More

    ಪೆಸಿಫಿಕ್​ ಮಹಾಸಾಗರದಿಂದ ಪ್ಲಾಸ್ಟಿಕ್​ ತ್ಯಾಜ್ಯ ಸಂಗ್ರಹ ಬೋಟ್​ ತಂದ ಕಸ ಎಷ್ಟು ಗೊತ್ತಾ?

    ನವದೆಹಲಿ: ಕೋವಿಡ್​-19 ಪಿಡುಗಿನ ಹಿನ್ನೆಲೆಯಲ್ಲಿ ವಿಶ್ವದ ನಾನಾ ಭಾಗಗಳಲ್ಲಿ ಲಾಕ್​ಡೌನ್​ ಜಾರಿಯಲ್ಲಿದೆ. ಹಲವೆಡೆ ಹಂತಹಂತವಾಗಿ ಲಾಕ್​ಡೌನ್​ ತೆರಯಲಾಗುತ್ತಿದ್ದರೂ ಜನರು ಪ್ರವಾಸಕ್ಕೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದಾಗಿ ಸಮುದ್ರತಟಗಳು ಸೇರಿ ಬಹುತೇಕ ಪ್ರವಾಸಿತಾಣಗಳು ಸುಂದರವಾಗಿಯೂ, ಸ್ವಚ್ಛವಾಗಿಯೂ ಕಂಗೊಳಿಸುತ್ತಿವೆ.

    ಈ ಅವಕಾಶವನ್ನು ಬಳಸಿಕೊಂಡು ಪೆಸಿಫಿಕ್​ ಮಹಾಸಾಗರದಲ್ಲಿ ಹರಡಿದ್ದ ಪ್ಲಾಸ್ಟಿಕ್​ ತ್ಯಾಜ್ಯವನ್ನು ಸಂಗ್ರಹಿಸಲು ಪ್ಲಾಸ್ಟಿಕ್​ ತ್ಯಾಜ್ಯ ಸಂಗ್ರಹ ಬೋಟ್​ವೊಂದು ತೆರಳಿತ್ತು. ಓಷನ್​ ವೋಯೋಜಸ್​ ಇನ್​ಸ್ಟಿಟ್ಯೂಟ್​ನ ಈ ಬೋಟು 48 ದಿನ ಪ್ರಯಾಣ ಕೈಗೊಂಡು ಹವಾಯ್​ನ ಹೊನಲುಲು ಬಂದರಿಗೆ ಬಂದು ತಲುಪಿದ್ದು, 2.06 ಲಕ್ಷ ಪೌಂಡ್​ ಮೀನುಗಾರಿಕಾ ಬಲೆ ಮತ್ತಿತರ ಪ್ಲಾಸ್ಟಿಕ್​ ತ್ಯಾಜ್ಯ ಸೇರಿ ಒಟ್ಟು 103 ಟನ್​ ತ್ಯಾಜ್ಯವನ್ನು ಹೆಕ್ಕಿ ತಂದಿದೆ. ಇದೊಂದು ದಾಖಲೆಯಾಗಿದೆ.

    2019ರಲ್ಲೂ ಇಂಥದ್ದೇ ಕೆಲಸ ಮಾಡಿದ್ದ ಈ ಬೋಟು 25 ದಿನ ಪ್ರಯಾಣಿಸಿ ಆಗ ದಾಖಲೆ ಎನಿಸಿದ್ದ 48 ಟನ್​ ಪ್ಲಾಸ್ಟಿಕ್​ ತ್ಯಾಜ್ಯವನ್ನು ಹೊರತಂದಿತ್ತು.

    ಇದನ್ನೂ ಓದಿ: ಟಿಬೆಟ್​ನಂತೆ ಹಾಂಗ್​ಕಾಂಗನ್ನು ಹೊಸಕಿದ ಚೀನಾ; ಭದ್ರತಾ ಕಾಯ್ದೆ ಅಂಗೀಕಾರ; ಪ್ರಜಾಪ್ರಭುತ್ವ ಹೋರಾಟಕ್ಕೆ ಭಾರಿ ಹಿನ್ನಡೆ

    ನಮ್ಮ ಬೋಟ್​ನ ಕಠಿಣ ಪರಿಶ್ರಮಿ ಕೆಲಸಗಾರರ ಬಗ್ಗೆ ಹೆಮ್ಮೆ ಎನಿಸುತ್ತಿದೆ. ನಾವು 100 ಟನ್​ ವಿಷಕಾರಿ ಪ್ಲಾಸ್ಟಿಕ್​ ತ್ಯಾಜ್ಯ ಮತ್ತು ಮೀನುಗಾರಿಕಾ ಬಲೆಗಳನ್ನು ಸಂಗ್ರಹಿಸುವ ಗುರಿ ಹಾಕಿಕೊಂಡಿದ್ದೆವು. ಅದಕ್ಕಿಂತಲೂ ಹೆಚ್ಚಿನ ಪ್ರಮಾಣದ ತ್ಯಾಜ್ಯವನ್ನು ಸಂಗ್ರಹಿಸಿ ತಂದಿದ್ದೇವೆ. ಮಹಾಸಾಗರದ ಸ್ವಚ್ಛತೆಯನ್ನು ಕಾಪಾಡಲು ಶ್ರಮಿಸುವುದನ್ನು ಮುಂದುವರಿಸಲಿದ್ದೇವೆ. ತನ್ಮೂಲಕ ನಮ್ಮ ಆರೋಗ್ಯದ ಜತೆಗೆ ಭೂಗ್ರಹದ ಆರೋಗ್ಯವನ್ನು ಸಂರಕ್ಷಿಸಲು ಶ್ರಮಿಸಲಿದ್ದೇವೆ ಎಂದು ಓಷನ್​ ವೊಯೋಜಸ್​ ಇನ್​ಸ್ಟಿಟ್ಯೂಟ್​ನ ಸಂಸ್ಥಾಪಕ ಕಾರ್ಯಕಾರಿ ನಿರ್ದೇಶಕ ಮೇರಿ ಕ್ರೌಲಿ ತಿಳಿಸಿದ್ದಾರೆ.

    ಈ ಪ್ಲಾಸ್ಟಿಕ್​ ತ್ಯಾಜ್ಯಗಳು ಮತ್ತು ಮೀನುಗಾರಿಕಾ ಬಲೆಗಳ ತ್ಯಾಜ್ಯಗಳು ಮೈಕ್ರೋಪ್ಲಾಸ್ಟಿಕ್​ ಆಗಿ ತುಂಡಾಗಿ ಸಮುದ್ರದ ಕಾರ್ಬನ್​ ಸಂಗ್ರಹ ಸಾಮರ್ಥ್ಯ ಕ್ಷೀಣಿಸುವಂತೆ ಮಾಡುವ ಮತ್ತು ಸಮುದ್ರದ ಆಹಾರ ಸರಪಳಿ ವಿಷಕಾರಿಯಾಗುವಂತೆ ಮಾಡುವ ಅಪಾಯ ಇರುತ್ತದೆ. ಆದ್ದರಿಂದ, ಇಂಥ ತ್ಯಾಜ್ಯವನ್ನು ನಾವು ತೆರವುಗೊಳಿಸುವ ಅವಶ್ಯತೆ ಇರುತ್ತದೆ ಎಂದು ಹೇಳಿದ್ದಾರೆ.

    ತಮ್ಮ ಸಂಸ್ಥೆಯ ಕೆಲಸಗಾರರು ಸಂಗ್ರಹಿಸಿರುವ ತ್ಯಾಜ್ಯವನ್ನು ಮರುಬಳಕೆಗೆ ಯೋಗ್ಯವಾದ ವಸ್ತುಗಳಾಗಿ ಪರಿವರ್ತಿಸುವುದಾಗಿಯೂ, ಒಂದಿಷ್ಟು ತ್ಯಾಜ್ಯವೂ ಲ್ಯಾಂಡ್​ಫಿಲ್​ಗೆ ಹೋಗದಂತೆ ಎಚ್ಚರವಹಿಸುವುದಾಗಿಯೂ ತಿಳಿಸಿದ್ದಾರೆ.

    ಬ್ಯೂಟಿಪಾರ್ಲರ್​ನ ಬೆಡ್​ ಬಾಕ್ಸ್​ನಲ್ಲಿತ್ತು ಟಿಕ್​ಟಾಕ್​ ಸುಂದರಿಯ ಶವ: ಕೊಲೆ ರಹಸ್ಯ ಭೇದಿಸಿದ ಪೊಲೀಸರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts