More

    ಗದಗ: ಶ್ರೀಕಾಂತ ಪೂಜಾರಿ ಬಿಡುಗಡೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ

    ವಿಜಯವಾಣಿ ಸುದ್ದಿಜಾಲ ಗದಗ
    ಹಿಂದೂ ಕಾರ್ಯಕರ್ತ ಶ್ರೀಕಾಂತ ಪೂಜಾರಿ ಬಂಧನ ಖಂಡಿಸಿ ಜಿಲ್ಲಾಡಳಿತ ಕಚೇರಿ ಎದುರು ಬಿಜೆಪಿ ಕಾರ್ಯಕರ್ತರು, ನಗರಸಭೆ ಸದಸ್ಯರು ಬುಧವಾರ ಪ್ರತಿಭಟನೆ ನಡೆಸಿದರು. ಪ್ರತಿ ಭಟನೆ ವೇಳೆ ಪೊಲೀಸ್​ ಸಿಬ್ಬಂದಿ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ವಾಗ್ವಾದ, ತಳ್ಳಾಟ ಜರುಗಿತು. ಜಿಲ್ಲಾಧಿಕಾರಿ ಕಚೇರಿ ಮುಖ್ಯ ಗೇಟ್​ ತಳ್ಳಿ ಒಳ ನುಗ್ಗಲು ಯತ್ನಿಸಿದ ಕಾರ್ಯಕರ್ತರು, ಕಾಂಗ್ರೆಸ್​ ಸರ್ಕಾರ ವಿರುದ್ಧ ಘೋಷಣೆ ಕೂಗಿದರು. ಒಳನುಗ್ಗಲು ಯತ್ನಿಸಿದ ಕಾರ್ಯಕರ್ತರನ್ನು ಗೇಟ್​ ಹೊರಗಡೆಯೇ ತಡೆದ ಪೊಲೀಸರು ನಡೆಯುತ್ತಿದ್ದ ಹೈಡ್ರಾಮಾ ನಿಯಂತ್ರಿಸಲು ಯಶಸ್ವಿ ಆದರು. ಶ್ರೀಕಾಂತ ಪೂಜಾರಿ ಬಿಡುಗಡೆಗೆ ಆಗ್ರಹಿಸಿ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
    ಈ ವೇಳೆ ಮಾತನಾಡಿದ ನಗರಸಭೆ ಅಧ್ಯೆ ಉಷಾ ದಾಸರ, ಶ್ರೀಕಾಂತ ಪೂಜಾರಿ ಒಬ್ಬ ಅಪ್ಪಟ ಹಿಂದು ಕಾರ್ಯಕರ್ತ. ರಾಮಭಕ್ತರೂ ಆಗಿದ್ದಾರೆ. ಅವರನ್ನು ಉದ್ದೇಶ ಪೂರಕ ಬಂಧಿಸಲಾಗಿದೆ. ಕಾಂಗ್ರೆಸ್​ ಸರ್ಕಾರ ತಮ್ಮ ಅಧಿಕಾರವನ್ನು ರ್ದುಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದರು.
    ನಗರಸಭೆ ಸ್ಥಾಯಿ ಸಮಿತಿ ಅಧ್ಯೆ ಅನಿಲ ಅಬ್ಬಿಗೇರಿ ಮಾತನಾಡಿ, ಕಾಂಗ್ರೆಸ್​ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಪೊಲೀಸರ ಮೇಲೆ ಒತ್ತಡ ಹಾಕಿ ಹಿಂದು ಕಾರ್ಯಕರ್ತರ ಬಂಧನ ಮಾಡಲಾಗುತ್ತಿದೆ. ಆಧಾರ ವಿಲ್ಲದೇ ಶಿವಮೊಗ್ಗ ಹಾಗು ಹುಬ್ಬಳ್ಳಿ ಕಾರ್ಯಕರ್ತರ ಬಂಧನವಾಗಿದೆ. ರಾಮ ಮಂದಿರದ ಉದ್ಘಾಟನೆ ಸಮೀಪಿಸುತ್ತಿದ್ದಂತೆ ಹಿಂದು ಕಾರ್ಯಕರ್ತರನ್ನು ಗುರಿಯಾಗಿಸಿ ಹಿಂದು ವಿರೋಧಿ ನೀತಿಯನ್ನು ಈ ಸರ್ಕಾರ ಅನುಸರಿಸುತ್ತಿದೆ ಎಂದು ಆರೋಪಿಸಿದರು.
    ಬಿಜೆಪಿ ಮುಖಂಡ ಶ್ರೀಪತಿ ಉಡುಪಿ ಮಾತನಾಡಿ, ಆಧಾರ ರಹಿತವಾಗಿ ಕಾರ್ಯಕರ್ತರ ಬಂಧನ ಮಾಡುತ್ತಿರುವ ವಿಷಯವನ್ನು ಗಂಭೀರವಾಗಿ ಕೂಡಲೇ ಕಾರ್ಯಕರ್ತರನ್ನು ಬಿಡುಗಡೆಗೊಳಿಸಲು ಸರ್ಕಾರಕ್ಕೆ ಆದೇಶಿಸಬೇಕೆಂದು ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಮಾಡಿದರು.
    ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಅಧ್ಯ ಮುತ್ತಣ್ಣ ಲಿಂಗನಗೌಡ್ರ, ಶ್ರೀಪತಿ ಉಡುಪಿ, ತೊಟಪ್ಪ ಕುಡರಗಿ, ರವಿ ದಂಡಿನ, ಸಿದ್ದು ಪಲ್ಲೇದ, ಉಷಾ ದಾಸರ, ಅಶೋಕ ನವಲಗುಂದ, ಅಶೋಕ ಸಂಕಣ್ಣವರ, ನಿಂಗಪ್ಪ ಮಣ್ಣೂರ, ಭದ್ರೇಶ ಕುಸ್ಲಾಪೂರ, ರಾವೇಂದ್ರ ಯಳವತ್ತಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts