More

    ನಿರಾಮಯ ಫೌಂಡೇಷನ್​ನಿಂದ ಕಾರ್ಗಿಲ್ ವಿಜಯೋತ್ಸವ

    ಹುಬ್ಬಳ್ಳಿ : ನಿರಾಮಯ ಫೌಂಡೇಷನ್ ವತಿಯಿಂದ ನಗರದಲ್ಲಿ ಬುಧವಾರದಂದು ಕಾರ್ಗಿಲ್ ವಿಜಯೋತ್ಸವ ಹಾಗೂ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.

    ಉದ್ಘಾಟನೆ ನೆರವೇರಿಸಿ ಮಾತನಾಡಿದ ಉದ್ಯಮಿ ರಮೇಶ ಭಾಪಣಾ, ದೇಶವಾಸಿಗಳೆಲ್ಲ ಸುರಕ್ಷಿತವಾಗಿ ಇರಲು ಭಾರತೀಯ ಸೈನಿಕರು ಕಾರಣ. ಸೈನಿಕರ ಸಾಹಸ, ಧೈರ್ಯಗಳನ್ನು ನೆನಪಿಸಿಕೊಳ್ಳುವ ಕಾರ್ಯಕ್ರಮ ಮಾಡುತ್ತಿರುವ ನಿರಾಮಯ ಫೌಂಡೇಷನ್ ತಂಡದ ಸಾಮಾಜಿಕ ಸೇವೆಗಳು ವಿಸ್ತಾರಗೊಳ್ಳಲಿ ಎಂದು ಹಾರೈಸಿದರು.

    ರಾಷೊ್ಟ್ರೕತ್ಥಾನ ರಕ್ತನಿಧಿ ಕೇಂದ್ರದ ಮುಖ್ಯಸ್ಥ ದತ್ತಮೂರ್ತಿ ಕುಲಕರ್ಣಿ ಮಾತನಾಡಿ, ಪ್ರತಿಯೊಬ್ಬರೂ ರಕ್ತದಾನ ಮಾಡಬೇಕು. ಇತರರಿಗೂ ರಕ್ತದಾನ ಮಾಡಲು ಪ್ರೇರಣೆ ನೀಡಬೇಕು ಎಂದು ಸಲಹೆ ನೀಡಿದರು.

    ಸಿಯಾಚಿನ್​ನಲ್ಲಿ ಸೈನಿಕರ ಜೀವನ, ದೇಶದ ಗಡಿ, ಸೈನಿಕನ ಮನಸ್ಥಿತಿ ಕುರಿತು ಅತಿಥಿಯಾಗಿದ್ದ ಮಾಜಿ ಯೋಧ ಎಚ್.ಎಲ್. ಭಜಂತ್ರಿ ವಿವರಿಸಿದರು.

    ಫೌಂಡೇಷನ್ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಬಾಳಿಕಾಯಿ ಅಧ್ಯಕ್ಷತೆ ವಹಿಸಿದ್ದರು. ರಕ್ತದಾನ ಶಿಬಿರದಲ್ಲಿ 75ಕ್ಕಿಂತ ಹೆಚ್ಚಿನ ರಕ್ತದ ಯುನಿಟ್ ಸಂಗ್ರಹಿಸಲಾಯಿತು, ರಕ್ತದಾನ ಶಿಬಿರಕ್ಕೆ ಭೇಟಿ ನೀಡಿದ ಶಾಸಕ ಮಹೇಶ ಟೆಂಗಿನಕಾಯಿ, ತಂಡದ ಕಾರ್ಯಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.

    ಗಿರಿಧರ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ನವೀನ ಪದಕಿ ಪ್ರಾರ್ಥಿಸಿದರು. ಗುರು ಭದ್ರಾಪೂರ ಸ್ವಾಗತಿಸಿದರು. ಗುರು ಬನ್ನಿಕೊಪ್ಪ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts