More

    ಬಿಜೆಪಿಯ ಆದಾಯದಲ್ಲಿ ಭಾರಿ ಕುಸಿತ; ಎಲೆಕ್ಟೋರಲ್​ ಬಾಂಡ್ ಸ್ವೀಕೃತಿಯಲ್ಲಿ ಗಣನೀಯ ಇಳಿಕೆ..

    ನವದೆಹಲಿ: ಭಾರತೀಯ ಜನತಾ ಪಕ್ಷದ ಒಟ್ಟು ಆದಾಯದಲ್ಲಿ ಭಾರಿ ಕುಸಿತ ಕಂಡುಬಂದಿದೆ. ಬಿಜೆಪಿಗೆ ಬಂದಿರುವ ಎಲೆಕ್ಟೋರಲ್​ ಬಾಂಡ್​ಗಳ ಪ್ರಮಾಣದಲ್ಲಿ ತೀವ್ರ ಇಳಿಕೆ ಆಗಿರುವ ಪರಿಣಾಮ ಈ ಆದಾಯ ಕುಸಿತ ಉಂಟಾಗಿದೆ.

    ಪಕ್ಷವು ಮೇ 21ರಂದು ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ವಾರ್ಷಿಕ ಲೆಕ್ಕಪರಿಶೋಧನಾ ವರದಿಯಲ್ಲಿನ ಅಂಶ ಈ ವ್ಯತ್ಯಾಸವನ್ನು ಬಹಿರಂಗಗೊಳಿಸಿದೆ. ಈ ವರದಿ ಪ್ರಕಾರ ಕಳೆದ ಆರ್ಥಿಕ ವರ್ಷದಲ್ಲಿ ಅಂದರೆ 2020-21ರಲ್ಲಿ ಎಲೆಕ್ಟೋರಲ್ ಬಾಂಡ್​ನ ಕೊಡುಗೆ 2,555 ಕೋಟಿ ರೂ.ನಿಂದ 22.38 ಕೋಟಿ ರೂ.ಗೆ ಇಳಿದಿದೆ.

    2020-21ರಲ್ಲಿ ಬಿಜೆಪಿಯ ಖರ್ಚು 620.39 ಕೋಟಿ ರೂ. ಆಗಿದ್ದು, ಎಲೆಕ್ಟೋರಲ್​ ಬಾಂಡ್​ ಮೂಲಕ ಬಂದ ಹಣ 752.33 ಕೋಟಿ ರೂ. ಮಾತ್ರ. ಆದರೆ 2019-20ರಲ್ಲಿ ಪಕ್ಷಕ್ಕೆ ಎಲೆಕ್ಟೋರಲ್ ಬಾಂಡ್​ ಮೂಲಕ ಬಂದ ಮೊತ್ತ 3,623 ಕೋಟಿ ರೂ. ಆಗಿದ್ದರೆ 1,651 ಕೋಟಿ ರೂ. ಖರ್ಚಾಗಿತ್ತು. ಒಟ್ಟಿನಲ್ಲಿ ಪಕ್ಷದ ಆದಾಯದ ಪ್ರಮಾಣ ಶೇ. 80 ಕುಸಿತ ಕಂಡಿದೆ.

    ಇನ್ನು 2021ರ ಮಾ. 31ರ ಅಂಕಿ-ಅಂಶದ ಪ್ರಕಾರ ಎಲೆಕ್ಟೋರಲ್ ಬಾಂಡ್ ಮೊತ್ತ 22.38 ಕೋಟಿ ರೂ. ಇದ್ದರೆ, 2020ರ ಮಾ. 31ರಂದು ಈ ಮೊತ್ತ 2,555 ಕೋಟಿ ರೂ. ಇತ್ತು. ಇನ್ನು ಲೋಕಸಭೆ ಚುನಾವಣೆ ಬಂದಾಗ ಎಲೆಕ್ಟೋರಲ್ ಬಾಂಡ್ ಕೊಡುಗೆ ಮತ್ತು ಖರ್ಚು ಹೆಚ್ಚಾಗುವುದು ಸಾಮಾನ್ಯ.

    ಮದ್ಯಪಾನ ಮಾಡಲು ಹಣ ಕೊಡಲಿಲ್ಲವೆಂದು ತಾಯಿಯನ್ನೇ ಕೊಂದ!

    ನಾನು ಏನು ಹೇಳುತ್ತೇನೋ ಅದನ್ನು ಮಾತ್ರ ಮಾಡುತ್ತೇನೆ… ಶುರುವಾಯ್ತು ಉಪ್ಪಿ ‘UI’

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts