More

  ತಂಗಿಯ ಜತೆ ಅಣ್ಣನ ಲವಿಡವ್ವಿ: ಮದುವೆ ಮಾಡಿಕೊಡದಿದ್ದಕ್ಕೆ ಈತ ಮಾಡಿದ ಪಾಪ ಕೃತ್ಯ ಕೇಳಿದರೆ ಶಾಕ್​ ಆಗ್ತಿರಾ…

  ಹುಬ್ಬಳ್ಳಿ: ಪ್ರೀತಿಸುತ್ತಿದ್ದ ಯುವತಿಯನ್ನು ಮದುವೆ ಮಾಡಿಕೊಡದಿದ್ದಲ್ಲಿ ಯುವತಿ ಜತೆಗಿನ ಖಾಸಗಿ ಪೋಟೋ ಹಾಗೂ ವಿಡಿಯೋಗಳನ್ನು ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಮಾಡುವುದಾಗಿ ಬ್ಲ್ಯಾಕ್‌ಮೇಲ್ ಮಾಡಿದ ಆರೋಪದಲ್ಲಿ ಪಾಂಡಿಚೇರಿ ಮೂಲದ ಯುವ ಮುಖಂಡನೊಬ್ಬನನ್ನು ಬಂಧಿಸಲಾಗಿದೆ.

  ಯುವ ಮುಖಂಡ ರಾಕಿ ಎಂಬಾತನೇ ಬಂಧಿತ ಆರೋಪಿ. ಹುಬ್ಬಳ್ಳಿಯ ಸೈಬರ್ ಕ್ರೈಂ ಪೊಲೀಸರು ರಾಕಿಯನ್ನು ಬಂಧಿಸಿದ್ದಾರೆ. ಹುಬ್ಬಳ್ಳಿಯ ದೂರದ ಸಂಬಂಧಿಯ ಪುತ್ರಿಯನ್ನು ರಾಕಿ ಪ್ರೀತಿಸುತ್ತಿದ್ದ. ಮದುವೆ ಮಾಡಿಕೊಡದಿದ್ದರೇ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹಾಗೂ ಪೋಟೋ ಪ್ರಸಾರ ಮಾಡುವುದಾಗಿ ಯುವತಿಯ ಕುಟುಂಬಕ್ಕೆ ಬ್ಲ್ಯಾಕ್‌ಮೇಲ್ ಮಾಡಿದ್ದು, ಈ ಸಂಬಂಧ ಯುವತಿಯ ತಂದೆ ಹುಬ್ಬಳ್ಳಿ-ಧಾರವಾಡ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

  ಯುವತಿಯ ತಂದೆಯೂ ಸಹ ಪಾಂಡಿಚೇರಿ ಮೂಲದವರಾಗಿದ್ದು, ಕೆಲಸದ ನಿಮಿತ್ತ ಹುಬ್ಬಳ್ಳಿಗೆ ಬಂದಿದ್ದರು. ಘಟನೆ ನಂತರ ಇಡೀ ಕುಟುಂಬ ಹುಬ್ಬಳ್ಳಿಯ ಮಂಟೂರ ರಸ್ತೆಯ ಮನೆಯೊಂದರಲ್ಲಿ ವಾಸ್ತವ್ಯ ಹೂಡಿದೆ. ಯುವತಿ ತಾಯಿ ಕಡೆಯಿಂದ ದೂರದ ಸಂಬಂಧವೆಂಬ ಕಾರಣಕ್ಕೆ ರಾಕಿ, ಯುವತಿ ಜತೆ ಹೆಚ್ಚು ಒಡನಾಟ ಹೊಂದಿದ್ದ. ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಇಬ್ಬರೂ ಸರಸ ಸಲ್ಲಾಪಗಳಲ್ಲಿ ತೊಡಗಿದ್ದಾಗ ರಾಕಿ ವೀಡಿಯೋ ಮಾಡಿದ್ದ. ಯುವತಿಯನ್ನು ಮದುವೆ ಮಾಡಿಕೊಡುವಂತೆ ಅನೇಕ ಬಾರಿ ಒತ್ತಾಯ ಮಾಡಿದ್ದ. ವಿವಾಹಕ್ಕೆ ಯುವತಿ ಮನೆಯವರು ನಿರಾಕರಿಸಿದ್ದಕ್ಕೆ ಬ್ಲಾಕ್ ಮೇಲ್ ತಂತ್ರ ಪ್ರಯೋಗಿಸಿದ್ದ.

  ರಾಕಿ ಮತ್ತು ಯುವತಿಯದ್ದು ಅಣ್ಣ-ತಂಗಿ ಸಂಬಂಧವಾಗಿತ್ತು. ಹಾಗಾಗಿ ಯುವತಿ ಕುಟುಂಬಸ್ಥರು ಈ ಸಂಬಂಧವನ್ನು ನಿರಾಕರಿಸಿದ್ದರು. ಮದುವೆಯಂತಾದರೆ, ಆಕೆಯನ್ನೇ ಎಂದು ರಾಕಿ ಪಟ್ಟು ಹಿಡಿದಿದ್ದ. ಈ ಹಿಂದೆ ಮಾಡಿಕೊಂಡಿದ್ದ ಯುವತಿಯ ಅಶ್ಲೀಲ ವಿಡಿಯೋಗಳನ್ನು ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದ. ಕೆಲ ವಿಡಿಯೋ ಮತ್ತು ಚಿತ್ರಗಳನ್ನು ಯುವತಿಯ ತಂದೆಯ ಮೊಬೈಲ್‌ಗೆ ರಾಕಿ ಹರಿಬಿಟ್ಟಿದ್ದ. ಅಲ್ಲದೆ, ಹಲವು ವಾಟ್ಸ್​ಆ್ಯಪ್ ಗ್ರೂಪ್‌ನಲ್ಲಿಯೂ ವಿಡಿಯೋ ಮತ್ತು ಪೋಟೋ ವೈರಲ್ ಆಗಿದ್ದವು. ಇದರಿಂದ ತೀವ್ರ ಮನನೊಂದ ಕುಟುಂಬಸ್ಥರು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ದೂರು ನೀಡಿದ ಹಿನ್ನೆಲೆಯಲ್ಲಿ ಯುವ ಮುಖಂಡನನ್ನು ಹುಬ್ಬಳ್ಳಿ‌ ಪೊಲೀಸರು ಬಂಧಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts