More

    ದಕ್ಕೆಯಲ್ಲಿ ಲಂಗರು ಹಾಕಿದ ಬೋಟುಗಳು

    ಮಂಗಳೂರು: ಮಂಗಳೂರು ದಕ್ಕೆಯಿಂದ ಆಳ ಸಮುದ್ರ ಮೀನುಗಾರಿಕೆ ನಡೆಸಲು ತೆರಳುತ್ತಿದ್ದ ಹೊರ ರಾಜ್ಯಗಳ ಸುಮಾರು 2,500 ಕಾರ್ಮಿಕರು ಗುರುವಾರ ರಾತ್ರಿ ತಮ್ಮ ಊರುಗಳಿಗೆ ವಾಪಸ್ಸಾಗಿದ್ದಾರೆ.

    ಮೀನುಗಾರ ಮುಖಂಡರು ಜಿಲ್ಲಾಡಳಿತದ ಸಹಕಾರದೊಂದಿಗೆ ಪ್ರತ್ಯೇಕ ಬಸ್‌ಗಳಲ್ಲಿ ಈ ಬೋಟ್ ಸಿಬ್ಬಂದಿಯನ್ನು ಕಳುಹಿಸಿಕೊಟ್ಟರು. ಮಂಗಳೂರು ಹಳೇ ಬಂದರಿನಿಂದ ಆಳ ಸಮುದ್ರ ಮೀನುಗಾರಿಕೆಗೆ ತೆರಳುವ ಬಹುತೇಕ ಎಲ್ಲ ಬೋಟುಗಳಲ್ಲಿ ಆಂಧ್ರಪ್ರದೇಶ, ತಮಿಳುನಾಡು ರಾಜ್ಯಗಳ ಜನರೇ ದುಡಿಯುತ್ತಿದ್ದಾರೆ. ಕರೊನಾ ಭೀತಿ ಹಿನ್ನೆಲೆಯಲ್ಲಿ ಇಲಾಖೆ ಸೂಚನೆ ಪ್ರಕಾರ ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದ ಎಲ್ಲ ಬೋಟ್‌ಗಳು ಮಾರ್ಚ್ 25ರೊಳಗೆ ಮಂಗಳೂರು ಹಳೇ ಬಂದರು ದಡ ಸೇರಿದ್ದವು.

    ದಡ ಸೇರಿರುವ ಬೋಟ್‌ಗಳ ಸಿಬ್ಬಂದಿಯನ್ನು ಕರೊನಾ ಸೋಂಕು ಭೀತಿ ಕಾರಣದಿಂದ ಮಂಗಳೂರು ನಗರದಲ್ಲೇ ಒಂದು ಕಡೆ ಇರಿಸಿಕೊಳ್ಳುವಂತೆ ಇರಲಿಲ್ಲ. ಸೋಂಕು ಭೀತಿ ಶೀಘ್ರವಾಗಿ ನಿವಾರಣೆಯಾಗುವ ಮುನ್ಸೂಚನೆ ಇಲ್ಲದ ಕಾರಣ ಬೋಟ್ ಸಿಬ್ಬಂದಿಯನ್ನು ಅವರ ಊರಿಗೆ ಕಳುಹಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ಮೀನುಗಾರ ಮುಖಂಡ ನಿತಿನ್ ಕುಮಾರ್ ತಿಳಿಸಿದ್ದಾರೆ.
    ದಡ ಸೇರಿದ ಬೋಟ್‌ಗಳಲ್ಲಿ ಇದ್ದ ಬಹುಪಾಲು ಮೀನುಗಳನ್ನು ಮೀನು ಸಂಸ್ಕರಣ ಘಟಕಗಳಿಗೆ ಕಳುಹಿಸಲಾಗಿದೆ. ಸ್ವಲ್ಪ ಮೀನುಗಳನ್ನು ಅಗ್ಗದ ದರದಲ್ಲಿ ಸ್ಥಳೀಯವಾಗಿ ಮಾರಾಟ ಮಾಡಲಾಗಿದೆ.

     ಸಾಂಪ್ರದಾಯಿಕ ಚಾಲೂ: ಆಳ ಸಮುದ್ರ ಮೀನುಗಾರಿಕೆ ಪೂರ್ಣ ಬಂದ್ ಬಳಿಕವೂ ಸ್ಥಳೀಯ ಅಗತ್ಯಗಳಿಗೆ ಸ್ಥಳೀಯ ಮೀನುಗಾರರು ಸಾಂಪ್ರದಾಯಿಕ ಮೀನುಗಾರಿಕೆ ಮುಂದುವರಿಸಿದ್ದಾರೆ. ಇದರಲ್ಲಿ ಸಣ್ಣ ಬಂಗುಡೆ, ಎರಬಾಯಿ, ಮಣಂಗ್, ಬೆರಕೆಯಂತಹ ಮೀನುಗಳು ದುಬಾರಿ (ಸುಮಾರು ಮೂರು ಪಟ್ಟು) ದರಕ್ಕೆ ಶುಕ್ರವಾರ ಮಾರಾಟವಾಗುತ್ತಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts