More

    ಸಮರ್ಥ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದೇವೆ, ಒಬ್ಬಿಬ್ಬರು ಪಕ್ಷ ತೊರೆದರೆ ಪರಿಣಾಮ ಬೀರದು: ಬಿ.ಎಸ್​.ಯಡಿಯೂರಪ್ಪ

    ಬೆಂಗಳೂರು: ವಿಧಾನಸಭೆ ಚುನಾವಣೆಗೆ ಮೊದಲ ಕಂತಿನಲ್ಲಿ ಸಮರ್ಥ ಅಭ್ಯರ್ಥಿಗಳನ್ನು ಬಿಜೆಪಿ ಸಂಸದೀಯ ಮಂಡಳಿ ಆಯ್ಕೆ ಮಾಡಿದೆ. 2-3 ಕಡೆ ಗೊಂದಲ ಬಿಟ್ಟರೆ ಉಳಿದೆಲ್ಲ ಕ್ಷೇತ್ರಗಳಲ್ಲಿ ಒಳ್ಳೆಯ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ ಎಂದು ಮಾಜಿ ಸಿಎಂ, ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಸಮರ್ಥಿಸಿಕೊಂಡಿದ್ದಾರೆ.

    ಪಕ್ಷದ ಮಾಧ್ಯಮ ಕೇಂದ್ರದಲ್ಲಿ ಕಾಗೋಡು ತಿಮ್ಮಪ್ಪ ಪುತ್ರಿ ಡಾ.ರಾಜನಂದಿನಿ ಸೇರಿ ಹಲವು ಮುಖಂಡರನ್ನು ಪಕ್ಷಕ್ಕೆ ಬುಧವಾರ ಬರಮಾಡಿಕೊಂಡ ನಂತರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ್ಧಾರೆ.

    ಸಮರ್ಥ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದೇವೆ, ಒಬ್ಬಿಬ್ಬರು ಪಕ್ಷ ತೊರೆದರೆ ಪರಿಣಾಮ ಬೀರದು: ಬಿ.ಎಸ್​.ಯಡಿಯೂರಪ್ಪ

    ಇದನ್ನೂ ಓದಿ: ಕಾಂಗ್ರೆಸ್ ಹಿರಿಯ ನಾಯಕ ಕಾಗೋಡು ತಿಮ್ಮಪ್ಪ ಪುತ್ರಿ ಬಿಜೆಪಿಗೆ ಸೇರ್ಪಡೆ!

    ಯಾವುದೇ ಪರಿಣಾಮ ಬೀರುವುದಿಲ್ಲ

    ಕೆಲವೆಡೆ ಟಿಕೆಟ್ ಸಿಗದೇ ಬೇಸರಗೊಂಡವರನ್ನು ಕರೆದು ಮಾತನಾಡುತ್ತೇವೆ. ಒಂದೆರಡು ದಿನಗಳಲ್ಲಿ ಎಲ್ಲವೂ ಸರಿಯಾಗಲಿದೆ. ಒಂದಿಬ್ಬರು ಅತೃಪ್ತಿಯಿಂದ ಪಕ್ಷ ತೊರೆದರೆ ಯಾವುದೇ ಪರಿಣಾಮಬೀರುವುದಿಲ್ಲ. ನೂರಕ್ಕೆ ನೂರರಷ್ಟು ಪಕ್ಷ ಬಹುಮತ ಗಳಿಸಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಶೆಟ್ಟರ್ ಸ್ಪರ್ಧಿಸಲಿ

    ಜಗದೀಶ ಶೆಟ್ಟರ್ ದೆಹಲಿಗೆ ಹೋಗಿದ್ದಾರೆ. ನಾನೂ ಕೂಡ ವರಿಷ್ಠರೊಂದಿಗೆ ಮಾತನಾಡಿರುವೆ. ಈ ಬಾರಿ ಶೆಟ್ಟರ್ ಸ್ಪರ್ಧಿಸಬೇಕು ಎಂಬುದು ನನ್ನ ಅಪೇಕ್ಷೆಯಾಗಿದೆ. ಜಗದೀಶ್​ ಶೆಟ್ಟರ್​ ಅವರಿಗೆ ಟಿಕೆಟ್​ ನೀಢಬೇಕು ಎಂದು ಹೈಕಮಾಂಡ್​ಗೆ ವಿನಂತಿಸಿದ್ದೇನೆ ಎಂದು ಮಾಜಿ ಸಿಎಂ, ಬಿಜಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್​.ಯಡಿಯೂರಪ್ಪ ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts