More

    ಪಡುಬಿದ್ರಿಗೆ ಕೇಂದ್ರ ಮಂಡಳಿ ಶೀಘ್ರ

    ಪಡುಬಿದ್ರಿ: ಕಾಮಿನಿ ನದಿ ಸಮುದ್ರ ಸೇರುವ ಪಡುಬಿದ್ರಿ ಎಂಡ್ ಪಾಯಿಂಟ್ ಬಳಿ ಬೀಚ್ ಅಭಿವೃದ್ಧಿ ಕಾಮಗಾರಿ ಭರದಿಂದ ಸಾಗುತ್ತಿದ್ದು, ಜುಲೈ 15ರೊಳಗೆ ಕೇಂದ್ರ ನಿರ್ಣಾಯಕರ ಮಂಡಳಿಯಿಂದ ಪರಿಶೀಲನೆ ನಡೆಯಲಿದೆ.
    ಬಳಿಕ ಡೆನ್ಮಾರ್ಕ್‌ನ ಅಂತಾರಾಷ್ಟ್ರೀಯ ನಿರ್ಣಾಯಕ ಮಂಡಳಿ ಪರಿಶೀಲಿಸಿ ಬ್ಲೂ ಫ್ಲಾೃಗ್ ಬೀಚ್ ಪ್ರಮಾಣ ಪತ್ರ ನೀಡಲಿದೆ. ಕೇಂದ್ರ ಸರ್ಕಾರದ ಅನುಮೋದನೆಯಂತೆ ರಾಜ್ಯದ ಕಾರವಾರ ಹಾಗೂ ಪಡುಬಿದ್ರಿ ಪ್ರದೇಶದ ಕಡಲ ತೀರಗಳನ್ನು ಬ್ಲೂ ಫ್ಲಾೃಗ್ ಬೀಚ್ ಯೋಜನೆಗಾಗಿ ಗೊತ್ತುಪಡಿಸಲಾಗಿತ್ತು. ಕೇಂದ್ರ ಸರ್ಕಾರದ 8 ಕೋಟಿ ರೂಪಾಯಿಯ ಈ ಯೋಜನೆಯನ್ನು ಅಂತಿಮಗೊಳಿಸಿ ಗುರ್ಗಾಂವ್‌ನ ಎ ಟು ಝಡ್ ಸಂಸ್ಥೆ ಕಾಮಗಾರಿ ನಡೆಸುತ್ತಿದೆ.

    ವರ್ಷದ ಹಿಂದೆ ಕಾಮಗಾರಿ ಆರಂಭಿಸಲಾಗಿದ್ದು, ರಾಜ್ಯ ಸರ್ಕಾರ 2.5 ಕೋಟಿ ರೂಪಾಯಿ ವೆಚ್ಚದಲ್ಲಿ ಮೂಲ ಸೌಕರ್ಯ ಯೋಜನೆಗಳನ್ನು ಕಲ್ಪಿಸಿದೆ. ತಾತ್ಕಾಲಿಕ ಶೌಚಗೃಹ, ಸ್ನಾನ ಗೃಹ, ಬಟ್ಟೆ ಬದಲಾಯಿಸುವ ಕೋಣೆ, ನೀರು ಶುದ್ಧೀಕರಣ ಘಟಕ, ಕುಡಿಯುವ ನೀರಿನ ವ್ಯವಸ್ಥೆ, ಸಿಸಿ ಕ್ಯಾಮರಾ ಹಾಗೂ ನಿಯಂತ್ರಣ ಕೊಠಡಿ, ಮಕ್ಕಳ ಆಟಿಕೆ ಸಾಮಗ್ರಿ, ಪ್ರಥಮ ಚಿಕಿತ್ಸಾ ಕೊಠಡಿ, ಘನತ್ಯಾಜ್ಯ ಸಂಸ್ಕರಣಾ ಘಟಕ ಹಾಗೂ ಸೋಲಾರ್ ಪ್ಯಾನಲ್ ಅಳವಡಿಸಿ ಬೀಚ್‌ಗೆ ಅಗತ್ಯವಿರುವ ವಿದ್ಯುತ್ ಉತ್ಪಾದಿಸಿ ಬೀದಿದೀಪಗಳನ್ನು ಅಳವಡಿಸಲಾಗಿದೆ. ಕಾಲು ದಾರಿಗಳು, ವಾಹನ ನಿಲುಗಡೆ ಸ್ಥಳಕ್ಕೆ ಇಂಟರ್‌ಲಾಕ್, ಹಸಿರು ಹುಲ್ಲು ಹಾಸುವಿಕೆ ಹಾಗೂ ಮಾಹಿತಿ ಫಲಕ ಅಳವಡಿಸುವ ಕಾರ್ಯ ಪ್ರಗತಿಯಲ್ಲಿದೆ. ನೀರಿನ ಸಂಪರ್ಕ ಹಾಗೂ ಬಿದಿರಿನ ಆಸನಗಳನ್ನು ಅಳವಡಿಸುವ ಕಾರ್ಯ ಬಾಕಿಯಿದೆ.

    ಬೀಚ್ ಕಾಮಗಾರಿ ಮುಕ್ತಾಯ ಹಂತದಲ್ಲಿದ್ದು, ವಾರದೊಳಗೆ ಕೇಂದ್ರ ನಿರ್ಣಾಯಕ ಮಂಡಳಿ ಪರಿಶೀಲನೆ ನಡೆಸಲಿದೆ. ಬಳಿಕ ಅಂತಾರಾಷ್ಟ್ರೀಯ ನಿರ್ಣಾಯಕ ಮಂಡಳಿ ಪರಿಶೀಲನೆ ನಡೆಸಲಿದೆ. ಯೋಜನಾ ಪ್ರದೇಶಕ್ಕೆ ಹೊಂದಿಕೊಂಡಿರುವ ಕುದ್ರು ಪ್ರದೇಶ ಅಭಿವೃದ್ಧಿಗೆ ಪ್ರಸ್ತಾವನೆ ಸಿದ್ಧಪಡಿಸಲಾಗುತ್ತಿದೆ. ಹಂತ ಹಂತವಾಗಿ ಬೀಚ್ ಅಭಿವೃದ್ಧಿ ಮಾಡಲಾಗುವುದು.
    ಡಾ. ಚಂದ್ರಶೇಖರ್ ನಾಯಕ್ ಸಹಾಯಕ ನಿರ್ದೇಶಕ, ಉಡುಪಿ ಜಿಲ್ಲಾ ಪ್ರವಾಸೋದ್ಯಮ ಇಲಾಖೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts