More

    ಲೂಸಿಫರ್ ರಿಮೇಕ್​ನಲ್ಲಿ ಚಿರಂಜೀವಿಗೆ ಜೋಡಿಯಾಗಲಿದ್ದಾರೆ ಬಾಲಿವುಡ್​ನ ಈ ನಾಯಕಿ!

    ಹೈದರಾಬಾದ್: ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ಆಚಾರ್ಯ ಸಿನಿಮಾ ಕೆಲಸಗಳು ಕೋವಿಡ್​ನಿಂದ ಸ್ಥಗಿತಗೊಂಡಿದೆ. ಅದರ ಜತೆಗೆ ಮಲಯಾಳಂನ ‘ಲೂಸಿಫರ್’ ಚಿತ್ರದ ರಿಮೇಕ್ ಸಿದ್ಧತೆಗಳೂ ನಡೆಯುತ್ತಿವೆ. ವಿಶೇಷ ಏನೆಂದರೆ ಈ ಚಿತ್ರದಲ್ಲಿ ನಾಯಕಿಯಾಗಿ ಬಾಲಿವುಡ್ ನಟಿ ವಿದ್ಯಾ ಬಾಲನ್ ನಟಿಸಲಿದ್ದಾರಂತೆ.

    ಇದನ್ನೂ ಓದಿ: ಮೊದಲು ಮಾನವರಾಗೋಣ … ರಶ್ಮಿಕಾ ಬಗ್ಗೆ ಮಾತಾಡಿದವರ ಬಗ್ಗೆ ರಕ್ಷಿತ್ ಬೇಸರ

    ಈ ಹಿಂದೆ ಸುದ್ದಿಯಾದಂತೆ ಲೂಸಿಫರ್ ರಿಮೇಕ್​ನಲ್ಲಿ ತ್ರಿಷಾ ಕೃಷ್ಣನ್ ನಟಿಸಲಿದ್ದಾರೆ ಎಂಬ ಸುದ್ದಿ ಈ ಹಿಂದೆ ಹರಿದಾಡಿತ್ತು. ಆದರೆ ಇದೀಗ ವಿದ್ಯಾ ಬಾಲನ್ ಹೆಸರು ಕೇಳಿಬರುತ್ತಿದೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ, ಚಿರಂಜೀವಿ ನಟನೆಯ ‘ಆಚಾರ್ಯ’ ಚಿತ್ರದಲ್ಲಿಯೇ ತ್ರಿಷಾ ನಟಿಸಬೇಕಿತ್ತು. ಅದು ಕಾಜಲ್ ಅಗರ್​ವಾಲ್ ಪಾಲಾಯಿತು. ಅದಾದ ಬಳಿಕ ಲೂಸಿಫರ್ ರಿಮೇಕ್​ನಲ್ಲಿಯೂ ಹೆಸರು ಕೇಳಿಬಂದಿತ್ತಾದರೂ, ಇದೀಗ ವಿದ್ಯಾ ಬಾಲನ್ ಹೆಸರು ತಳುಕು ಹಾಕಿಕೊಂಡಿದೆ.

    ಲೂಸಿಫರ್ ರಿಮೇಕ್​ನಲ್ಲಿ ಚಿರಂಜೀವಿಗೆ ಜೋಡಿಯಾಗಲಿದ್ದಾರೆ ಬಾಲಿವುಡ್​ನ ಈ ನಾಯಕಿ!

    ಇದನ್ನೂ ಓದಿ: ದರ್ಶನ್-ಪ್ರೇಮ್ ಹೊಸ ಚಿತ್ರ … ಸುದ್ದಿ ನಿರಾಕರಿಸಿದ ರಕ್ಷಿತಾ ಪ್ರೇಮ್

    ಮೋಹನ್ ರಾಜಾ ಈ ಚಿತ್ರಕ್ಕೆ ನಿರ್ದೇಶನ ಮಾಡಲಿರುವ ಈ ಸಿನಿಮಾದ ಕೆಲಸಗಳು ತೆರೆಮರೆಯಲ್ಲಿ ನಡೆಯುತ್ತಿದ್ದು, ಇನ್ನೇನು ಲಾಕ್​ಡೌನ್​ ಅಂತ್ಯವಾಗುತ್ತಿದ್ದಂತೆ, ಪಾತ್ರವರ್ಗದ ಆಯ್ಕೆ ಮಾಡಿಕೊಂಡು ಶೂಟಿಂಗ್​ ಶುರು ಮಾಡಿಕೊಳ್ಳುವುದು ತಂಡದ ಪ್ಲ್ಯಾನ್. ಮಲಯಾಳಂನಲ್ಲಿ ಮೋಹನ್​ಲಾಲ್ ನಟಿಸಿದ್ದ ಈ ಸಿನಿಮಾವನ್ನು ಪೃಥ್ವಿರಾಜ್ ಸುಕುಮಾರನ್ ನಿರ್ದೇಶನ ಮಾಡಿದ್ದರು. ಮಾಲಿವುಡ್​ನಲ್ಲಿ ದೊಡ್ಡ ಮಟ್ಟದ ಯಶಸ್ಸು ಈ ಚಿತ್ರಕ್ಕೆ ಸಿಕ್ಕಿತ್ತು. ಇದೀಗ ತೆಲುಗಿನಲ್ಲಿ ರಿಮೇಕ್​ ಆಗಲು ಸಿದ್ಧತೆ ನಡೆಸುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts