More

    ಕಾರ್ಯಕರ್ತರ ಮನೋಬಲ ಹೆಚ್ಚಿಸಿದ ಅಭಿಪ್ರಾಯ ಸಂಗ್ರಹ

    ಗದಗ
    ರಾಜ್ಯದಲ್ಲಿ ಮೊದಲಬಾರಿ ಅಭ್ಯಥಿರ್ಗಳ ಅಂತಿಮ ಆಯ್ಕೆ ಕುರಿತು ಬಿಜೆಪಿಯು ಕಾರ್ಯಕರ್ತರ ಅಭಿಪಪ್ರಾಯ ಸಂಗ್ರಹಣೆಗೆ ಮುಂದಾಗಿದೆ. ಅದರ ಭಾಗವಾಗಿ ಜಿಲ್ಲೆಯ 4 ವಿಧಾನಸಭೆ ಕ್ಷೇತ್ರಗಳಿಗೆ ಟಿಕೆಟ್​ ಅಂತಿಮಗೊಳಿಸುವ ನಿಟ್ಟಿನಲ್ಲಿ ಬಿಜೆಪಿ ಮಾಜಿ ಸಚಿವ ಲಕ್ಷ$್ಮಣ ಸವದಿ ನೇತೃತ್ವದಲ್ಲಿ ಶುಕ್ರವಾರ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಣೆ ಮಾಡಲಾಯಿತು. ಪಕ್ಷದ ಇತಿಹಾಸದಲ್ಲೇ ಇದೇ ಮೊದಲ ಬಾರಿ ಟಿಕೆಟ್​ ಆಕಾಂಕ್ಷಿಗಳು ಕಾರ್ಯಕರ್ತರಲ್ಲಿ ತಮ್ಮ ಪರವಾಗಿ ಮತ ನೀಡುವಂತೆ ಮನವಿ ಮಾಡಿಕೊಂಡ ಪ್ರಸಂಗಗಳು ಕಾರ್ಯಕರ್ತರ ಮನೋಬಲ ಹೆಚ್ಚಿಸುವಂತೆ ಮಾಡಿತು. ರೋಣ, ನರಗುಂದ, ಶಿರಹಟ್ಟಿ ಹಾಗೂ ಗದಗ ಕ್ಷೇತ್ರಗಳಿಗೆ ಪ್ರತ್ಯೇಕವಾಗಿಯೇ ಅಭಿಪ್ರಾಯ ಸಂಗ್ರಹಿಸಲಾಗಿದ್ದು, ಪ್ರತಿಯೊಂದು ವಿಧಾನಸಭಾ ಕ್ಷೇತ್ರಕ್ಕೂ ಪ್ರತ್ಯೇಕವಾಗಿಯೇ ಸಮಯ ನಿಗದಿ ಮಾಡಲಾಗಿತ್ತು. ಜಿಪಂ, ತಾಪಂ, ಪುರಸಭೆ, ಪಟ್ಟಣ ಪಂಚಾಯ್ತಿ ಹಾಲಿ ಮಾಜಿ ಸದಸ್ಯರು, ಪಕ್ಷದ ಪ್ರಮುಖ ಹುದ್ದೆಗಳಲ್ಲಿರುವವರು ತಮ್ಮ ಕ್ಷೇತ್ರದಲ್ಲಿ ಯಾರಿಗೆ ಟಿಕೆಟ್​ ನೀಡಿದರೆ ಸೂಕ್ತ ಎನ್ನುವ ಅಭಿಪ್ರಾಯವನ್ನು ಗೌಪ್ಯ ಮತದಾನದ ಮೂಲಕ ಮಾಡಿದ್ದುಮ ಹೊಸ ಇತಿಹಾಸ ಸೃಷ್ಟಿಸಿದೆ.
    ಚುನಾವಣೆ ನಂತರ ಜನಪ್ರತಿನಿಧಿಗಳು ತಮ್ಮ ವಿಷಿತ್ರ ವರ್ತನೆಯಿಂದ ಕಾರ್ಯಕರ್ತರನ್ನು ನಿರ್ಲಕ್ಷ ವಹಿಸಿ ಪಕ್ಷಕ್ಕೆ ಮುಜುಗುರು ತಂದೊಡ್ಡುತ್ತಿದ್ದರು. ಜಾತಿ ಮತ್ತು ಪ್ರಭಾವದಿಂದಾಗಿ ಟಿಕೆಟ್​ ಗಿಟ್ಟಿಸಿ ಚುನಾವಣೆಗೆ ಸ್ಪಧಿರ್ಸುತ್ತಿದ್ದ ಜನಪ್ರತಿನಿಧಿಗಳಿಗೆ ಶುಕ್ರವಾರ ಜರುಗಿದ ಅಭಿಪ್ರಾಯ ಸಂಗ್ರಹ ಪಕ್ರಿಯೆ ಒಂದು ಪಾಠವಾಗಿ ಪರಿಗಣಿಸಿದೆ. ಈ ಮೊದಲು ನಾಯಕರ ವಿರುದ್ಧ ಕಾರ್ಯಕರ್ತರು ಬಹಿರಂಗವಾಗಿ ಧ್ವನಿ ಎತ್ತಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಪಕ್ಷ ಆಂತರಿಕ ಮತದಾನದ ಮೂಲಕ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಣೆಗೆ ಅವಕಾಶ ಕಲ್ಪಿಸಿದ್ದು ಒಳ್ಳೆಯ ಬೆಳವಣಿಗೆಯಾಗಿದೆ ಎಂದು ಪಕ್ಷದ ಕಾರ್ಯಕರ್ತರಲ್ಲಿ ಅಭಿಪ್ರಾಯ ಮೂಡಿದೆ. ಶುಕ್ರವಾರ ನಡೆದ ಮತದಾನದ ಪ್ರಕ್ರಿಯೆಯಲ್ಲಿ ಆಯಾ ಕ್ಷೇತ್ರದ ಆಯ್ಕೆ ನಡೆಯುತ್ತಿದ್ದ ವೇಳೆ ಹಿಂಬಾಲಕರು ಘೋಷಣೆ ಕೂಗಿದ ಟನೆಗಳು ಜರುಗಿದರು.

    ಬಾಕ್ಸ್​
    ರಾಜ್ಯದ 224 ಕ್ಷೇತ್ರಗಳಿಗೆ 34 ನಮ್ಮ ಸಂಟನಾತ್ಮಕ ಜಿಲ್ಲೆಗಳಲ್ಲಿ ಪಕ್ಷದಿಂದ ನೇಮಕವಾಗಿರುವ ವೀಕ್ಷಕರ ಸಮ್ಮುಖದಲ್ಲಿ ಅಭಿಪ್ರಾಯ ಸಂಗ್ರಹ ಮಾಡಲಾಗಿದೆ. ಈ ಅಭಿಪ್ರಾಯಗಳನ್ನು ಪಕ್ಷದ ಕೋರ್​ ಕಮೀಟಿಯಲ್ಲಿ ಚಚಿರ್ಸಲಾಗುವುದು ಎಂದು ಜಿಲ್ಲೆಯ ವೀಕ್ಷಕ ಲಕ್ಷ$್ಮಣ ಸವದಿ ಹೇಳಿದರು.
    ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪದ ಪದಾಧಿಕಾರಿಗಳು ಮೂರು ಅಭ್ಯಥಿರ್ಗಳ ಆಯ್ಕೆ ಮಾಡುವ ಅವಕಾಶ ಇದೆ. ಹೆಚ್ಚು ಮತದಾನ ಪಡೆದ ಅಭ್ಯಥಿರ್ಗೆ ಆದ್ಯತೆ ನೀಡಲಾಗುತ್ತದೆ. ಒಂದಕ್ಕಿಂತ ಹೆಚ್ಚು ಹೆಸರು ಪ್ರಸ್ತಾಪವಿರದ ಕ್ಷೇತ್ರದಲ್ಲಿ ಒಬ್ಬರ ಹೆಸರನ್ನೇ ಶಿಫಾರಸ್ಸು ಮಾಡುತ್ತೇವೆ ಎಂದರು.
    ಅಥಣಿ ವಿಷಯ ಕುರಿತ ಪ್ರಶ್ನೆಗೆ ಉತ್ತರಿಸಿದ ಲಕ್ಷ$್ಮಣ ಸವದಿ, ನಾನು ಗೋಕಾಕ್​, ಅಥಣಿ ವಿಷಯ ಮಾತನಾಡಲು ಇಲ್ಲಿಗೆ ಆಗಮಿಸಿಲ್ಲ. ನಾನೂ ಎಲ್ಲಿ ಸ್ಪರ್ಧೆ ಮಾಡಬೇಕು ಎನ್ನುವುದನ್ನು ನಮ್ಮ ಪದ ವರಿಷ್ಠರು ತೀರ್ಮಾನ ಮಾಡುತ್ತಾರೆ ಎಂದರು.
    75 ವರ್ಷ ಮೀರಿದ ಅಭ್ಯಥಿರ್ಗಳ ಕುರಿತ ಸ್ಪರ್ಧೆಗೆ ಹೈಕಮಾಂಡ ಇನ್ನೂ ಸೂಚಿಸಿಲ್ಲ. ಈಶ್ವರಪ್ಪ ಅವರ ೇತ್ರದ ಬಗ್ಗೆಯೂ ನಿರ್ಣಯವಾಗಿಲ್ಲ ಎಂದ ಅವರು ಅಥಣಿ ವಿಷಯವಾಗಿ ಇವತ್ತಿನವರೆಗೂ ಜನಾಭಿಪ್ರಾಯ ಸಂಗ್ರಹ ಮಾಡುತ್ತಿದ್ದೇವೆ ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts