More

    ರಾಜ್ಯ ಸರ್ಕಾರದ ವೈಫಲ್ಯತೆ ಖಂಡಿಸಿ ಬಿಜೆಪಿ ಪ್ರತಿಭಟನೆ

    ಕೋಲಾರ: ಜನತೆಯ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ, ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್​ ವಿರುದ್ಧ ಸೋಮವಾರ ನಗರದಲ್ಲಿ ಬೃಹತ್​ ಪ್ರತಿಭಟನೆ ನಡೆಸಿದರು.

    ಇಲ್ಲಿನ ಅಂಬೇಡ್ಕರ್​ ವೃತ್ತದಲ್ಲಿ ಜಮಾಯಿಸಿದ ಬಿಜೆಪಿ ಕಾರ್ಯಕರ್ತರು ಮೆಕ್ಕೆ ವೃತ್ತದ ತನಕ ಪ್ರತಿಭಟನಾ ಮೆರವಣಿಗೆ ನಡೆಸಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್​ ಸಚಿವರ ವಿರುದ್ಧ ವಗ್ದಾಳಿ ನಡೆಸಿದರು. ಕಾಂಗ್ರೆಸ್​ ಸರ್ಕಾರದ ವಿರುದ್ಧ ಘೋಷಣೆಗಳನ್ನು ಹಾಕಿದರು. ಪ್ರತಿಭಟನೆಗೂ ಮುನ್ನ ಅಂಬೇಡ್ಕರ್​ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.
    ವಿರೋಧ ಪಕ್ಷದ ನಾಯಕ ಆರ್​.ಅಶೋಕ್​ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್​ ಸರ್ಕಾರ ಬರ ಪರಿಹಾರ ಬಿಡುಗಡೆ ಮಾಡದೆ ವಿನಾಕಾರಣ ಕೇಂದ್ರದ ಕಡೆ ಬೊಟ್ಟು ಮಾಡಿ ತೋರುತ್ತಿದೆ. ಜಿಲ್ಲೆಯಲ್ಲಿ 32,400 ಹೆಕ್ಟೇರ್​ ಜಮೀನಿಗೆ ಪರಿಹಾರ ಬಿಡುಗಡೆ ಮಾಡಬೇಕು. ರಾಜ್ಯದಲ್ಲಿ ಇದುವರೆಗು 800 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಆದರೂ ಸಹ ಸರ್ಕಾರಕ್ಕೆ ಗಂಭೀರತೆಯಿಲ್ಲವಾಗಿದೆ ಎಂದು ಆರೋಪಿಸಿದರು.
    ರೈತರು ಬ್ಯಾಂಕ್​ಗಳಲ್ಲಿ ಮಾಡಿರುವ ಕೈ ಸಾಲವನ್ನು ಮರುಪಾವತಿ ಮಾಡಲು ಸಾಧ್ಯವಾಗದೆ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಅಧಿಕಾರಿಗಳು ಬರ ಪರಿಸ್ಥಿತಿಯ ನಡುವೆಯೂ ಹಣ ಕಟ್ಟುವಂತೆ ಕಿರುಕುಳ ನೀಡುತ್ತಿದ್ದಾರೆ. ಬೆಳೆಗಳು ಒಣಗಿ ಹೋಗಿದ್ದು ಸಾಲ ಕಟ್ಟಲು ವಿನಾಯಿತಿ ಕೊಡಿಸಬೇಕು ಎಂದು ಒತ್ತಾಯಿಸಿದರು.
    ರಾಜ್ಯದಲ್ಲಿ ಅಲ್ಪ ಸಂಖ್ಯಾತ ಕಾಲೋನಿಗಳ ಅಭಿವೃದ್ಧಿಗೆ 1000 ಕೋಟಿ ನೀಡಿದ್ದಾರೆ. ರೈತರ ಸಮಸ್ಯೆಗಳು ಅರ್ಥವಾಗಲಿಲ್ಲವೇ ಈ ಸರ್ಕಾರಕ್ಕೆ. ನಾನು ಕಂದಾಯ ಸಚಿವ ಆಗಿದ್ದಾಗ ಬರ ಬಂದಾಗ ತಕ್ಷಣ 54 ಕೋಟಿ ಬಿಡುಗಡೆ ಮಾಡಿ ರೈತ ಸಮಸ್ಯೆಗಳಿಗೆ ಸ್ಪಂದಿಸಲಾಗಿತ್ತು. ಯಾಕೆ ನಿಮಗೆ ಅಧಿಕಾರವಿಲ್ಲವೇ, ಮೋದಿ ವಿರುದ್ಧ ಯಾಕೆ ಮಾತನಾಡ್ತಿರ ಎಂದು ಕಿಡಿಕಾರಿದರು.
    ಜನರ ಸಮಸ್ಯೆ ಬಿಟ್ಟು ಬೋರ್ಡ್​ ಗಿರಿ ಮಾಡ್ತಿದ್ದಾರೆ. ಸೋಮಾರಿ ಮುಖ್ಯಮಂತ್ರಿಯಾಗಿ ಕುಳಿತಿರುವುದನ್ನು ನೋಡಿದ್ದೇನೆ. ರಸ್ತೆ ಡಂಬಾರು ಹಾಕಿಲ್ಲ, ಸಂತ್ರಸ್ಥರಿಗೆ ಮನೆ ಕಟ್ಟಿಲ್ಲ
    ಬೊಮ್ಮಾಯಿ ಸರ್ಪಲೇಸ್​ ಬಂಜೆಟ್​ ಮಾಡಿದರು, ಆದರೆ ಹೆಲ್ಪ್​ ಲೆಸ್​ ಬಂಜೆಟ್​ ಮಾಡಲು ಸಿದ್ದರಾಮಯ್ಯ ಮುಂದಾಗಿದ್ದಾರೆ ಎಂದು ಆರೋಪಿಸಿದರು.
    ಏಳು ತಾಸು ಮೂರು ಫೇಸ್​ ಕರೆಂಟ್​ ಕೊಡುತ್ತೇವೆ ಎಂದು ಸಿದ್ದರಾಮಯ್ಯ ಪ್ರಕಟಿಸಿದ್ದರು. ಆದರೆ ಮೂರು ತಾಸು ಸಹ ನೀಡುತ್ತಿಲ್ಲ. ನಿರಂತರವಾಗಿ ವಿದ್ಯುತ್​ ಕಡಿತ ಮಾಡುತ್ತಿದ್ದು, ಅದನ್ನು ರಿಪೇರಿ ಕೆಲಸ ಎಂದು ತೇಪೆ ಹಚ್ಚಲಾಗುತ್ತಿದೆ. ಅಭಿವೃದ್ಧಿ ಕಾರ್ಯಕ್ರಮಗಳಿಗೆ ಹಣ ಕೊಡದಿದ್ದರೂ ಕಾಂಗ್ರೆಸ್​ ಕಾರ್ಯಕರ್ತರಿಗೆ ಕ್ಯಾಬಿನೆಟ್​ ದರ್ಜೆಯ ಸ್ಥಾನಮಾನ ನೀಡಲಾಗುತ್ತಿದೆ. ಕಾರ್ಯಕರ್ತರಿಗೆ ಬಿರಿಯಾನಿ ತಿನ್ನಲು ಮಾತ್ರ ಇವರಿಗೆ ಹಣವಿದೆ. ರೈತರಿಗೆ ಹಣ ಕೊಡಿ, ಇಲ್ಲ ಕುರ್ಚಿ ಖಾಲಿ ಮಾಡಿ ಎಂದು ಒತ್ತಾಯಿಸಿದರು.
    ಕಾಂಗ್ರೆಸ್​ ಸರ್ಕಾರ ಪೂರ್ಣ ಪ್ರಮಾಣದಲ್ಲಿ ಅಧಿಕಾರ ನಡೆಸುವುದಿಲ್ಲ, ಇದರಿಂದ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಎಟಿಎಂನಂತೆ ಲೂಟಿ ಮಾಡುತ್ತಿದೆ. ಅಧಿಕಾರಿಗಳು ಲಂಚ ತಿನ್ನುತ್ತಿದ್ದಾರೆ. ಸಮಾಜದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ, ಪೊಲೀಸರೆ ಮುಂದೆ ನಿಂತು ಹಣ ಪಿಕುವ ಕೆಲಸಗಳನ್ನು ಮಾಡಿಸುತ್ತಿದ್ದಾರೆ. ಬಿಜೆಪಿಗೆ ಲೋಕಸಭಾ ಚುನಾವಣೆಯಲ್ಲಿ ಅಧಿಕಾರ ಕೊಟ್ಟರೆ ಇಂಥವರನ್ನು ಐದು ನಿಮಿಷದಲ್ಲಿ ಎತ್ತಂಗಡಿ ಮಾಡುತ್ತೇವೆ ಎಂದರು.


    ಕಾಂಗ್ರೆಸನ್ನು ಅಧಿಕಾರದಿಂದ ಇಳಿಸುವುದು ನಮ್ಮ ಗ್ಯಾರೆಂಟಿ.

    ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ಕಾಂಗ್ರೆಸ್​ ಸರ್ಕಾರದ್ದು 5 ಗ್ಯಾರೆಂಟಿಗಳು ಆದರೆ, ನಮದು ಒಂದೇ ಗ್ಯಾರೆಂಟಿ, ಅದು ಲೋಕಸಭಾ ಚುನಾವಣೆಯ ನಂತರ ಕಾಂಗ್ರೆಸ್​ ಸರ್ಕಾರವನ್ನು ಅಧಿಕಾರದಿಂದ ತೊಗಿಸುವುದು ಎಂದು ಹೇಳಿದರು.
    ರಾಜ್ಯದಲ್ಲಿ ಬರಗಾಲ ಘೋಷಣೆಯಾಗಿ 7 ತಿಂಗಳು ಕಳೆದಿದೆ, ನಯ ಪೈಸೆಯು ಮಂಜೂರು ಮಾಡಿಲ್ಲ. ಮಾತು ಬಂದರೆ ಕೇಂದ್ರದ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ಕೇಂದ್ರ ಸರ್ಕಾರ 600 ಕೋಟಿ ಬಿಡುಗಡೆ ಮಾಡಿದೆ, ಡಿಸಿಗಳ ಪಿಡಿ ಖಾತೆ ತೆಗೆಸಲಿ ಗೊತ್ತಾಗುತ್ತದೆ. ರೈತರಿಗೆ ಮೋಸ ಮಾಡುವ ದುಷ್ಟ ಸರ್ಕಾರ ಅಧಿಕಾರದಲ್ಲಿ ಇದೆ ಎಂದು ಆರೋಪಿಸಿದರು.


    ಪ್ರತಿ ನಾಗರೀಕನ ಮೇಲೆ 1 ಲಕ್ಷ ರೂ ಸಾಲ
    ಎಷ್ಟು ದಿನ ಟಿಪ್ಪುನ ಒಲೈಸ್ತಿರ, ಅನ್ನ ಬೆಳೆಯುವ ರೈತರನ ಬಗ್ಗೆ ಕಾಳಜಿಯಿಲ್ಲವೆ. ಚುನಾವಣೆ ಪೂರ್ವದಲ್ಲಿ ಕೊಟ್ಟ ಭರವಸೆಯಂತೆ 10 ಕೆಜಿ ಅಕ್ಕಿ ನೀಡುತ್ತಿಲ್ಲ. ಸದಸ್ಯ ಈಗ ಕೊಡುತ್ತಿರುವುದು ಐದು ಕೆಜಿ ಕೇಂದ್ರ ಸರ್ಕಾರದ ಪಾಲು, ಒಂದು ಕುಟುಂಬಕ್ಕೆ 200 ಯೂನಿಟ್​ ಕೊಟ್ಟಿರುವ ದಾಖಲೆ ತೋರಿಸಿ. ಮೂರು ಬಾರಿ ಕರೆಂಟ್​ ದರ ಹೆಚ್ಚಿಗೆ ಮಾಡಿದ್ದೆ ಕಾಂಗ್ರೆಸ್​ ಸಾಧನೆ ಕಿಡಿಕಾರಿದರು.
    ರಾಜ್ಯದಲ್ಲಿ ಒಂದು ಕೈಗೆ ಕೊಟ್ಟಂತೆ ಕೊಟ್ಟು ಮತ್ತೊಂದು ಕೈಯಿಂದ ಕಿತ್ತುಕೊಳ್ಳುತ್ತಿದ್ದಾರೆ. ಸರ್ಕಾರ ದಿವಾಳಿಯಾಗಿದೆ. ರಾಜ್ಯವನ್ನು ಅದೋಗತಿಗೆ ತೆಗೆದುಕೊಂಡು ಹೋಗಿದ್ದಾರೆ. ಪ್ರತಿಯೊಬ್ಬ ನಾಗರೀಕನ ಮೇಲೆ ಕನಿಷ್ಟ 1 ಲಕ್ಷ ಸಾಲ ಮಾಡಿದೆ. ಪೊಲೀಸ್​, ಇಲಾಖಾಧಿಕಾರಿಗಳ ವರ್ಗಾವಣೆಯಲ್ಲಿ ಹಗರಣ ನಡೆಯುತ್ತಿದ್ದಾರೆ ಎಂದರು.
    ಕೆಸಿ ವ್ಯಾಲಿ ಯೋಜನೆ ಮೂಲಕ ಕೊಳಚೆ ನೀರನ್ನು ಹರಿಸುತ್ತಿದ್ದಾರೆ. ಬೆಳೆಗಳು ಬೆಳೆಯುತ್ತಿಲ್ಲ. ಒಕ್ಕಲು ತನ ನಶಿಸುತ್ತಿದೆ. ರೈತರ ಸಂಕಷ್ಟಕ್ಕೆ ಕಾರಣರಾಗಿರುವ ಕಾಂಗ್ರೆಸ್​ ಸರ್ಕಾರಕ್ಕೆ ರೈತರ ಶಾಪ ತಟ್ಟುತ್ತದೆ ಎಂದು ಆಕ್ರೋಶವ್ಯಕ್ತಪಡಿಸಿದರು.


    ಗ್ಯಾರೆಂಟಿಗಳ ಪ್ರಯೋಜನೆ ಜನತೆಗೆ ತಲುಪುತ್ತಿಲ್ಲ
    ಸಂಸದ ಎಸ್​.ಮುನಿಸ್ವಾಮಿ ಮಾತನಾಡಿ, ಐದು ಗ್ಯಾರೆಂಟಿಗಳ ಪ್ರಯೋಜನ ಯಾರೋಬ್ಬರಿಗೂ ಸಿಗುತ್ತಿಲ್ಲ, ಅಯೋಧ್ಯೆ ರಾಮ ಪ್ರತಿಷ್ಠಪನೆ ದಿನ ಬ್ಯಾನರ್​ ಕಟ್ಟಲು ಅನುಮತಿ ಕಡ್ಡಾಯ ಮಾಡಿದಿರ, ಪಾಕಿಸ್ತಾನ್​ ಬಾವುಟ ಕಟ್ಟುತ್ತಿರುವುದು ಸಿದ್ದರಾಮಯ್ಯನವರ ಕಣ್ಣಿಗೆ ಕಾಣಿಸುತ್ತಿಲ್ವೆ ಎಂದು ಪ್ರಶ್ನಿಸಿದರು.
    ಸುಳ್ಳು ಹೇಳಿ ಜನರನ್ನು ಯಾಮಾರಿಸುತ್ತಿರುವ ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಂಜೂರು ಮಾಡಿರುವ ಕಾಮಗಾರಿಗಳಿಗೆ ಚಾಲನೆ ಮಾಡುತ್ತಿದ್ದಾರೆ. ಕಾಂಗ್ರೆಸ್​ನವರ ಜತೆ ಕೈ ಜೋಡಿಸುತ್ತಿರುವವರೆಲ್ಲ ದಿಕ್ಕಾಪಾಲಾಗುತ್ತಿದ್ದಾರೆ. ನಕಲಿ ಗಾಂಧಿಗಳ ಮುಖವಾಡ ಕಳಚುತ್ತಿದೆ, ಇಟಲಿ ಮೇಡಂ ದೇಶದಿಂದ ಮತ್ತೆ ಇಟಲಿಗೆ ವಾಪಸ್​ ಹೋಗುವ ದಿನಗಳು ಸಮೀಪಿಸುತ್ತಿವೆ ಎಂದರು.
    ಪ್ರತಿಭಟನೆಯಲ್ಲಿ ಮಾಜಿ ಸಚಿವ ಆರ್​.ವರ್ತೂರು ಪ್ರಕಾಶ್​, ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಎನ್​.ವೇಣುಗೋಪಾಲ್​, ಮಾಜಿ ಶಾಸಕರಾದ ಕೆ.ಎಸ್​.ಮಂಜುನಾಥ್​ಗೌಡ, ರಾಜಣ್ಣ, ವೈ.ಸಪಂಗಿ, ಮುಖಂಡರಾದ ಸಿಕಲ್​ ರಾಮಚಂದ್ರೇಗೌಡ, ಹನುಮಂತಪ್ಪ ಮತಿತರರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts