More

    ರಕ್ತದಾನ ಜೀವ ಉಳಿಸುವ ಕೆಲಸ, ಸ್ವಯಂ ಆರೋಗ್ಯಕ್ಕೂ ಸಹಕಾರಿ: ಡಿಎಚ್‌ಒ ಡಾ.ರಂಗನಾಥ್ ಅಭಿಮತ

    ಚಳ್ಳಕೆರೆ: ರಕ್ತದಾನ ಅಮೂಲ್ಯ ಜೀವ ಉಳಿಸುವ ಪುಣ್ಯ ಕಾರ್ಯ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಂಗನಾಥ ಹೇಳಿದರು.

    ಗ್ರಾಪಂ, ಜಿಲ್ಲಾ ಆರೋಗ್ಯ ಇಲಾಖೆ ಸಹಯೋಗದಲ್ಲಿ ತಾಲೂಕಿನ ರಾಮಜೋಗಿಹಳ್ಳಿ ಗ್ರಾಮದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ರಕ್ತದಾನ ಮತ್ತು ಹೃದಯ ಉಚಿತ ತಪಾಸಣೆ ಶಿಬಿರ ಉದ್ಘಾಟಿಸಿ ಮಾತನಾಡಿದರು.

    ರಕ್ತದಾನ ಮಾಡುವ ಮನೋಭಾವನೆ ಯುವ ಸಮುದಾಯ ಮತ್ತು ಆರೋಗ್ಯವಂತ ಜನರಲ್ಲಿ ಹೆಚ್ಚಾಗಬೇಕು. ಮತ್ತೊಬ್ಬರಿಗೆ ಮರು ಜೀವ ನೀಡುವ ಈ ಕಾರ್ಯ ದೇವರ ಕೆಲಸ ಇದ್ದಂತೆ. ರಕ್ತದಾನ ಮಾಡುವುದರಿಂದ ಆರೋಗ್ಯದ ಮೇಲೆ ಯಾವುದೇ ಕೆಟ್ಟ ಪರಿಣಾಮ ಬೀರುವುದಿಲ್ಲ. ಬದಲಿಗೆ ಆರೋಗ್ಯಕರ ಜೀವನಕ್ಕೆ ಸಹಕಾರಿ ಆಗಲಿದೆ ಎಂದು ಹೇಳಿದರು.

    ಸ್ಥಳೀಯವಾಗಿ ಆಯೋಜನೆಗೊಳ್ಳುವ ಆರೋಗ್ಯ ಶಿಬಿರವನ್ನು ಸದುಪಯೋಗ ಮಾಡಿಕೊಳ್ಳಬೇಕು. ವಯೋವೃದ್ಧರು ಮತ್ತು ಬಡವರು ಆರೋಗ್ಯ ಸಮಸ್ಯೆಗೆ ನಗರಗಳಿಗೆ ಹೋಗುವ ಶಕ್ತಿ ಇರುವುದಿಲ್ಲ. ಇಂತಹ ಜನರ ಅನುಕೂಲಕ್ಕೆ ಶಿಬಿರಗಳು ಉಪಕಾರಿ ಆಗಿವೆ ಎಂದರು.

    ತಜ್ಞ ವೈದ್ಯರು, ಆರೋಗ್ಯ ತಪಾಸಣೆ ನಡೆಸಿ ಔಷಧ ವಿತರಣೆ ಮಾಡಿದರು. 500ಕ್ಕೂ ಹೆಚ್ಚು ಮಂದಿ ತಪಾಸಣೆ ಮಾಡಿಸಿಕೊಂಡರು. ಗ್ರಾಪಂ ಅಧ್ಯಕ್ಷ ಆರ್.ಎ.ತಿಪ್ಪೇಸ್ವಾಮಿ ಸೇರಿ ಹತ್ತು ಜನರು ನೇತ್ರದಾನಕ್ಕೆ ಹೆಸರು ನೋಂದಣಿ ಮಾಡಿಕೊಂಡರು.

    ಗ್ರಾಪಂ ಸದಸ್ಯರಾದ ಬಾಬುರೆಡ್ಡಿ, ಗಂಗಾಧರ್, ಉಮೇಶ್‌ಬಾಬು, ಶಿವಕುಮಾರ್, ರಮೇಶ್, ಯುವ ಜಾಗೃತಿ ಸೇವಾ ಟ್ರಸ್ಟ್ ಅಧ್ಯಕ್ಷ ಜಿ.ಎಸ್.ಹರೀಶ್, ಬಿ.ಜಿ.ಶ್ರೀನಿವಾಸ್, ಆರೋಗ್ಯ ಇಲಾಖೆಯ ಡಾ.ಮಂಜುನಾಥರೆಡ್ಡಿ, ಡಾ.ರೂಪಾ, ಡಾ.ಸುಧಾ, ಎಸ್.ಬಿ.ತಿಪ್ಪೇಸ್ವಾಮಿ, ಬಿ.ಎಚ್.ರಾಜು, ಶಿವಪ್ರಕಾಶ್, ವಸಂತ, ರಾಜೇಂದ್ರಸಿಂಗ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts