More

    ಬಿಜೆಪಿಯಿಂದ ರೈತ ಪರ ಯೋಜನೆ ಜಾರಿ, ಸಚಿವ ಬಿ.ಸಿ.ಪಾಟೀಲ್ ಹೇಳಿಕೆ

    ಯಲಬುರ್ಗಾ: ಕರೊನಾ ಮಹಾಮಾರಿ ನಡುವೆಯೂ ಬಿಎಸ್‌ವೈ ನೇತೃತ್ವದ ರಾಜ್ಯ ಬಿಜೆಪಿ ಸರ್ಕಾರ ರೈತಪರ ಯೋಜನೆಗಳನ್ನು ಜಾರಿಗೆ ತಂದು ಹಿತ ಕಾಪಾಡುತ್ತಿದೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿಪಾಟೀಲ್ ಹೇಳಿದರು.

    ಪಟ್ಟಣದ ಬಯಲು ರಂಗಮಂದಿರಲ್ಲಿ ಶುಕ್ರವಾರ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ವಿವಿಧ ವಾರ್ಡ್‌ಗಳ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

    ಮೆಕ್ಕೆಜೋಳ ಬೆಳೆದ 10 ಲಕ್ಷ ರೈತರಿಗೆ ಸರ್ಕಾರ 500 ಕೋಟಿ ರೂ. ಬಿಡುಗಡೆ ಮಾಡಿದೆ.ರಾಜ್ಯದಲ್ಲಿಯೇ ಯಲಬುರ್ಗಾಕ್ಕೆ ಹೆಚ್ಚು ಬೆಳೆ ವಿಮೆ ಬಿಡುಗಡೆಯಾಗಿದೆ. ತೋಟಗಾರಿಕೆ ಬೆಳೆಗಾರರಿಗೆ 165 ಕೋಟಿ ರೂ. ನೀಡಿ ರೈತರ ಹಿತ ಕಾಪಾಡಿದೆ. ಇದರ ನಡುವೆಯೂ ಉತ್ತಮ ಮಳೆಯಿಂದ ಶೇ.100 ರಷ್ಟು ಬಿತ್ತನೆಯಾಗಿದೆ. ಹಿರಿಯ ಶಾಸಕ ಹಾಲಪ್ಪ ಆಚಾರ್ ಕ್ಷೇತ್ರದ ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ ಎಂದರು.

    ಶಾಸಕ ಹಾಲಪ್ಪ ಆಚಾರ್ ಮಾತನಾಡಿ, ಪಟ್ಟಣದ ಅಭಿವೃದ್ಧಿಗಾಗಿ ಅಂದಾಜು 4.91 ಕೋಟಿ ರೂ.ಗಳಲ್ಲಿ ಚಾಲನೆ ನೀಡಲಾಗಿದೆ. ಕೆಲಸವನ್ನು ಮಾಡಿ ತೋರಿಸುತ್ತೇವೆ ಹೊರತು ಕೇವಲ ಮಾತಿನಿಂದಲ್ಲ. ಕೇವಲ ಪ್ರತಿಷ್ಠೆಗಾಗಿ ಮಾತಾಡಿದರೆ ಜನ ಒಪ್ಪುವುದಿಲ್ಲ ಎಂದರು. ನಗರಾಭಿವೃದ್ಧಿ ಇಲಾಖೆ ಅಧಿಕಾರಿ ಸಿದ್ದರಾಮೇಶ್ವರ ಪ್ರಾಸ್ತಾವಿಕ ಮಾತನಾಡಿದರು.

    ಸಾಲ ಮಂಜೂರಾತಿ ಪತ್ರ ವಿತರಣೆ
    ಪಪಂ ಆಡಳಿತ ಮಂಡಳಿಯಿಂದ ಶಾಸಕರ ನೇತೃತ್ವದಲ್ಲಿ ಕೃಷಿ ಸಚಿವ ಬಿ.ಸಿ. ಪಾಟೀಲ್‌ರನ್ನು ಸನ್ಮಾನಿಸಲಾಯಿತು. ರಾಜ್ಯ ಸರ್ಕಾರದ ಕಿರುಸಾಲ ಯೋಜನೆಯಡಿ ಫಲಾನುಭವಿಗಳಿಗೆ ಸಚಿವ ಬಿ.ಸಿ.ಪಾಟೀಲ್ 10 ಸಾವಿರ ರೂ. ಸಾಲ ಮುಂಜೂರಾತಿ ಪತ್ರ ವಿತರಿಸಿದರು. ಡಿಸಿ ಎಸ್.ವಿಕಾಸ್ ಕಿಶೋರ್, ಜಿಪಂ ಸಿಇಒ ರಘುನಂದಮೂರ್ತಿ, ತಾಪಂ ಅಧ್ಯಕ್ಷೆ ಲಕ್ಷ್ಮೀ ದ್ಯಾಮಪ್ಪ ಗೌಡ್ರ, ಉಪಾಧ್ಯಕ್ಷೆ ಕವಿತಾ ಬಸವರಾಜ ಉಳ್ಳಾಗಡ್ಡಿ, ಜಿಪಂ ಸದಸ್ಯೆ ಗಂಗಮ್ಮ ಈಶಣ್ಣ ಗುಳಗಣ್ಣವರ್, ಪಪಂ ಸಿಒ ಮಹೇಶ ನಿಡಶೇಸಿ, ಪ್ರಮುಖರಾದ ಸಿ.ಎಚ್.ಪಾಟೀಲ್, ವೀರಣ್ಣ ಹುಬ್ಬಳ್ಳಿ, ರತನ್ ದೇಸಾಯಿ, ಬಿಜೆಪಿ ತಾಲೂಕು ಅಧ್ಯಕ್ಷ ವಿಶ್ವನಾಥ ಮರಿಬಸಪ್ಪನವರ್, ಕಳಕನಗೌಡ ಪಾಟೀಲ್, ಕಳಕಪ್ಪ ಕಂಬಳಿ, ವಸಂತ ಭಾವಿಮನಿ, ಸಿದ್ರಾಮೇಶ ಬೆಲೇರಿ, ತಹಸೀಲ್ದಾರ್ ಶ್ರೀಶೈಲ ತಳವಾರ್, ಸಿಪಿಐ ಎಂ.ನಾಗರಡ್ಡಿ ಹಾಗೂ ಪಪಂ ಸದಸ್ಯರು ಇನ್ನಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts