More

    ಕೆಜಿಎಫ್​ ಚಾಪ್ಟರ್ 2 ಸಿನಿಮಾದಲ್ಲಿ ಐಟಂ ಡ್ಯಾನ್ಸರ್ ಆಗಿ ಕಾಣಿಸಿಕೊಳ್ಳಲಿದ್ದಾರೆ ನೋರಾ ಫತೇಹಿ

    ಯಶ್ ಅಭಿನಯದ ‘ಕೆಜಿಎಫ್ 2’ ಚಿತ್ರತಂಡದಿಂದ ಅಧಿಕೃತ ಅಪ್​ಡೇಟ್​ಗಳು ಬರದೇ ಬಹಳ ದಿನಗಳೇ ಆಗಿವೆ. ಆದರೆ, ಗಾಳಿಸುದ್ದಿಗಳಿಗೆ ಮಾತ್ರ ಬರವಿಲ್ಲ. ಆಗಾಗ ಒಂದಲ್ಲ ಒಂದು ಗಾಳಿಸುದ್ದಿಗಳು ಕೇಳಿ ಬರುತ್ತಲೇ ಇದ್ದು, ಇದೀಗ ಚಿತ್ರದಲ್ಲಿ ನೋರಾ ಫತೇಹಿ ಐಟಂ ಡ್ಯಾನ್ಸ್ ಮಾಡಿದ್ದಾರೆ ಎಂಬ ಸುದ್ದಿಯೊಂದು ಕೇಳಿಬಂದಿದೆ.

    ‘ಕೆಜಿಎಫ್ – ಚಾಪ್ಟರ್ 1’ ಚಿತ್ರದಲ್ಲಿ ‘ಗಲಿಗಲಿ ಮೇ …’ ಎಂಬ ಐಟಂ ಸಾಂಗ್​ಗೆ ಯಶ್ ಜತೆಗೆ ಮೌನಿ ರಾಯ್ ಹೆಜ್ಜೆ ಹಾಕಿದ್ದು ನೆನಪಿರಬಹುದು. ಇದೀಗ ‘ಕೆಜಿಎಫ್ – ಚಾಪ್ಟರ್ 2’ ಚಿತ್ರದಲ್ಲಿ ಯಶ್ ಜತೆಗೆ ನೋರಾ ಫತೇಹಿ ಕುಣಿದಿದ್ದಾರಂತೆ. ಈ ಬಾರಿ, ‘ಶೋಲೆ’ ಚಿತ್ರದ ‘ಮೆಹಬೂಬಾ’ ಹಾಡನ್ನು ಈ ಚಿತ್ರಕ್ಕಾಗಿ ವಿಶೇಷವಾಗಿ ರೀಮಿಕ್ಸ್ ಮಾಡಲಾಗಿದ್ದು, ಈಗಾಗಲೇ ಫೆಬ್ರವರಿಯಲ್ಲಿ ಸದ್ದಿಲ್ಲದೆ ಹೈದರಾಬಾದ್​ನಲ್ಲಿ ಚಿತ್ರೀಕರಣ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ, ಚಿತ್ರತಂಡ ಮಾತ್ರ ಇದುವರೆಗೂ ಯಾವ ವಿಷಯವನ್ನೂ ಬಾಯಿಬಿಟ್ಟಿಲ್ಲ.

    ‘ಕೆಜಿಎಫ್ – 2’ ಚಿತ್ರವು ಜುಲೈ 16ರಂದು ಜಗತ್ತಿನಾದ್ಯಂತ ಬಿಡುಗಡೆ ಯಾಗಲಿದೆ ಎಂದು ಈಗಾಗಲೇ ಘೋಷಿಸಲಾಗಿದೆ. ಆದರೆ, ಇದೀಗ ಕರೊನಾದಿಂದಾಗಿ ದೊಡ್ಡ ಚಿತ್ರಗಳೆ ಬಿಡುಗಡೆ ಮುಂದೂಡಲ್ಪಡುತ್ತಿರುವುದರಿಂದ, ‘ಕೆಜಿಎಫ್ – 2’ ಬಿಡುಗಡೆಯಲ್ಲೂ ಏನಾದರೂ ವ್ಯತ್ಯಾಸವಾಗುತ್ತದಾ ಎಂಬ ಭಯ ಮತ್ತು ಗೊಂದಲ ಯಶ್ ಅವರ ಅಭಿಮಾನಿ ವಲಯದಲ್ಲಿ ಸಹಜವಾಗಿಯೇ ಇದೆ. ಆದರೆ, ಚಿತ್ರತಂಡ ಮಾತ್ರ ಈ ಕುರಿತಾಗಿ ಯಾವೊಂದು ಪ್ರತಿಕ್ರಿಯೆಯನ್ನೂ ನೀಡದೆ, ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ತೊಡಗಿಸಿಕೊಂಡಿದೆ.

    ಮಾಲ್ಡೀವ್ಸ್​ನಿಂದ ವಾಪಸ್ಸಾದ ರಣಬೀರ್-ಆಲಿಯಾ, ಟೈಗರ್​-ದಿಶಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts