More

    ಆಡೂರಲ್ಲಿ 30 ಜನರಿಂದ ರಕ್ತದಾನ

    ಹಾನಗಲ್ಲ: ತಾಲೂಕಿನ ಆಡೂರು ಪೊಲೀಸ್ ಠಾಣೆಯಲ್ಲಿ ಸತತ ಐದನೇ ವರ್ಷ ರಕ್ತದಾನ ಹಬ್ಬ ಆಯೋಜಿಸಲಾಗಿತ್ತು. ಥಲಸೇಮಿಯಾ ಸಮಸ್ಯೆಯಿಂದ ಬಳಲುತ್ತಿರುವ

    ಮಕ್ಕಳಿಗಾಗಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಹಬ್ಬದಲ್ಲಿ 18 ಪೊಲೀಸರು ಸೇರಿ ಒಟ್ಟು 30 ಜನ ರಕ್ತದಾನ ಮಾಡಿದರು. 23ನೇ ಬಾರಿ ರಕ್ತದಾನ ಮಾಡುವ ಮೂಲಕ ಹಬ್ಬಕ್ಕೆ ಚಾಲನೆ ನೀಡಿ ಮಾತನಾಡಿದ ಹಾನಗಲ್ಲ ಸಿಪಿಐ ಎಸ್.ಆರ್. ಶ್ರೀಧರ, ಪೊಲೀಸ್ ಸಿಬ್ಬಂದಿಯೂ ಸಮಾಜಕ್ಕೆ ಕೊಡುಗೆ ನೀಡುವ ಉದ್ದೇಶದಿಂದ ರಕ್ತದಾನದಲ್ಲಿ ಪಾಲ್ಗೊಂಡಿದ್ದಾರೆ. ರಕ್ತದಾನದಿಂದ ಆರೋಗ್ಯ ವೃದ್ಧಿಯಾಗುತ್ತದೆ. ರಕ್ತವನ್ನು ಎಲ್ಲಿಯೂ ಕೊಂಡುಕೊಳ್ಳಲು ಸಾಧ್ಯವಿಲ್ಲ. ಮನುಷ್ಯರು ಮನುಷ್ಯರಿಗೆ ನೀಡುವುದರಿಂದ ಮಾತ್ರ ಮತ್ತೊಂದು ಜೀವ ಉಳಿಸಲು ಸಾಧ್ಯವಿದೆ ಎಂಬುದನ್ನು ಅರಿತುಕೊಳ್ಳಬೇಕು ಎಂದರು. ಹಿಮ್್ಸ ರಕ್ತ ನಿಧಿ ಹಾವೇರಿ ಮತ್ತು ಬಿಸಿ ಟಿವಿ ಘಟಕ ದಾವಣಗೆರೆಯ ತಂಡದ ಡಾ. ಪಿ.ಅಕ್ಷಯ ಅವರು ಅಪಘಾತ ಹಾಗೂ ಶಸ್ತ್ರ ಚಿಕಿತ್ಸೆ ಮತ್ತಿತರ ಸಂದರ್ಭದಲ್ಲಿ ರೋಗಿಗಳಿಗೆ ರಕ್ತದಾನದ ಅಗತ್ಯ ಬಗ್ಗೆ ಮಾಹಿತಿ ನೀಡಿದರು. ಆಡೂರು ಪಿಎಸ್​ಐ ಸಂಪತ್ ಆನಿಕಿವಿ, ಎಎಸ್​ಐ ಮಲ್ಲಿಕಾರ್ಜುನ ತಹಶೀಲ್ದಾರ್, ಸ್ನೇಹ ಮೈತ್ರಿ ಬ್ಲಡ್ ಆರ್ವಿು ಸಂಚಾಲಕ ಕರಬಸಪ್ಪ ಗೊಂದಿ, ಆನಂದ ಪಾಟೀಲ ಹಾಗೂ ಪೊಲೀಸ್ ಸಿಬ್ಬಂದಿ ಉಪಸ್ಥಿತರಿದ್ದರು. ಪೊಲೀಸ್ ಸಿಬ್ಬಂದಿ ಕುಟುಂಬದ ಮಕ್ಕಳಿಗೆ ರಕ್ತದ ಗುಂಪು ಉಚಿತ ಪರೀಕ್ಷೆ ಕೈಗೊಳ್ಳಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts