More

    ಕಪ್ಪು ಪಟ್ಟಿ ಕಟ್ಟಿಕೊಂಡು ಪ್ರತಿಭಟನೆ

    ಖಾನಾಪುರ: ಬಂಗಾರಪೇಟೆ ತಹಸೀಲ್ದಾರ್ ಹತ್ಯೆ ಖಂಡಿಸಿ ರಾಜ್ಯ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಶುಕ್ರವಾರ ಪಟ್ಟಣದ ಶಿವಸ್ಮಾರಕ ವೃತ್ತದಿಂದ ತಹಸೀಲ್ದಾರ್ ಕಚೇರಿವರೆಗೆ ಕೈಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಪ್ರತಿಭಟನಾ ಮೆರವಣಿಗೆ ನಡೆಸಿದರು. ಬಳಿಕ ಮೃತ ತಹಸೀಲ್ದಾರ್ ಆತ್ಮಕ್ಕೆ ಶಾಂತಿಕೋರಿ ಮೌನ ಆಚರಿಸಿ, ಸಂಘದ ವತಿಯಿಂದ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಮನವಿ ಸಲ್ಲಿಸಿದರು.

    ಸಂಘದ ತಾಲೂಕು ಘಟಕದ ಅಧ್ಯಕ್ಷ ಬಸವರಾಜ ಯಳ್ಳೂರ, ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಕಠಿಣ ಕಾನೂನು ರೂಪಿಸುವ ಮೂಲಕ ಸರ್ಕಾರಿ ನೌಕರರಿಗೆ ರಕ್ಷಣೆ ಒದಗಿಸಬೇಕು ಎಂದು ಮನವಿ ಮೂಲಕ ನೌಕರರು ಆಗ್ರಹಿಸಿದರು.

    ಉಪ ಖಜಾನೆ ಅಧಿಕಾರಿ ಸಂದೀಪ ಮಾಳಗಿ, ವೈ.ಎಂ ಪಾಟೀಲ, ಮೋಹನ್, ಎಸ್.ವೈ.ಪಾಟೀಲ, ಕೆ.ಆರ್.ಕೋಲಕಾರ, ಜೆ.ಪಿ ಪಾಟೀಲ, ಎಂ.ಪಿ.ಚೋಟಣ್ಣವರ, ಶೋಭಾ ಸವದತ್ತಿ, ರಾಮಚಂದ್ರ ಗಸ್ತಿ, ಬಿ.ಬಿ ಮೇದಾರ, ಬಿ.ಬಿ ಸಾರಾವರಿ, ಮಹಾಂತೇಶ ಗಡಾದ, ಸಂದೀಪ ಮಾಳಗಿ ಮತ್ತಿತರರು ಇದ್ದರು.

    ಗೋಕಾಕ ವರದಿ: ಸರ್ಕಾರಿ ನೌಕರರಿಗೆ ಅಗತ್ಯ ರಕ್ಷಣೆ ನೀಡುವಂತೆ ಆಗ್ರಹಿಸಿ ರಾಜ್ಯ ಸರ್ಕಾರಿ ನೌಕರರ ಸಂಘ ತಾಲೂಕು ಘಟಕ ಮತ್ತು ರಾಜ್ಯ ಗ್ರಾಮ ಲೆಕ್ಕಾಧಿಕಾರಿಗಳ ಸಂಘದ ಸಂಯುಕ್ತಾಶ್ರಯದಲ್ಲಿ ತಹಸೀಲ್ದಾರ್ ಪ್ರಕಾಶ ಹೊಳೆಪ್ಪಗೋಳ ಮೂಲಕ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಶುಕ್ರವಾರ ಮನವಿ ಸಲ್ಲಿಸಲಾಯಿತು. ಪೊಲೀಸರ ಸಮ್ಮುಖದಲ್ಲಿ ಆರೋಪಿ ಇರಿದು ಹತ್ಯೆಗೈದಿದ್ದಾನೆ. ಮೃತರ ಕುಟುಂಬದ ಸದಸ್ಯರೊಬ್ಬರಿಗೆ ಅನುಕಂಪದ ಆಧಾರದ ನೇಮಕಾತಿ ಮಾಡಿ, ಆರ್ಥಿಕ ಸೌಲಭ್ಯಗಳನ್ನು ಶೀಘ್ರ ಬಿಡುಗಡೆ ಮಾಡುವಂತೆ ಮನವಿಯಲ್ಲಿ ಆಗ್ರಹಿಸಿದರು.

    ಬಿ.ಆರ್. ಮುರಗೋಡ, ಕೃಷ್ಣ ಕುಮಾರ ಎಸ್.ಕೆ., ಸುಮನ ಜಾಧವ, ಬಿ.ಎಂ.ಕೊಡ್ಲ್ಯಾಳ, ಮಾರುತಿ ಗದಾಡಿ, ಎಸ್.ಬಿ ಕಟ್ಟಿಮನಿ, ಗ್ರಾಮ ಲೆಕ್ಕಾಧಿಕಾರಿಗಳ ಸಂಘದ ಡಿ.ಎಸ್. ದೇಸಾಯಿ, ಎನ್.ಎಂ.ಬನ್ನಿಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು .

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts