More

    ಅತ್ಯದ್ಭುತ ಸಾಹಿತ್ಯ ಕೊಡುಗೆ ಕೊಟ್ಟ ಬೇಂದ್ರೆ

    ಹಾನಗಲ್ಲ: ದ.ರಾ. ಬೇಂದ್ರೆ ಅವರ ಸರಳ ಜೀವನ ನಮ್ಮೆಲ್ಲರಿಗೂ ಮಾರ್ಗದರ್ಶನವಾಗಬೇಕು. ಅವರು ನಡೆದ ಬಂದ ದಾರಿ ನಮಗೆ ಸ್ಪೂರ್ತಿದಾಯಕವಾಗಿದೆ. ಬಡತನದಲ್ಲಿಯೇ ನೊಂದು ಬೆಂದರೂ ಅವರು ನಮಗೆ ಅತ್ಯದ್ಭುತ ಸಾಹಿತ್ಯ ಕೊಡುಗೆಯಾಗಿ ಕೊಟ್ಟಿದ್ದಾರೆ ಎಂದು ಸಾಹಿತಿ ಉದಯ ನಾಸಿಕ ಹೇಳಿದರು.
    ದ.ರಾ. ಬೇಂದ್ರೆ ಅವರ ಜನ್ಮ ದಿನಾಚರಣೆ ನಿಮಿತ್ತ ಪಟ್ಟಣದ ಕುಮಾರೇಶ್ವರ ಬಿಇಡಿ ಕಾಲೇಜ್​ನಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಬೇಂದ್ರೆಯವರ ಸಾಹಿತ್ಯ ಸಮಕಾಲಿನದಲ್ಲಿಯೂ ಸರಿಯಾದ ಮಾರ್ಗವನ್ನು ತೋರುವಂಥದ್ದಾಗಿದ್ದು, ಉತ್ತರ ಕರ್ನಾಟಕದ ಭಾಷೆಯ ಸಾಹಿತ್ಯವನ್ನು ದೇಶದ ಮೂಲೆ-ಮೂಲೆಗಳಿಗೆ ಪಸರಿಸಿದವರು. ಸರಳ ಭಾಷೆ ಮೂಲಕ ಎಲ್ಲರಿಗೂ ಅರ್ಥವಾಗುವ ಶೈಲಿಯ ಅವರ ಸಾಹಿತ್ಯವನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕಿದೆ ಎಂದರು.
    ಅರಳೇಶ್ವರ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಸುಭಾಷ ಹೊಸಮನಿ ಮಾತನಾಡಿ, ಸಾಹಿತ್ಯ ಅನುಭವಿಸಿ ಬರೆದವರು ಬೇಂದ್ರೆಯವರು. ಅವರ ಸಾಹಿತ್ಯವೇ ನಮಗೆ ದಿವ್ಯೌಷಧಿ ಅದನ್ನು ಮೈಗೂಡಿಸಿಕೊಳ್ಳಲು ಅವರ ಸಾಹಿತ್ಯ ಅಭ್ಯಸಿಸಬೇಕು ಎಂದರು.
    ಡಾ.ಎಂ. ಸದಾಶಿವಪ್ಪ ಅಧ್ಯಕ್ಷತೆ ವಹಿಸಿದ್ದರು. ಸಂಚಾಲಕ ಡಾ. ವಿಶ್ವನಾಥ ಬೊಂದಾಡೆ, ಡಾ. ಪ್ರಕಾಶ ಹುಲ್ಲೂರ, ಪ್ರೊ.ಎಂ.ಬಿ. ನಾಯ್ಕ, ಪ್ರೊ. ರಾಘವೇಂದ್ರ ಮಾಡಳ್ಳಿ, ಡಾ.ಟಿ.ಟಿ. ಹರೀಶ, ಜೀತೇಂದ್ರ ಜಿ.ಟಿ., ಡಾ.ಪ್ರಕಾಶ ಜಿ.ವಿ., ಡಾ. ರುದ್ರೇಶ ಬಿ.ಎಸ್., ಪ್ರೊ.ದಿನೇಶ ಆರ್., ಮಹೇಶ ಅಕ್ಕಿವಳ್ಳಿ, ಎಂ.ಎಂ. ನಿಂಗೊಜಿ, ಎಸ್.ಸಿ. ವಿರಕ್ತಮಠ, ಹಾಗೂ ಬೋಧಕೇತರ ಸಿಬ್ಬಂದಿ, ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts