More

    ಪಶ್ಚಿಮ ಬಂಗಾಳವೂ ನಮ್ಮದೇ; ಮಮತಾ ವಿರುದ್ಧ 200 ಸೀಟು ಗೆಲ್ಲುತ್ತೇವೆಂದ ಅಮಿತ್​ ಷಾ

    ಕೋಲ್ಕತ: ಕೇಂದ್ರದ ಆಡಳಿತದೊಂದಿಗೆ ಬಹುತೇಕ ರಾಜ್ಯಗಳಲ್ಲಿ ಆಡಳಿತ ಸಾಧಿಸಿರುವ ಬಿಜೆಪಿ ಪಕ್ಷ ಪಶ್ಚಿಮ ಬಂಗಾಳದ ಚುನಾವಣೆಯಲ್ಲಿ ಗೆದ್ದು, ರಾಜ್ಯವನ್ನು ತನ್ನ ಅಧಿಕಾರಕ್ಕೆ ತೆಗೆದುಕೊಳ್ಳುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್​ ಷಾ ಹೇಳಿದ್ದಾರೆ. ಎರಡು ದಿನಗಳ ಕಾಲ ಪಶ್ಚಿಮ ಬಂಗಾಳ ಪ್ರವಾಸದಲ್ಲಿರುವ ಅವರು ಇಂದು ಕೋಲ್ಕತದಲ್ಲಿ ಈ ಮಾತನ್ನು ಹೇಳಿದ್ದಾರೆ.

    ತೃಣಮೂಲ ಕಾಂಗ್ರೆಸ್​ ಪಕ್ಷದ ಮಮತಾ ಅವರಿಗೆ 2010ರಲ್ಲಿ ಅಧಿಕಾರವನ್ನು ಕೊಡಲಾಯಿತು. ಆದರೆ ಈ 10 ವರ್ಷಗಳಲ್ಲಿ ಅವರ ಸರ್ಕಾರ ಟೊಳ್ಳು ಸರ್ಕಾರ ಎನ್ನುವುದು ಸಾಬೀತಾಗಿದೆ. ಇಲ್ಲಿನ ಜನರಿಗೆ ಅವರ ಬಗ್ಗೆ ಆಕ್ರೋಶ ಹುಟ್ಟಿದೆ. ಮುಂದಿನ ವರ್ಷದ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಟಿಎಂಸಿ ವಿರುದ್ಧ 200 ಸೀಟುಗಳ ಜಯ ಸಾಧಿಸಲಿದೆ ಎಂದು ಅವರು ಹೇಳಿದ್ದಾರೆ.

    ಇದನ್ನೂ ಓದಿ: ಮಿಥಾಲಿ ರಾಜ್‌ರನ್ನು ‘ಮೈ ಡಿಯರ್’ ಎಂದಿದ್ದಕ್ಕೆ ಟೀಕೆಗೆ ಒಳಗಾದ ಡ್ಯಾನಿ ಮಾರಿಸನ್!

    2021ರಲ್ಲಿ ನಡೆಯಲಿರುವ ಚುನಾವಣೆಗೆ ಈಗಾಗಲೇ ಪ್ರಚಾರ ಆರಂಭಿಸಿರುವ ಅವರು, ಜನರಲ್ಲಿ ಈ ಬಾರಿ ಬಿಜೆಪಿಗೇ ಮತ ನೀಡುವಂತೆ ಕೇಳಿಕೊಂಡಿದ್ದಾರೆ. ನೀವು ಕಾಂಗ್ರೆಸ್​ಗೆ ಮತ ನೀಡಿದಿರಿ, ಕಮ್ಯುನಿಸ್ಟರಿಗೆ ಮತ ನೀಡಿದಿರಿ, ಟಿಎಂಸಿಗೂ ಮತ ನೀಡಿದಿರಿ. ಈಗ ಬಿಜೆಪಿಗೆ ಮತ ನೀಡಿ. ಕೇಂದ್ರ ಸರ್ಕಾರದಿಂದ ಬರುವ ಯಾವ ಹಣವನ್ನು ಟಿಎಂಸಿ ಸರ್ಕಾರ ಜನರಿಗೆ ಬಳಸುತ್ತಿಲ್ಲ. ಕರೊನಾದಂತಹ ಸಂಕಷ್ಟದ ಸಮಯದಲ್ಲೂ ಪಕ್ಷ ಭ್ರಷ್ಟಾಚಾರವನ್ನು ಮುಂದುವರಿಸಿದೆ. ಈ ದುಸ್ಥಿತಿಯನ್ನು ನಮ್ಮ ಪಕ್ಷ ಆಡಳಿತಕ್ಕೆ ಬಂದ ಮೇಲೆ ಸರಿಪಡಿಸಲಾಗುವುದು ಎಂದು ಅವರು ತಿಳಿಸಿದ್ದಾರೆ. (ಏಜೆನ್ಸೀಸ್​)

    ಗಾಜಿಯಾಬಾದ್​ನ 7ರ ಪೋರಿ ಈಗ ವಿಶ್ವದ ಅತ್ಯಂತ ಕಿರಿಯ ಲೇಖಕಿ; ಲಾಕ್​ಡೌನ್​ನಲ್ಲಿ ಅರಳಿದ ಪ್ರತಿಭೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts