More

    ಸುಶಾಂತ್ ಸಿಂಗ್ ಸೋದರಿ ಪ್ರಿಯಾಂಕಾ ವಿರುದ್ಧ ಸಿಬಿಐ ತನಿಖೆಗೆ ಕೋರ್ಟ್ ಅಸ್ತು

    ಮುಂಬೈ: ದಿವಂಗತ ಬಾಲಿವುಡ್ ನಟ ಸುಶಾಂತ್ ಸಿಂಗ್ ರಾಜಪೂತ್ ಸೋದರಿ ಪ್ರಿಯಾಂಕಾ ಸಿಂಗ್​ ವಿರುದ್ಧ ನಕಲಿ ಪ್ರಿಸ್​ಕ್ರಿಪ್ಷನ್ ಮೇಲೆ ಡ್ರಗ್ಸ್ ಒದಗಿಸಿದ ಆರೋಪದಡಿ ದಾಖಲಿಸಿರುವ ಕ್ರಿಮಿನಲ್ ಕೇಸು ಕಾನೂನುಬದ್ಧವಾಗಿದೆ ಎಂದು ಬಾಂಬೆ ಹೈಕೋರ್ಟ್ ಹೇಳಿದೆ. ಸುಶಾಂತ್​ನ ಮತ್ತೊಬ್ಬ ಸೋದರಿ ಮೀಟು ಸಿಂಗ್ ಮೇಲೆ ದಾಖಲಿಸಿದ್ದ ಇದೇ ಆರೋಪದ ಕೇಸನ್ನು ಹೈಕೋರ್ಟ್ ವಜಾ ಮಾಡಿದೆ.

    ನಟಿ ರಿಯಾ ಚಕ್ರಬೋರ್ತಿ ದೂರಿನ ಮೇರೆಗೆ ಸಿಬಿಐ ಪೊಲೀಸರು ಪ್ರಿಯಾಂಕಾ ಮೇಲೆ ಫೋರ್ಜರಿ ಮತ್ತು ನಾರ್ಕೋಟಿಕ್ ಡ್ರಗ್ಸ್ ಕಾಯ್ದೆಯ ಉಲ್ಲಂಘನೆಯ ಕೇಸನ್ನು ದಾಖಲಿಸಿದ್ದರು. ಇದರ ವಿರುದ್ಧ ಸುಶಾಂತ್ ಸೋದರಿಯರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠ, ಪ್ರಿಯಾಂಕಾ ವಿರುದ್ಧ ಸಿಬಿಐ ತನಿಖೆಯು ಮುಂದುವರಿಯಬಹುದು ಎಂದಿದೆ.

    ಇದನ್ನೂ ಓದಿ: ಸುಶಾಂತ್ ಸಿಂಗ್ ಸಾವಿನ ಪ್ರಕರಣ : ನಾಪತ್ತೆಯಾಗಿದ್ದ ಸಹಾಯಕ ನಿರ್ದೇಶಕ ಪೊಲೀಸ್ ವಶಕ್ಕೆ

    ಸುಶಾಂತ್ ಸಿಂಗ್ ರಾಜಪೂತ್ ಸಾಯುವುದಕ್ಕೆ 6 ದಿನಗಳ ಮುಂಚೆ, ಜೂನ್ 8 ರಂದು, ಆತನ ಸೋದರಿ ಪ್ರಿಯಾಂಕಾ ಸಿಂಗ್ ವಾಟ್ಸ್​ಆ್ಯಪ್​ನಲ್ಲಿ ಸೈಕ್ಯಾಟ್ರಿಕ್ ಡ್ರಗ್​ಗಳ ಮೆಡಿಕಲ್ ಪ್ರಿಸ್​ಕ್ರಿಪ್ಷನ್ ಕಳುಹಿಸಿದ್ದರು. ಖಿನ್ನತೆ ಮತ್ತು ಆತಂಕಗಳ ಸಮಸ್ಯೆಗೆ ಮನೋವೈದ್ಯರು ನೀಡುವ ಲಿಬ್ರಿಯಂ, ನೆಕ್ಸಿಟೋ ಮತ್ತು ಲೊನಾಜೆಪ್​ ಎಂಬ ಮಾತ್ರೆಗಳನ್ನು ತೆಗೆದುಕೊಳ್ಳಲು ಪ್ರಿಯಾಂಕಾ ಸೂಚಿಸಿದ್ದರು ಎನ್ನಲಾಗಿದೆ.

    ಸೆಪ್ಟೆಂಬರ್​ನಲ್ಲಿ ಹೊರಬಿದ್ದ ಈ ಚಾಟ್​ಗಳ ವಿವರವು, ಸುಶಾಂತ್​ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದುದು ಆತನ ಕುಟುಂಬಕ್ಕೆ ಗೊತ್ತಿತ್ತು ಎಂಬುದನ್ನು ಬೆಳಕಿಗೆ ತಂದಿತ್ತು. ಆದರೆ, ಸುಶಾಂತ್​ನ ಕುಟುಂಬವು ನಟಿ ರಿಯಾ ಚಕ್ರಬೋರ್ತಿ ಆತನ ಬ್ಯಾಂಕ್​ ಖಾತೆಗಳಿಂದ ಕೋಟಿಗಟ್ಟಲೆ ಹಣ ಕದ್ದು, ಅವನನ್ನು ಮಾನಸಿಕವಾಗಿ ಹಿಂಸೆ ಮಾಡುತ್ತಿದ್ದಳು ಎಂದು ಆಪಾದಿಸಿತ್ತು. ಈ ಬಗ್ಗೆ ಸಿಬಿಐ ತನಿಖೆ ನಡೆಯುತ್ತಿದೆ.(ಏಜೆನ್ಸೀಸ್)

    ‘ನನ್ನ ವಾಲೆಂಟೈನ್ – ಪ್ರತಿದಿನ, ಎಂದೆಂದಿಗೂ’ ಎಂದು ಸನ್​ಸೆಟ್​ ಫೋಟೋ ಹಾಕಿದ ಅನುಷ್ಕಾ

    ಸುಪ್ರೀಂ ಕೋರ್ಟ್ ಮುಂದೆ ವಾಟ್ಸ್​ಆ್ಯಪ್ ಹೊಸ ನೀತಿ ವಿವಾದ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts