More

    ರವೀನಾ ಟಂಡನ್ ಸಂದರ್ಶನ: ಕೆಜಿಎಫ್​ ಚಾಪ್ಟರ್​ 2ರಲ್ಲಿ ರಮಿಕಾ ಸೇನ್ ಬರೀ ಪ್ರಧಾನಿ ಅಲ್ಲ… ಅವರಿಗೆ ಇನ್ನೊಂದು ಮುಖವಿದೆ..

    ಕೆಜಿಎಫ್​ ಚಾಪ್ಟರ್ 2 ಸಿನಿಮಾದ ಟೀಸರ್​ಗೆ ದಿನಗಣನೆ ಶುರುವಾಗಿದೆ. ಇನ್ನೇನು ಜ.8ರ ಯಶ್ ಜನ್ಮದಿನಕ್ಕೆ ಚಿತ್ರದ ಟೀಸರ್ ಹೊಂಬಾಳೆ ಫಿಲಂಸ್ ಯೂಟ್ಯೂಬ್ ಚಾನಲ್​ನಲ್ಲಿ ಬಿಡುಗಡೆಯಾಗಲಿದೆ. ಈ ನಡುವೆಯೇ ಚಿತ್ರದಲ್ಲಿ ರಮಿಕಾ ಸೇನ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಬಾಲಿವುಡ್ ನಟಿ ರವೀನಾ ಟಂಡನ್​ ಕೆಜಿಎಫ್​ ಸಿನಿಮಾ ಬಗ್ಗೆ ಮಾತನಾಡಿದ್ದಾರೆ.

    * ಮೊದಲ ಸಲ ಯಶ್ ಜತೆಗೆ ಸ್ಕ್ರೀನ್ ಶೇರ್​ ಮಾಡಿಕೊಂಡ ಅನುಭವ ಹೇಗಿತ್ತು
    – ನಿಜಕ್ಕೂ ಅದು ಅಮೆಜಿಂಗ್ ಅನುಭವ. ಯಶ್​ ವ್ಯಕ್ತಿತ್ವದಲ್ಲಿ ತುಂಬ ಸ್ವೀಟ್. ಅಷ್ಟೇ ಪ್ರತಿಭಾವಂತ ನಟ. ಅವರೊಂದಿಗೆ ನಟನೆ ಮಾಡಿದ್ದು, ಖುಷಿಯ ವಿಚಾರಗಳಲ್ಲೊಂದು.

    * ಚಿತ್ರದಲ್ಲಿನ ನಿಮ್ಮ ಪಾತ್ರದ ಬಗ್ಗೆ ಸಣ್ಣ ಎಳೆಯನ್ನು ಹೇಳಬಹುದೇ?
    – ನನ್ನ ಪಾತ್ರ ಯಾವುದೆಂದು ಈಗಾಗಲೇ ಎಲ್ಲರಿಗೂ ಗೊತ್ತಿರುವ ವಿಚಾರವೇ. ಆದರೆ, ನನ್ನ ಪಾಲಿಗೆ ಅದು ತುಂಬ ವಿಭಿನ್ನ ಪಾತ್ರ. ರಮಿಕಾ ಸೇನ್ ತುಂಬ ಪವರ್​ಫುಲ್​ ವ್ಯಕ್ತಿತ್ವದ ಮಹಿಳೆ. ಒಂದಷ್ಟು ಭಾಗದಲ್ಲಿ ನೆಗೆಟಿವ್​ ಶೇಡ್​ ರೀತಿಯಲ್ಲಿ ಕಾಣಿಸಿದರೂ, ಆ ಪಾತ್ರ ಸಾಗುವ ರೀತಿಯನ್ನು ನೀವ್ಯಾರು ಊಹಿಸಲು ಆಗುವುದಿಲ್ಲ.

    * ಯಶ್ ಜತೆ ನಟಿಸಿದ್ದಕ್ಕೆ ನಿಮ್ಮ ಅಭಿಮಾನಿಗಳೂ ಸಖತ್ ಎಗ್ಸೈಟ್ ಆಗಿದ್ದಾರೆ. ನಿಮ್ಮ ಸೋಷಿಯಲ್ ಮೀಡಿಯಾದಲ್ಲಿ ಯಾವೆಲ್ಲ ಸಂದೇಶಗಳು ಬರುತ್ತಿವೆ.
    – ನನ್ನ ಅಭಿಮಾನಿಗಳು ಕೆಜಿಎಫ್​ ಅನ್ನೋ ಪ್ಯಾನ್​ ಇಂಡಿಯಾ ಸಿನಿಮಾದಲ್ಲಿ ನನ್ನನ್ನು ನೋಡಲು ಕಾತರರಾಗಿದ್ದಾರೆ. ಅದರಲ್ಲೂ ಕೆಜಿಎಫ್​ ಮೊದಲ ಭಾಗಕ್ಕೆ ದೊಡ್ಡ ಅಭಿಮಾನಿ ಬಳಗವಿದೆ. ಅದೇ ರೀತಿ ಎರಡನೇ ಭಾಗಕ್ಕೆ ಅದರ ಸಂಖ್ಯೆ ದುಪ್ಪಟ್ಟಾಗಿದೆ. ನನ್ನ ಮೊದಲ ಲುಕ್​ ಅಭಿಮಾನಿಗಳಿಗೆ ಇಷ್ಟವಾಗಿದೆ. ತೆರೆಮೇಲೆ ನನ್ನ ಪಾತ್ರವನ್ನೂ ಇಷ್ಟಪಡಲಿದ್ದಾರೆ.

    ರವೀನಾ ಟಂಡನ್ ಸಂದರ್ಶನ: ಕೆಜಿಎಫ್​ ಚಾಪ್ಟರ್​ 2ರಲ್ಲಿ ರಮಿಕಾ ಸೇನ್ ಬರೀ ಪ್ರಧಾನಿ ಅಲ್ಲ... ಅವರಿಗೆ ಇನ್ನೊಂದು ಮುಖವಿದೆ..

    * ಈ ಸಿನಿಮಾದಲ್ಲಿ ನಿಮ್ಮಿಂದ ಆ್ಯಕ್ಷನ್​ ಸನ್ನಿವೇಶಗಳನ್ನು ನಿರೀಕ್ಷೆ ಮಾಡಬಹುದೇ?
    – ಹ್ಹ ಹ್ಹ.. ಆ ಕೌತುಕವನ್ನು ನೀವು ತೆರೆಮೇಲೆಯೇ ನೋಡಬೇಕು…

    * ಈ ಸಿನಿಮಾ ಬಗ್ಗೆ ನಿಮ್ಮ ಅಭಿಪ್ರಾಯ
    – ಚಿತ್ರದ ಸ್ಟೋರಿ ಲೈನ್ ಕೇಳಿಯೇ ನಾನು ಸಾಕಷ್ಟು ಆಕರ್ಷಿತಳಾದೆ. ಮೊದಲ ಭಾಗದ ಸಿನಿಮಾ ವೀಕ್ಷಣೆಗೂ ಮುನ್ನ ನಿರ್ದೇಶಕ ಪ್ರಶಾಂತ್ ನೀಲ್ ನನಗೆ ಈ ಪಾತ್ರದ ಕಥೆ ಹೇಳಿದ್ದರು. ಯಾವಾಗ ನಾನು ಸಿನಿಮಾ ನೋಡಿದೆ. ನನ್ನನ್ನು ನಾನೇ ಕಳೆದುಹೋದೆ. ಇದೊಂದು ಹೊಸ ಪೀಳಿಗೆಯ ಸಿನಿಮಾ. ಅದೇ ರೀತಿಯಲ್ಲಿ ಎರಡನೇ ಭಾಗವೂ ಸಿದ್ಧವಾಗಲಿದೆ ಎಂಬುದನ್ನು ತಿಳಿದು ಈ ಸಿನಿಮಾ ಆಯ್ದುಕೊಂಡೆ. ನನ್ನ ಪಾತ್ರವೂ ಅಷ್ಟೇ ಇಂಟ್ರೆಸ್ಟಿಂಗ್ ಆಗಿದ್ದರಿಂದ ಬೇಡ ಎನ್ನಲು ಮನಸಾಗಲಿಲ್ಲ.

    ರವೀನಾ ಟಂಡನ್ ಸಂದರ್ಶನ: ಕೆಜಿಎಫ್​ ಚಾಪ್ಟರ್​ 2ರಲ್ಲಿ ರಮಿಕಾ ಸೇನ್ ಬರೀ ಪ್ರಧಾನಿ ಅಲ್ಲ... ಅವರಿಗೆ ಇನ್ನೊಂದು ಮುಖವಿದೆ..

    * ಹೊಂಬಾಳೆ ಸಂಸ್ಥೆ ಮತ್ತು ಪ್ರಶಾಂತ್ ನೀಲ್ ಜತೆಗಿನ ಶೂಟಿಂಗ್ ಅನುಭವ ಹೇಗಿತ್ತು
    – ಪ್ರಶಾಂತ್ ಸಿನಿಮಾ ಕೆಲಸ ತುಂಬ ಪವರ್​ಫುಲ್. ಆ ಕಾರಣಕ್ಕೆ ಅವರ ಕೆಲಸ ನನಗಿಷ್ಟ. ಅವರ ಐಡಿಯಾಗಳು ನಿಜಕ್ಕೂ ಇಂಕ್ರೆಡಿಬಲ್. ಮತ್ತೆ ಅಷ್ಟೇ ಕೂಲ್ ಮನುಷ್ಯ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts