More

    ನಾಟಿ ಮಾಡೋದಕ್ಕೆ ತೆರಳಲು ಬಿಎಂಟಿಸಿ ನೌಕರನಿಗೆ 8 ದಿನ ವೇತನ ಸಹಿತ ರಜೆ

    ಬೆಂಗಳೂರು: ಕರೊನಾ ಭೀತಿ ನಡುವೆಯೂ ಕರ್ತವ್ಯ ನಿರ್ವಹಿಸಿದ್ದ ಬಿಎಂಟಿಸಿ ಚಾಲಕರೊಬ್ಬರಿಗೆ ಕೃಷಿ ಕಾರ್ಯ ಮಾಡಲು 8 ದಿನಗಳ ಕಾಲ ವೇತನಸಹಿತ ರಜೆ ನೀಡಲಾಗಿದೆ.

    ಪೂರ್ಣಪ್ರಜ್ಞಾ ಲೇಔಟ್ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ವಿ.ಎಸ್. ಯೋಗೇಶ್ ಸಕಲೇಶಪುರ ಮೂಲದ ರೈತ ಕುಟುಂಬಕ್ಕೆ ಸೇರಿದವರು. ಗದ್ದೆ ನಾಟಿ ಆರಂಭವಾಗಿದೆ. ಆ ಕೆಲಸ ಮಾಡಿಸಲು ಊರಿಗೆ ಹೋಗಬೇಕೆಂದು ರಜೆಗೆ ಅರ್ಜಿ ಸಲ್ಲಿಸಿದ್ದರು.

    ಇದನ್ನೂ ಓದಿ: ಡಿಜೆ ಹಳ್ಳಿ ಗಲಭೆ: ಹಿಂದೂ ದೇವತೆಗಳನ್ನು ಅವಹೇಳನಗೈಯ್ಯುವ ಪೋಸ್ಟ್​ಗಳನ್ನು ಮುಲಾಜಿಲ್ಲದೆ ಹಾಕುವ ಇವರಿಗೆ ಸರಿಯಾದ ಉತ್ತರ ಕೊಟ್ಟರೆ ಯಾಕಿಷ್ಟು ಕೋಪ!

    ಅದನ್ನು ಪರಿಗಣಿಸಿರುವ ಘಟಕ ಅಧಿಕಾರಿಗಳು ವೇತನಸಹಿತ ರಜೆ ಮಂಜೂರು ಮಾಡಿದ್ದಾರೆ. ಮಾರ್ಚ್ ಅಂತ್ಯದಲ್ಲಿ ಲಾಕ್​ಡೌನ್ ಜಾರಿ ಮಾಡಿದ ಪರಿಣಾಮ ಅಗತ್ಯ ಹಾಗೂ ತುರ್ತು ಸೇವೆ ಬಸ್​ಗಳ ಸಂಚಾರಕ್ಕೆ ಮಾತ್ರ ಅವಕಾಶ ನೀಡಲಾಗಿತ್ತು. ಈ ವೇಳೆ ಯೋಗೇಶ್ ಕಾರ್ಯ ನಿರ್ವಹಿಸಿದ್ದರು. ಸಂಕಷ್ಟದ ಸಮಯದಲ್ಲಿ ತೋರಿದ ಕರ್ತವ್ಯಪ್ರಜ್ಞೆ ಪರಿಗಣಿಸಿ ವೇತನಸಹಿತ ರಜೆ ಮಂಜೂರು ಮಾಡಲಾಗಿದೆ.

    ಕಾಶ್ಮೀರದಲ್ಲಿ ಉಗ್ರ ದಾಳಿಗೆ ಮೂವರು ಯೋಧರು ಹುತಾತ್ಮ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts