ಶುಭ ಸಂಕೇತ. ಪ್ರಧಾನಿ ನರೇಂದ್ರ ಮೋದಿ ಅವರ ಪ್ರಚಾರ ಬಗ್ಗೆ ಕೇಂದ್ರ ಪ್ರಚಾರ ಸಮಿತಿಯವರು ತೀರ್ಮಾನ ಮಾಡುತ್ತಾರೆ ಎಂದು ಹೇಳಿದರು.
    15ಕ್ಕೆ ನಾಮಪತ್ರ ಸಲ್ಲಿಕೆ:
    ಏ.15 ರಂದು ಮುಹೂರ್ತದ ಪ್ರಕಾರ ನಾಮಪತ್ರ ಸಲ್ಲಿಕೆ ಮಾಡಲಿದ್ದು, ಏ.19 ರಂದು ಬೃಹತ್​ ಸಮಾವೇಶದ ಮೂಲಕ ನಾಮಪತ್ರ ಸಲ್ಲಿಕೆ ಮಾಡಲಾಗುವುದು. ಆ ದಿನ ರಾಜ್ಯದ ಎಕ್ಕ ನಾಯಕರೂ ಆಗಮಿಸಲಿದ್ದಾರೆ. ಅದರಲ್ಲಿ ಪ್ರಮುಖವಾಗಿ ಯುಡಿಯೂರಪ್ಪ ಅವರು ಬರಲಿದ್ದಾರೆ ಎಂದು ಬೊಮ್ಮಾಯಿ ಹೇಳಿದರು.

    ಕ್ರೀಡಾಪಟುವಿನಿಂದ ಅಭಿನಂದನೆ: ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಕಡಕೋಳ ಗ್ರಾಮದ ಗದಗ ಕ್ರೀಡಾಶಾಲೆಯ ವಿದ್ಯಾಥಿರ್ನಿ ಪವಿತ್ರಾ ಕುರ್ತಕೋಟಿ ಶುಕ್ರವಾರ ಬಸವರಾಜ ಬೊಮ್ಮಾಯಿಯವರನ್ನು ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದರು. ಈ ವೇಳೆ ಮಾತನಾಡಿದ ಪವಿತ್ರಾ, ಬಸವರಾಜ ಬೊಮ್ಮಾಯಿ ಅವರು ಸಿಎಂ ಆಗಿದ್ದ ಸಂದರ್ಭದಲ್ಲಿ ಸೈಕ್ಲಿಂಗ್​ ಮಾಡಲು ಕ್ರೀಡಾ ಇಲಾಖೆಯಿಂದ 8.5 ಲಕ್ಷ ಮೌಲ್ಯದ ಸೈಕಲ್​ ಕೊಡಿಸಿದ್ದರಿಂದ ತಾನು ರಾಷ್ಟ್ರೀಯ ಮಟ್ಟದಲ್ಲಿ ಪದಕ ಪಡೆದು ಏಷಿಯನ್​ ಚಾಂಪಿಯನ್​ ಶಿಪ್​ ನಲ್ಲಿ ಪಾಲ್ಗೊಳ್ಳಲು ಅವಕಾಶ ದೊರೆಯಿತು. ತನ್ನ ಸಾಧನೆಗೆ ಸಹಾಯ ಮಾಡಿದ್ದಕ್ಕಾಗಿ ಬೊಮ್ಮಾಯಿ ಅವರಿಗೆ ಅಭಿನಂದನೆ ಸಲ್ಲಿಸಿದೆನು ಎಂದು ತಿಳಿಸಿದರು.

    ಕೋಟ್​:
    ಕೇಂದ್ರದಲ್ಲಿ ಸ್ಪಷ್ಟ ಬಹುಮತ ಪಡೆದು ಅಧಿಕಾರಕ್ಕೆ ಬರಲು 272 ಸ್ಥಾನ ಬೇಕು. ಆದರೆ, ಕಾಂಗ್ರೆಸ್​ ಕೇವಲ 230 ಸ್ಥಾನಗಳಲ್ಲಿ ಸ್ಪರ್ಧೆ ಮಾಡಿದೆ. ಕಡಿಮೆ ಕ್ಷೇತ್ರಗಳಲ್ಲಿ ಸ್ಪಧಿರ್ಸಿ, ಜನರನ್ನು ಬೋಗಸ್​ ಆಗಿ ದಾರಿ ತಪ್ಪಿಸುವ ಹಾಗೂ ಮೋಸ ಮಾಡುವ ಪ್ರವೃತ್ತಿ ಕಾಂಗ್ರೆಸ್​ ಪಕ್ಷದ್ದಾಗಿದೆ. ಗ್ಯಾರಂಟಿ ಹಣೆಬರಹ ಜನರಿಗೆ ಅರ್ಥ ಆಗಿದೆ. ಆದರಿಂದ ಕಾಂಗ್ರೆಸ್ಸಿನ ಈ ಗ್ಯಾರಂಟಿ ನಾಟಕ ನಡೆಯುವುದಿಲ್ಲ.
    – ಸಿ.ಸಿ. ಪಾಟೀಲ. ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts