More

    ಶುಲ್ಕ ಪಾವತಿಸದ ಸೆಲೆಬ್ರಿಟಿಗಳ ಬ್ಲೂಟಿಕ್ ರದ್ದು ಮಾಡುತ್ತಿದೆ ಟ್ವಿಟರ್!

    ನವದೆಹಲಿ: ಟ್ವಿಟರ್ ಪ್ರಿಮಿಯಮ್ ಬ್ಲೂಟಿಕ್ ಸೇವೆಯನ್ನು ಸ್ಥಾಪಿಸುವ ನಿಟ್ಟಿನಲ್ಲಿ ಇನ್ನೊಂದು ಹೆಜ್ಜೆ ಮುಂದಿಟ್ಟಿದ್ದು ಬ್ಲೂಟಿಕ್ ಸೇವೆಯನ್ನು ಪಡೆಯಲು ಶುಲ್ಕ ಪಾವತಿಸದ ವ್ಯಕ್ತಿಗಳ ಖಾತೆಯಿಂದ ಬ್ಲೂಟಿಕ್ ತೆಗೆದು ಹಾಕುವ ಪ್ರಕ್ರಿಯೆಗೆ ಚಾಲನೆ ದೊರೆತಿದೆ.

    ಎಲಾನ್ ಮಸ್ಕ್ ಟ್ವಿಟರ್ ಒಡೆತನವನ್ನು ಪಡೆದುಕೊಂಡ ನಂತರ ಅನೇಕ ಬದಲಾವಣೆಗಳನ್ನು ಮಾಡಿದ್ದಾರೆ. ಅದರಲ್ಲಿ ಬ್ಲೂಟಿಕ್ ಸೇವೆಯನ್ನು ಪ್ರಿಮಿಯಮ್ ಸೌಲಭ್ಯವಾಗಿ ನೀಡುವುದೂ ಒಂದು. ಸೆಲೆಬ್ರಿಟಿಗಳು, ಉದ್ಯಮಿಗಳು, ರಾಜಕಾರಣಿಗಳು ಸೇರಿದಂತೆ ಗಣ್ಯ ವ್ಯಕ್ತಿಗಳ ಟ್ವಿಟರ್ ಖಾತೆಯನ್ನು ವೆರಿಫೈಡ್ ಮಾಡಿ ಬ್ಲೂಟಿಕ್ ನೀಡಲಾಗುತ್ತದೆ. ಇದರೊಂದಿಗೆ ಕೆಲವು ವಿಶಿಷ್ಟ ಫೀಚರ್​ಗಳನ್ನೂ ನೀಡಲಾಗುತ್ತದೆ.

    ಟ್ವಿಟರ್ ಸುಮಾರು 300,000 ವೆರಿಫೈಡ್ ಬಳಕೆದಾರರನ್ನು ಹೊಂದಿದ್ದು ಅವರಲ್ಲಿ ಪತ್ರಕರ್ತರು, ಕ್ರೀಡಾಪಟುಗಳು ಮತ್ತು ಸಾರ್ವಜನಿಕ ವ್ಯಕ್ತಿಗಳು ಇದ್ದಾರೆ. ಅವರಿಗೆ ಬ್ಲೂಟಿಕ್​ನ ಅವಶ್ಯಕತೆ ಇದೆ ಎಂದಾದರೆ, ಅವರು ಹಣ ಪಾವತಿಸಬೇಕು. ಇದೀಗ ಪಾವತಿಸದ ಖ್ಯಾತನಾಮರ ಅಕೌಂಟ್​ನಿಂದ ಬ್ಲೂಟಿಕ್​ ತೆಗೆಯಲಾಗುತ್ತಿದೆ.

    ಗುರುವಾರದಿಂದ (ಏ.20) ಟ್ವಿಟರ್ ಬಳಕೆದಾರರಿಗೆ ತನ್ನ ಬ್ಲೂಟಿಕ್ ತೆಗೆದಿರುವುದು ಗೊತ್ತಾಗಿದೆ. ಭಾರತದಲ್ಲಿ ಖ್ಯಾತರಾಗಿರುವ ರಾಹುಲ್ ಗಾಂಧಿ, ಯುಪಿ ಸಿಎಂ ಯೋಗಿ ಆದಿತ್ಯನಾಥ್, ದೆಹಲಿ ಸಿಎಂ ಅರವಿಂದ್ ಕೇಜಿವಾಲ್, ಕ್ರಿಕೆಟಿಗ ವಿರಾಟ್ ಕೊಹ್ಲಿ, ನಟ ಶಾರುಖ್ ಖಾನ್ ಸೇರಿದಂತೆ ಉದ್ಯಮಿಗಳಾದ ರತನ್ ಟಾಟಾ, ಮಹೀಂದ್ರಾ ಮತ್ತು ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರ ಮತ್ತು ಗೌತಮ್ ಅದಾನಿ ಅವರ ಬ್ಲೂಟಿಕ್ ನ್ನು ಸಹ ಟ್ವಿಟರ್ ತೆಗೆದು ಹಾಕಿದೆ.

    ಮಾಸಿಕ ಶುಲ್ಕವನ್ನು ಪಾವತಿಸದ ಕಾರಣಕ್ಕೆ ಈ ನಿರ್ಧಾರವನ್ನು ಟ್ವಿಟರ್ ತೆಗೆದುಕೊಂಡಿದೆ. ಭಾರತದಲ್ಲಿ ಬ್ಲ್ಯೂ ಟಿಕ್ ಸೇವೆಗೆ ತಿಂಗಳಿಗೆ ಐಓಎಸ್ ಹಾಗೂ ಆ್ಯಂಡ್ರಾಯ್ಡ್ ಬಳಕೆದಾರರಿಗೆ 900 ರೂ.ವಿದೆ. ಇನ್ನು ವೆಬ್ ಬಳಕೆದಾರರಿಗೆ 650 ರೂ. ಇದೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts