More

    ಸರ್ಕಾರಿ ನೌಕರರಿಗಾಗಿ ನಾಳೆಯಿಂದ ಬಿಎಂಟಿಸಿ ಬಸ್​ ಸೇವೆ

    ಬೆಂಗಳೂರು: ರಾಜಧಾನಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರು, ಸಿಬ್ಬಂದಿ ಹಾಗೂ ವಿವಿಧ ನಿಗಮ-ಮಂಡಳಿಗಳ ನೌಕರರ ಅನುಕೂಲಕ್ಕಾಗಿ ಶುಕ್ರವಾರದಿಂದ ಬಿಎಂಟಿಸಿ ಬಸ್​ ಸೇವೆ ಏರ್ಪಡಿಸಲಿರುವುದಾಗಿ ಸಾರಿಗೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಎಂ. ಸತ್ಯವತಿ ತಿಳಿಸಿದ್ದಾರೆ.

    ಈ ಬಗ್ಗೆ ಮಾಹಿತಿ ನೀಡಿರುವ ಅವರು, ಕೋವಿಡ್​ 19 ನಿಯಂತ್ರಿಸಲು ಕೇಂದ್ರ/ರಾಜ್ಯ ಸರ್ಕಾರಗಳು ಅಗತ್ಯ ಸೇವೆಗಳನ್ನು ಏರ್ಪಡಿಸಲು ಅನುಮತಿ ನೀಡಿವೆ. ಈ ಹಿನ್ನೆಲೆಯಲ್ಲಿ ಎಲ್ಲ ಇಲಾಖೆಯ ಸಿಬ್ಬಂದಿ, ನೌಕರರು ಕರ್ತವ್ಯಕ್ಕೆ ಹಾಜರಾಗುವುದು ಕಡ್ಡಾಯವಾಗಿದೆ. ಈ ಕಾರಣದಿಂದ ಅವರ ಓಡಾಟಕ್ಕೆ ಅನುಕೂಲ ಮಾಡಿಕೊಡಲು ಶುಕ್ರವಾರದಿಂದ ಬಿಎಂಟಿಸಿ ಬಸ್​ ಸೇವೆಗಳನ್ನು ಆರಂಭಿಸುತ್ತಿರುವುದಾಗಿ ಹೇಳಿದ್ದಾರೆ.

    ಇದನ್ನೂ ಓದಿ: ಸಂಕಷ್ಟದಲ್ಲಿದ್ದರೂ ನರೇಗಾ ಕಾರ್ಮಿಕರು ದೇಣಿಗೆ ಕೊಟ್ರು, ಏಕೆ?

    ಸೇವೆ ಪಡೆಯುವುದು ಹೇಗೆ? ಬಿಎಂಟಿಸಿ ಬಸ್​ಗಳಲ್ಲಿ ಪ್ರಯಾಣಿಸುವ ಸಿಬ್ಬಂದಿ, ನೌಕರರು ತಮ್ಮ ಗುರುತಿನ ಚೀಟಿ ತೋರಿಸುವುದು ಕಡ್ಡಾಯವಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮಾರ್ಗಸೂಚಿಗಳಲ್ಲಿ ತಿಳಿಸಲಾಗಿರುವಂತೆ ದೈಹಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್​ ಧರಿಸುವುದು ಕಡ್ಡಾಯವಾಗಿದೆ. ಬಸ್​ಗಳಲ್ಲಿ ಟಿಕೆಟ್​ಗಳನ್ನು ನೀಡುವುದಿಲ್ಲವಾದ್ದರಿಂದ, ಮಾಸಿಕ ಬಸ್​ಪಾಸ್​ಗಳನ್ನು ಖರೀದಿಸಿ, ಪ್ರಯಾಣಿಸಲು ಅನುವು ಮಾಡಿಕೊಟ್ಟಿರುವುದಾಗಿ ಎಂ. ಸತ್ಯವತಿ ಹೇಳಿದ್ದಾರೆ.

    ಯಾರಿಗೆಲ್ಲ ಅನ್ವಯ: ಕೇಂದ್ರ/ರಾಜ್ಯ ಸರ್ಕಾರದ ನೌಕರರು, ಅರೆ ಸರ್ಕಾರಿ ಅಧಿಕಾರಿ/ನೌಕರರು, ನಿಗಮ-ಮಂಡಳಿಗಳ ಅಧಿಕಾರಿ, ನೌಕರರು, ಬ್ಯಾಂಕ್​, ವಿಮೆ ಕಂಪನಿಗಳ ಸಿಬ್ಬಂದಿ, ಅರಣ್ಯ ಇಲಾಖೆ ಸಿಬ್ಬಂದಿ, ಪತ್ರಕರ್ತರು, ಪೊಲೀಸ್​ ಇಲಾಖೆ ಸಿಬ್ಬಂದಿ ಹಾಗೂ ಸಾರ್ವಜನಿಕ ಉದ್ದಿಮೆ ಅಧಿಕಾರಿ ಮತ್ತು ನೌಕರರಿಗೆ ಮಾತ್ರ ಬಿಎಂಟಿಸಿ ಸೇವೆ ಪಡೆಯಲು ಅವಕಾಶ ನೀಡಲಾಗಿದೆ.

    ಲಾಕ್​ಡೌನ್​ನಿಂದಾಗಿ ಏರಿದೆ ನಿರುದ್ಯೋಗ ಪ್ರಮಾಣ, ಆದರೆ ಕೆಲಸಕ್ಕೆ ಜನರೇ ಸಿಗುತ್ತಿಲ್ಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts