More

    ಹುಕ್ಕೇರಿ: ಬಿಎಲ್‌ಇ ಕೆಲಸದಿಂದ ವಿಮುಕ್ತಿಗೊಳಿಸಿ

    ಹುಕ್ಕೇರಿ: ಅಂಗನವಾಡಿ ಕಾರ್ಯಕರ್ತೆಯರನ್ನು ಚುನಾವಣೆಯ ಬಿಎಲ್‌ಒ ಕೆಲಸದಿಂದ ವಿಮುಕ್ತಿಗೊಳಿಸಬೇಕು ಎಂದು ಅಂಗನವಾಡಿ ಕಾರ್ಯಕರ್ತೆಯರು ಒತ್ತಾಯಿಸಿದ್ದಾರೆ.

    ಪಟ್ಟಣದ ತಾಪಂ ಸಭಾಭವನದಲ್ಲಿ ಮಹಿಳಾ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ತಹಸೀಲ್ದಾರ್ ಅಶೋಕ ಗುರಾಣಿಗೆ ಮನವಿ ಸಲ್ಲಿಸಿದ ಅವರು, ಎಲ್ಲ ಸರ್ಕಾರಿ ಇಲಾಖೆಯ ಕಾರ್ಯಕ್ರಮಗಳಲ್ಲಿ ನಮ್ಮನ್ನು ಬಳಸಿಕೊಳ್ಳುವುದರಿಂದ ಸರಿಯಾಗಿ ಕರ್ತವ್ಯ ನಿಭಾಯಿಸಲಾಗುತ್ತಿಲ್ಲ.

    ಇದು ಮಕ್ಕಳ ಶೈಕ್ಷಣಿಕ ಚಟುವಟಿಕೆಗಳ ಮೇಲೆ ಪರಿಣಾಮ ಬೀರುತ್ತಿದೆ. ಜತೆಗೆ ಸರ್ಕಾರದ ಯೋಜನೆಗಳನ್ನು ಫಲಾನುಭವಿಗಳಿಗೆ ತಲುಪಿಸಲಾಗುತ್ತಿಲ್ಲ. ಅಂಗನವಾಡಿ ಕಾರ್ಯಕರ್ತೆಯರಿಗೆ 6 ಕೆಲಸಗಳನ್ನು ಬಿಟ್ಟು ಬೇರೆ ಇಲಾಖೆಯ ಕೆಲಸ ವಹಿಸಬಾರದು ಎಂಬ ನಿಯಮವಿದೆ. ಆದರೆ, ಅಧಿಕಾರಿಗಳು ನಿಯಮ ಮೀರಿ ನಮ್ಮನ್ನು ಚುನಾವಣೆ ಕಾರ್ಯಕ್ಕೆ ನಿಯೋಜಿಸುತ್ತಿದ್ದಾರೆ. ಅಧಿಕಾರಿಗಳು ಕೂಡಲೇ ಈ ನಿರ್ಧಾರ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

    ಕಾರ್ಯಕರ್ತೆಯರಾದ ಸುನಿತಾ ಘಸ್ತಿ, ಸುಧಾ ಹೆಬ್ಬಾಳೆ, ಭಾರತಿ ಮೊಟ್ಯಾಗೋಳ, ಶೈಲಜಾ ಕುಲಕರ್ಣಿ, ಸುನಿತಾ ಕುಂಬಾರ, ದುಂಡವ್ವ ಅಂಬಾರಿ, ಚಂದ್ರಭಾಗಾ ಶಿಂಧೆ, ಶೀಲಾ ಮಾಳಗೆ, ಸುಜಾತಾ ಕೋರಿ, ಸುನಿತಾ ಕುಪಾಟೆ, ನೀಲವ್ವ ಪದ್ಮಣ್ಣವರ, ಪದ್ಮಶ್ರೀ ಸೊಲ್ಲಾಪುರೆ, ಮಹಾನಂದಾ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts