More

    ಶ್ರೀರಾಮ ಜಯೋಷದ ನಡುವೆ ಚುನಾವಣೆಗೆ ಬಿಜೆಪಿ ಸಂಕಲ್ಪ, ಮೋದಿಗೆ ಅಭಿನಂದನೆ, ರಾಜ್ಯ ಸರ್ಕಾರಕ್ಕೆ ಖಂಡನಾ ನಿರ್ಣಯಅರಮನೆ ಆವರಣದಲ್ಲಿ ಕೇಸರಿ ಕಮಾಲ್, ಯಶಸ್ವಿ ಕಾರ್ಯಕಾರಿಣಿ

    ಬೆಂಗಳೂರು:
    ಯಾವ ಕ್ಷಣದಲ್ಲಾದರೂ ಲೋಕಸಭೆ ಚುನಾವಣೆ ೋಷಣೆ ಆಗಬಹುದಾಗಿದ್ದು, ಅದಕ್ಕೆ ಸರ್ವ ಸಜ್ಜಾಗಲು ಬಿಜೆಪಿ ಕಾರ್ಯಕಾರಿಣಿ ನಿರ್ಣಯಿಸಿದೆ.
    ಅರಮನೆ ಆವರಣದಲ್ಲಿ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಅಧ್ಯಕ್ಷತೆಯಲ್ಲಿ ನಡೆದ ಮೊದಲ ಕಾರ್ಯಕಾರಿಣಿ ಸಮಿತಿ ಸಭೆಯಲ್ಲಿ ಶ್ರೀರಾಮನ ಜಯೋಷದ ನಡುವೆ ಚುನಾವಣೆ ಸಜ್ಜಾಗುವ ಸಂಕಲ್ಪವನ್ನು ಮಾಡಲಾಯಿತು.

    ಅಭಿನಂದನಾ ನಿರ್ಣಯ
    550 ವರ್ಷಗಳ ಭಾರತೀಯರ, ಹಿಂದೂ ಸಮಾಜದ ಬಹುನಿರೀಕ್ಷಿತ ಬೇಡಿಕೆ ಈಡೇರಿಸಿ ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿರ್ಮಾಣ, ಪ್ರಾಣ ಪ್ರತಿಷ್ಠಾಪನೆ ಯಶಸ್ವಿಯಾಗಿ ಪೂರ್ಣಗೊಳಿಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಅಭಿನಂದಿಸುವ ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಲಾಗಿದೆ.

    ಖಂಡನಾ ನಿರ್ಣಯ
    ದಲಿತ ಮತ್ತು ಶೋಷಿತ ವರ್ಗಕ್ಕೆ ಮೀಸಲಿಟ್ಟ 11 ಸಾವಿರ ಕೋಟಿ ರೂ ಹಣವನ್ನು ಗ್ಯಾರಂಟಿಗಾಗಿ ಉಪಯೋಗ ಮಾಡಿ ದಲಿತರು ಮತ್ತು ಶೋಷಿತರಿಗೆ ವಂಚಿಸಿರುವ ರಾಜ್ಯ ಸರಕಾರದ ದಲಿತ ವಿರೋಧಿ ನೀತಿ ಮತ್ತು ರೈತ ವಿರೋಧಿ ನೀತಿಯನ್ನು ಖಂಡಿಸಿ ನಿರ್ಣಯ ಅಂಗೀಕರಿಸಲಾಗಿದೆ.
    ರಾಜ್ಯ ಸರ್ಕಾರದ ವಿರುದ್ದ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ.

    ತಾಲೂಕು, ಜಿಲ್ಲಾ ಸಮಾವೇಶ
    ಕೇಂದ್ರ ಸರಕಾರದ ಫಲಾನುಭವಿಗಳಾದ ಮಹಿಳೆಯರು, ಸ್ವಸಹಾಯ ಸಂಘಗಳನ್ನು ಭೇಟಿ ಮಾಡಿ ಕೇಂದ್ರದ ಯೋಜನೆಗಳನ್ನು ಮನವರಿಕೆ ಮಾಡಿಕೊಡುವ ತಾಲ್ಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ನಾರಿ ಶಕ್ತಿ ವಂದನಾ ಸಮಾವೇಶಗಳನ್ನು ೆ.25ರೊಳಗೆ ನಡೆಸಲು ಕಾರ್ಯಕಾರಿಣಿ ತೀರ್ಮಾನಿಸಿದೆ.
    ಇದರ ಜವಬ್ದಾರಿಯನ್ನು ಮಾಜಿ ಸಚಿವೆ ಶಶಿಕಲಾ ಜೊಲ್ಲೆ, ಮಹಿಳಾ ಮೋರ್ಚಾದ ಮಾಜಿ ಅಧ್ಯಕ್ಷೆ ಗೀತಾ ವಿವೇಕಾನಂದ, ಮಹಿಳಾ ಮೋರ್ಚಾದ ಅಧ್ಯಕ್ಷೆ ಮಂಜುಳಾ, ಭಾರತಿ ಮುಗ್ದುಂ ಅವರಿಗೆ ವಹಿಸಲಾಗಿದೆ.

    ಗೋಡೆ ಬರಹ
    3ನೇ ಬಾರಿಗೆ ಮತ್ತೊಮ್ಮೆ ಬಿಜೆಪಿ ಸರಕಾರ, ಮತ್ತೊಮ್ಮೆ ಮೋದಿ ಎಂಬ ಗೋಡೆಬರಹವನ್ನು
    ಪ್ರತಿ ಬೂತ್ ಮಟ್ಟದಲ್ಲಿ ಒಂದು ಅಥವಾ ಎರಡು ಕಡೆ ಬರೆಯಲು ನಿಶ್ಚಯಿಸಲಾಗಿದೆ. 58 ಸಾವಿರ ಬೂತ್‌ಗಳಲ್ಲಿ ಜ.30ರಂದು ಎಲ್ಲ ಪದಾಧಿಕಾರಿಗಳು ಇದನ್ನು ಆಂದೋಲನವಾಗಿ ನಡೆಸಲು ನಿರ್ಣಯಿಸಲಾಗಿದೆ. ಇದಕ್ಕಾಗಿ ನಂದೀಶ್ ರೆಡ್ಡಿ ಸಂಚಾಲಕತ್ವದಲ್ಲಿ ಡಾ.ಶೈಲೇಂದ್ರ ಬೆಲ್ದಾಳೆ, ಮಹೇಂದ್ರ ಕವತಾಳ, ಹರಿಕೃಷ್ಣ ಸಹ ಸಂಚಾಲಕರಾಗಿರುವ ಸಮಿತಿ ರಚಿಸಲಾಗಿದೆ.

    ಜಿಲ್ಲಾ ಕಾರ್ಯಕಾರಿಣಿ
    ಹೊಸದಾಗಿ ಎಲ್ಲಾ ಜಿಲ್ಲಾ ಪದಾಧಿಕಾರಿಗಳು ನೇಮಕಗೊಂಡಿರುವ ಹಿನ್ನೆಲೆಯಲ್ಲಿ ಕೂಡಲೆ ಚುನಾವಣೆಗೆ ಸಜ್ಜಾಗಲು, ಫೆ. 3ರಿಂದ 5ರವರೆಗೆ ಎಲ್ಲ ಜಿಲ್ಲೆಗಳಲ್ಲಿ ಕಾರ್ಯಕಾರಿಣಿ ಸಭೆ ನಡೆಸಿ ವರದಿ ನೀಡುವಂತೆಯೂ ಕಾರ್ಯಕಾರಿಣಿಯಲ್ಲಿ ನಿರ್ಣಯಿಸಲಾಗಿದೆ.

    *ಬಿ.ವೈ.ವಿಜಯೇಂದ್ರ ಅವರು ರಾಜ್ಯಾಧ್ಯಕ್ಷರಾದ ಬಳಿಕ ಪ್ರಥಮ ರಾಜ್ಯ ಕಾರ್ಯಕಾರಿಣಿ ಯಶಸ್ವಿಯಾಗಿ ನಡೆದು ಸಮಾರೋಪಗೊಂಡಿದೆ. ಸಭೆಗೆ ಸಂಸದರು, ಶಾಸಕರು, ರಾಜ್ಯ ಪದಾಧಿಕಾರಿಗಳು, ಮಾಜಿ ಶಾಸಕರು, ಪರಾಜಿತ ಅಭ್ಯರ್ಥಿಗಳು ಸೇರಿದಂತೆ ಶೇ.85ಕ್ಕೂ ಹೆಚ್ಚು ಹಾಜರಾತಿ ಇದ್ದದ್ದು ವಿಶೇಷ.
    -ಪ್ರೀತಂಗೌಡ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ

    *ಕಾರ್ಯಕಾರಿಣಿಯಲ್ಲಿ ಹಲವು ಚರ್ಚೆಗಳಾಗಿದ್ದು, ಮೋದಿ ಅವರಿಗೆ ಅಭಿನಂದನಾ ನಿರ್ಣಯ, ರಾಜ್ಯ ಸರ್ಕಾರದ ವಿರುದ್ದ ಖಂಡನಾ ನಿರ್ಣಯ ಅಂಗೀಕರಿಸಲಾಗಿದೆ. ಸಭೆಗೆ ಸುಮಾರು 800 ಜನ ಅಪೇಕ್ಷಿತರು ಭಾಗವಹಿಸಿದ್ದರು.
    -ಅಶ್ವತ್ಥನಾರಾಯಣ್, ಬಿಜೆಪಿ ರಾಜ್ಯ ಮುಖ್ಯ ವಕ್ತಾರರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts