More

  VIDEO| ಪಟನಾ ವಿಮಾನ ನಿಲ್ದಾಣಕ್ಕೆ ಬಾಂಬ್​ ಬೆದರಿಕೆ; ಶೋಧ ಕಾರ್ಯಾಚರಣೆ

  ಪಟನಾ: ಬಿಹಾರದ ರಾಜಧಾನಿ ಪಟನಾದಲ್ಲಿರುವ ಜಯಪ್ರಕಾಶ್​ ವಿಮಾನ ನಿಲ್ದಾಣದಲ್ಲಿ ಬಾಂಬ್​ ಇಟ್ಟಿರುವುದಾಗಿ ಅನಾಮಧೇಯ ವ್ಯಕ್ತಿ ಓರ್ವ ಕರೆ ಮಾಡಿದ್ದು ಏರ್​ಪೋರ್ಟ್​ನ ಆವರಣದಲ್ಲಿ ಬಾಂಬ್​ ನಿಷ್ಕ್ರಿಯ ದಳ ಶೋಧ ಕಾರ್ಯ ನಡೆಸಿದೆ.

  ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿರುವ ಬಾಂಬ್​ ನಿಷ್ಕ್ರಿಯ ದಳದ ಸದಸ್ಯರು ವಿಮಾನ ನಿಲ್ದಾಣದ ಆವರಣದಲ್ಲಿ ಬಾಂಬ್​ಗಾಗಿ ತೀವ್ರ ಶೋಧ ನಡೆಸಿದ್ದು ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಮುನ್ನೆಚ್ಚರಿಕಾ ಕ್ರಮವನ್ನು ವಹಿಸಿದೆ.

  ಇದನ್ನೂ ಓದಿ: VIDEO| ಟ್ರಾಪಿಕ್​ ಸಮಸ್ಯೆ ತಪ್ಪಿಸಲು ಮೆಟ್ರೋದಲ್ಲಿ ಪ್ರಯಾಣಿಸಿದ ನಟಿ ಹೇಮಾ ಮಾಲಿನಿ!

  ವಿಮಾನ ಸೇವೆಯಲ್ಲಿ ವ್ಯತ್ಯಯವಿಲ್ಲ

  ಈ ಕುರಿತು ಪ್ರತಿಕ್ರಿಯಿಸಿರುವ ವಿಮಾನ ನಿಲ್ದಾಣದ ಹಿರಿಯ ಅಧಿಕಾರಿ ಒಬ್ಬರು ಬೆಳ್ಳಗೆ 10:47ರ ಸುಮಾರಿಗೆ ಅನಾಮಧೇಯ ವ್ಯಕ್ತಿ ಒಬ್ಬ ಕರೆ ಮಾಡಿ ಏರ್​ಪೋರ್ಟ್​ನಲ್ಲಿ ಬಾಂಬ್​ ಇಟ್ಟಿರುವುದಾಗಿ ಹೇಳಿ ಕರೆ ಕಟ್​ ಮಾಡಿದ್ದಾನೆ.

  ನಾವು ಕೂಡಲೇ ಬಾಂಬ್​ ನಿಷ್ಕ್ರಿಯ ದಳಕ್ಕೆ ತಿಳಿಸಿದ್ದೇವೆ ಮತ್ತು ಅವರು ಕಾರ್ಯಾಚರಣೆಯನ್ನು ಮಾಡುತ್ತಿದ್ದಾರೆ. ಬೆದರಿಕೆ ಕರೆ ಹಿನ್ನಲೆಯಲ್ಲಿ ವಿಮಾನಗಳ ಸೇವೆಯಲ್ಲಿ ಯಾವುದೇ ವ್ಯತ್ಯಾಸವಾಗುವುದಿಲ್ಲ ಮತ್ತು ಪೊಲೀಸರು ಕರೆ ಮಾಡಿದ ಆ ವ್ಯಕ್ತಿಯನ್ನು ಹುಡುಕುತ್ತಿದ್ದಾರೆ ಎಂದು ವಿಮಾನ ನಿಲ್ದಾಣದ ಅಧಿಕಾರಿ ತಿಳಿಸಿದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts