More

    ಬಾಲಿವುಡ್​ನ ಯಾವ ನಟನಿಂದಲೂ ಕಾಂತಾರ ಸಿನಿಮಾ ​ರಿಮೇಕ್​ ಮಾಡಲು ಸಾಧ್ಯವಿಲ್ಲ ಎಂದ ರಿಷಭ್​!

    ಬೆಂಗಳೂರು: ವಿಮರ್ಶಕರಿಂದ ಮೆಚ್ಚುಗೆ ಪಡೆದ ಕಾಂತಾರ ಕಮರ್ಷಿಯಲ್​ ಸಿನಿಮಾ ಆಗಿಯೂ ಯಶಸ್ಸು ಕಂಡಿದೆ. ಈಗ, ಯಾವ ಬಾಲಿವುಡ್​ ನಟನಿಂದಲೂ ಶಿವನ ಪಾತ್ರ ಮಾಡಲು ಸಾದ್ಯವಿಲ್ಲ ಎಂದು ರಿಷಭ್ ಹೇಳಿದ್ದಾರೆ.

    ಖಾಸಗಿ ಸಂದರ್ಶನ ಒಂದರಲ್ಲಿ ರಿಷಭ್ ಶೆಟ್ಟಿಗೆ ‘ಕಾಂತಾರ ಸಿನಿಮಾವನ್ನು ಹಿಂದಿಯಲ್ಲಿ ರಿಮೇಕ್​ ಮಾಡಿದರೆ ಯಾವ ಬಾಲಿವುಡ್​ ನಟ ಶಿವನ ಪಾತ್ರವನ್ನು ನಿರ್ವಹಿಸಬಲ್ಲರು’ ಎಂದು ಕೇಳಿದ್ದಾರೆ.

    ಅದಕ್ಕೆ ಉತ್ತರಿಸಿದ ಶೆಟ್ರು ‘ಬಹುಷಃ ಯಾರಿಂದಲೂ ಸಾಧ್ಯವಿಲ್ಲ. ನಾನು ಆ ಪಾತ್ರವನ್ನು ಇನ್ನೊಬ್ಬ ನಟನಿಗೆ ಹೇಗೆ ವಿವರಿಸುತ್ತೇನೋ ಗೊತ್ತಿಲ್ಲ. ನಾನು ಭೂತ ಕೋಲದ ಸೀಕ್ವೆನ್ಸ್​ಗೆ ಭಾವನಾತ್ಮಕವಾಗಿ ಕನೆಕ್ಟ್​ ಆಗಿದ್ದೇನೆ. ಅದರ ನಟನೆ ಭಾವನಾತ್ಮಕ ಹಾಗೂ ಆಧ್ಯಾತ್ಮಿಕ ಪ್ರಯಾಣ. ನಾವು ಭೂತ ಕೋಲವನ್ನು ಬಾಲ್ಯದಿಂದ ನೋಡುತ್ತಾ ಬೆಳೆದವರು. ನೀವು ದೈವದಲ್ಲಿ ನಂಬಿಕೆ ಇಡಬೇಕು’ ಎಂದು ಹೇಳಿದರು.

    ಬಳಿಕ ಸ್ಪಷ್ಟನೆ ನೀಡಿದ ರಿಷಭ್​, ‘ಬಾಲಿವುಡ್​ನಲ್ಲಿ ಒಳ್ಳೆಯ ನಟರಿಗೆ ಕೊರತೆ ಇಲ್ಲ. ಆದರೆ ನನ್ನಿಂದ ಶಿವನ ಪಾತ್ರವನ್ನು ಬಾಲಿವುಡ್​ ನಟರು ನಿರ್ವಹಿಸುವುದನ್ನು ಊಹಿಸಲು ಸಾಧ್ಯವಿಲ್ಲ’ ಎಂದು ಹೇಳಿದರು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts