More

    ಬಿಜೆಪಿ ಯುವಮೋರ್ಚಾ ಕಾರ್ಯಕರ್ತರ ಮೇಲಿನ ಜಲಪ್ರಹಾರ ಸಮರ್ಥಿಸಿದ ಸರ್ಕಾರ: 89 ಜನರ ಬಂಧನ

    ಕೋಲ್ಕತ: ಪಶ್ಚಿಮ ಬಂಗಳಾದಲ್ಲಿ ಮಮತಾ ಬ್ಯಾನರ್ಜಿ ಸರ್ಕಾರದ ವಿರುದ್ಧ ಬಿಜೆಪಿ ಯುವಮೋರ್ಚಾ ನೇತೃತ್ವದಲ್ಲಿ ಇಂದು ನಡೆದ ಪ್ರತಿಭಟನೆ ಹತ್ತಿಕ್ಕಲು ಜಲಪ್ರಹಾರ ನಡೆಸಿರುವುದನ್ನು ಸರ್ಕಾರ ಬಲವಾಗಿ ಸಮರ್ಥಿಸಿಕೊಂಡಿದೆ. ನಬನ್ನಾ ಚಲೋ ಪ್ರತಿಭಟನೆ ನಡೆಸುವುದಕ್ಕೆ ಅನುಮತಿ ಇರಲಿಲ್ಲ. ಕೋವಿಡ್ 19 ಸೋಂಕಿಗೆ ಸಂಬಂಧಿಸಿದ ನಿಯಮವನ್ನು ಬಿಜೆಪಿ ಯುವ ಮೋರ್ಚಾ ಉಲ್ಲಂಘಿಸಿದೆ. ಅದರ ಪ್ರಕಾರವೇ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಸರ್ಕಾರ ಸಮಜಾಯಿಷಿ ನೀಡಿದೆ.

    ಪ್ರಚೋದನಾಕಾರಿ ವರ್ತನೆಗಳನ್ನು ತೋರಿದರೂ ಪೊಲೀಸರು ಬಹಳ ಜಾಗರೂಕರಾಗಿ ತಾಳ್ಮೆಯಿಂದ ಪ್ರತಿಭಟನಾಕಾರರನ್ನು ಹತ್ತಿಕ್ಕುವ ಕೆಲಸವನ್ನು ಮಾಡಿದ್ದಾರೆ ಎಂದು ಚೀಫ್ ಸೆಕ್ರಟರಿ ಅಲ್ಪನ್​ ಬಂದೋಪಾಧ್ಯಾಯ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸುದ್ದಿಗಾರರು ಕೇಳಿದ್ದಕ್ಕೆ ಪ್ರತಿಕ್ರಿಯಿಸಿದ ಅವರು, ಪ್ರತಿಭಟನೆಯ ನಂತರದಲ್ಲಿ ಅದರಲ್ಲಿ ಪಾಲ್ಗೊಂಡವರನ್ನು ಗುರುತಿಸುವುದಕ್ಕೆ ನೀಲಿ ಬಣ್ಣ ಬೆರೆಸಿದ ನೀರನ್ನು ಜಲಪ್ರಹಾರಕ್ಕೆ ಬಳಸಲಾಗುತ್ತದೆ. ಇದು ಅಂತಾರಾಷ್ಟ್ರೀಯ ಮಾನದಂಡವೂ ಹೌದು ಎಂದು ಹೇಳಿದರು.

    ಇದನ್ನೂ ಓದಿ: ನಾಡಬಾಂಬ್ ಎಸೆದ್ರು ನಮ್ಮ ರ‍್ಯಾಲಿ ಮೇಲೆ, ಟಿಎಂಸಿಯ ಗೂಂಡಾಗಳದ್ದೇ ಕೆಲ್ಸ ಇದು- ತೇಜಸ್ವಿಸೂರ್ಯ ಗಂಭೀರ ಆರೋಪ

    ಬಿಜೆಪಿ ಕಾರ್ಯಕರ್ತರ ಹತ್ಯೆ ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಇಲ್ಲಿ ರಸ್ತೆಗಳ ಮೇಲೆ ಟೈರ್ ಸುಟ್ಟುಹಾಕಿ ರಸ್ತೆಗೆ ತಡೆಯೊಡ್ಡುವ ಪ್ರಯತ್ನ ನಡೆದಿದೆ. ಕಲ್ಲೆಸೆತವೂ ಉಂಟಾಗಿದೆ. ಬಿಜೆಪಿ ಕಾರ್ಯಕರ್ತರು ಮತ್ತು ಬೆಂಬಲಿಗರು ಪೊಲೀಸರ ಜತೆಗೆ ಸಂಘರ್ಷಕ್ಕೆ ಇಳಿದಿದ್ದರು. ಹೀಗಾಗಿ ಕಳೆದ 24 ಗಂಟೆ ಅವಧಿಯಲ್ಲಿ ಪ್ರತಿಭಟನೆಗೆ ಸಂಬಂಧಿಸಿ ಹೌರಾ ಮತ್ತು ಕೋಲ್ಕತಗಳಲ್ಲಿ ಒಟ್ಟು 89 ಜನರನ್ನು ಬಂಧಿಸಲಾಗಿದೆ. ಪರಿಸ್ಥಿತಿ ಕೈಮೀರದಂತೆ ಕೆಲವು ಕಡೆ ಪೊಲೀಸರು ಅಶ್ರುವಾಯು, ಜಲಪ್ರಹಾರ, ಲಾಠಿ ಚಾರ್ಜ್​ ಕೂಡ ಮಾಡಿದ್ದಾರೆ ಎಂದು ಅವರು ವಿವರಿಸಿದರು. (ಏಜೆನ್ಸೀಸ್)

    ‘ನಬನ್ನಾ’ವನ್ನು ಇಂದು ನಾಳೆ ಮುಚ್ಚಿರುವುದೇಕೆ?: ಬಿಜೆಪಿ ಯುವಮೋರ್ಚಾದ ನಬನ್ನಾ ಚಲೋಕ್ಕೆ ಬೆದರಿದರೇ ದೀದಿ?!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts