More

    ಚೀನಾ ವಸ್ತುಗಳ ಆಮದು ಪ್ರಮಾಣ ಹೆಚ್ಚಿದ್ದೇ ಎನ್​ಡಿಎ ಸರ್ಕಾರದ ಅವಧಿಯಲ್ಲಿ: ರಾಹುಲ್​ ಗಾಂಧಿ

    ನವದೆಹಲಿ: ಭಾರತ-ಚೀನಾ ಗಡಿಯಲ್ಲಿ ಬಿಕ್ಕಟ್ಟು ಉಂಟಾಗಿರುವ ಹಿನ್ನೆಲೆಯಲ್ಲಿ ಭಾರತದಲ್ಲಿ ಚೀನಾ ವಸ್ತುಗಳ ಬಹಿಷ್ಕಾರದ ಕೂಗು ಕೇಳಿಬರುತ್ತಿದೆ. ಈ ಮಧ್ಯೆ ಕೇಂದ್ರ ಸರ್ಕಾರ ಚೀನಾದ 59 ಆ್ಯಪ್​ಗಳನ್ನು ನಿಷೇಧಿಸಿದೆ.

    ಈಗ ಇದೇ ವಿಚಾರವನ್ನು ಮುಂದಿಟ್ಟುಕೊಂಡು ಕಾಂಗ್ರೆಸ್​ ಸಂಸದ ರಾಹುಲ್​ ಗಾಂಧಿ ಟ್ವೀಟ್​ ಮೂಲಕ ಕೇಂದ್ರ ಸರ್ಕಾರ ಮತ್ತು ಪ್ರಧಾನಮಂತ್ರಿ ಮೋದಿಯವರ ವಿರುದ್ಧ ವ್ಯಂಗ್ಯವಾಡಿದ್ದಾರೆ. ಹೇಳುವುದು ಒಂದು, ಮಾಡುವುದು ಮತ್ತೊಂದು ಎಂದು ಟೀಕಿಸಿದ್ದಾರೆ.
    ಕಾಂಗ್ರೆಸ್​ ನೇತೃತ್ವದ ಯುಪಿಎ ಸರ್ಕಾರದ ಆಡಳಿತವಿದ್ದಾಗಿಕಿಂತ, ಈಗ ಎನ್​ಡಿಎ ಸರ್ಕಾರದ ಅವಧಿಯಲ್ಲೇ ಚೀನಾ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುವ ಪ್ರಮಾಣ ಹೆಚ್ಚಾಗಿದೆ ಎಂದು ಒಂದು ಗ್ರಾಫ್​ ಫೋಟೋವನ್ನು ಪೋಸ್ಟ್ ಮಾಡುವ ಮೂಲಕ ಹೇಳಿದ್ದಾರೆ.
    ಬಿಜೆಪಿ ಬಾಯಲ್ಲಿ ಮೇಕ್​ ಇನ್​ ಇಂಡಿಯಾ ಎನ್ನುತ್ತದೆ. ಆದರೆ ಅನೇಕ ವಸ್ತುಗಳನ್ನು ಚೀನಾದಿಂದ ಖರೀದಿಸುತ್ತಿದೆ ಎಂದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಪಾಕ್​​​ನಿಂದ 38 ಭಾರತೀಯ ಅಧಿಕಾರಿಗಳು ವಾಪಸ್; ಬಸ್​, ಟ್ರಕ್​​ನಲ್ಲಿ ಗಡಿ ತಲುಪಿದ ಸಿಬ್ಬಂದಿ

    ಯುಪಿಎ ಸರ್ಕಾರವಿದ್ದಾಗ ಚೀನಾದಿಂದ ವಸ್ತುಗಳನ್ನು ಆಮದು ಮಾಡಿಕೊಳ್ಳುವ ಪ್ರಮಾಣ ಶೇ.12-13ರಷ್ಟು ಇತ್ತು. 2014ರ ನಂತರ, ಅಂದರೆ ಎನ್​ಡಿಎ ಸರ್ಕಾರ ಆಡಳಿತಕ್ಕೆ ಬಂದ ನಂತರ ಆಮದು ಪ್ರಮಾಣ ಹೆಚ್ಚುತ್ತ ಹೋಗಿ, ಈಗ ಶೇ.17-18ಕ್ಕೆ ಬಂದು ತಲುಪಿದೆ ಎಂದು ರಾಹುಲ್​ ಗಾಂಧಿಯವರು ಪೋಸ್ಟ್​ ಮಾಡಿದ ಗ್ರಾಫ್​ನಲ್ಲಿ ತೋರಿಸಲಾಗಿದೆ. ಇದನ್ನೂ ಓದಿ: ಕಾಗೆಗಳ ತಂಟೆಗೆ ಹೋಗಬೇಡಿ..ಅದನ್ನು ಹಿಡಿದು ಹಿಂಸಿಸುವ ಮುನ್ನ ಈ ಸ್ಟೋರಿ ಓದಿ…

    ಭಾರತದ 20 ಯೋಧರನ್ನು ಚೀನಾ ಹತ್ಯೆಗೈದ ದಿನದಿಂದಲೂ ರಾಹುಲ್​ ಗಾಂಧಿ ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ಮೋದಿಯವರ ವಿರುದ್ಧ ಟ್ವೀಟ್​ ಮೂಲಕ ವಾಗ್ದಾಳಿ ನಡೆಸುತ್ತಲೇ ಇದ್ದಾರೆ. (ಏಜೆನ್ಸೀಸ್​)

    VIDEO| ನೋಡ ನೋಡುತ್ತಿದಂತೆಯೇ ನಡುರಸ್ತೆಯಲ್ಲೇ ಕಬ್ಬಿನ ಲಾರಿ ಪಲ್ಟಿ: ಚಾಲಕ, ಕ್ಲೀನರ್ ಪಾರಾಗಿದ್ಹೇಗೆ?​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts