More

    ಗ್ರಾಪಂ ಚುನಾವಣೆ ಗೆಲುವಿಗೆ ಬಿಜೆಪಿ ಸಿದ್ಧತೆ ; ಚುನಾವಣೆಗೆ ರಣಕಹಳೆ ಮೊಳಗಿಸಿ ಕಾರ್ಯಕರ್ತರಲ್ಲಿ ಉತ್ಸಾಹ

    ತಿಪಟೂರು: ಗ್ರಾಮಪಂಚಾಯ್ತಿ ಚುನಾವಣೆಗೆ ಬಿಜೆಪಿ ಸಿದ್ಧತೆ ಆರಂಭಿಸಿದ್ದು, ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಅಖಾಡಕ್ಕಿಳಿದು ಚುನಾವಣೆಗೆ ರಣಕಹಳೆ ಮೊಳಗಿಸಿ ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿದರು.

    ನಗರದ ಖಾಸಗಿ ಕಲ್ಯಾಣ ಮಂಟಪದಲ್ಲಿ ಗುರುವಾರ ಬಿಜೆಪಿ ಆಯೋಜಿಸಿದ್ದ ‘ಕಾರ್ಯಕರ್ತರ ಗ್ರಾಮ ಸ್ವರಾಜ್ಯ ಸವಾವೇಶ’ಉದ್ಘಾಟಿಸಿ ವಾತನಾಡಿದರು. ವಿಧಾನಸಭೆ, ಸಂಸತ್ ಚುನಾವಣೆಗಿಂತ ಹೆಚ್ಚು ಮಹತ್ವವನ್ನು ಗ್ರಾಪಂ ಚುನಾವಣೆಗೂ ನೀಡಲಾಗಿದ್ದು, ರಾಜ್ಯದ 5808 ಗ್ರಾಪಂಗಳಲ್ಲಿ ಶೇ.80ನ್ನು ತಮ್ಮ ಕಾರ್ಯಕರ್ತರು ಮುನ್ನಡೆಸುವಂತಾದರೆ ಗ್ರಾಮಗಳಲ್ಲಿಯೂ ಅಭಿವೃದ್ಧಿ ಸಾಧ್ಯ. ಕಾರ್ಯಕರ್ತರ ಗೆಲುವಿಗೆ ಎಲ್ಲ ಮುಖಂಡರು ಶ್ರಮಿಸಲಿದ್ದಾರೆ ಎಂದರು.

    ರಾಜ್ಯದಲ್ಲಿ 6 ತಂಡ ರಚಿಸಿ, ಪ್ರತಿ ಜಿಲ್ಲೆಯಲ್ಲಿ ಎರಡು ಕಡೆ ಕಾರ್ಯಕರ್ತರ ಸವಾವೇಶ ವಾಡುವ ಮೂಲಕ ಪಕ್ಷದ ನಾಯಕರು, ಕಾರ್ಯಕರ್ತರನ್ನು ಗ್ರಾಪಂ ಚುನಾವಣೆಯಲ್ಲಿ ಗೆಲ್ಲಿಸಲು ಶ್ರಮಿಸಲಾಗುವುದು. ಯಾವುದೇ ಗೊಂದಲವಿಲ್ಲದೇ ಒಮ್ಮತದ ಅಭ್ಯರ್ಥಿ ಆಯ್ಕೆ ಮತ್ತು ಗೆಲುವಿನ ತಂತ್ರ ರೂಪಿಸುವುದು ಸವಾವೇಶದ ಉದ್ದೇಶ, ಕಾರ್ಯಕರ್ತರ ಸಂಟನಾ ಶಕ್ತಿ ಈ ಚುನಾವಣೆಯಲ್ಲೂ ಮುಂದುವರಿಯಲಿದೆ ಎಂದರು.

    ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಮಾತನಾಡಿ, ಸರ್ಕಾರ ಉಳಿಸಿ, ನಡೆಸುವುದು ಸವಾಲಿನ ಕೆಲಸ. ಗುರುತಿಸಿಕೊಂಡರೂ, ಗೌರವಿಸಿಕೊಳ್ಳಲು ಹೆಚ್ಚಿನ ಶ್ರಮ ಅಗತ್ಯ. ಜಾತಿ, ಕೇರಿ ಬಿಟ್ಟು ಒಂದು ಪಕ್ಷ ಎಂದು ಗುರುತಿಸಿ ಗ್ರಾಪಂ ಗೆಲ್ಲಿಸಿ, ಗೆಲ್ಲುವವರೆಗೂ ಉದಾಸೀನಕ್ಕೆ ಒಳಗಾಗಬೇಡಿ ಎಂದರು. ಓರ್ವ ಶಾಸಕನಿಗಿಂತಲೂ ಹೆಚ್ಚಿನ ಶಕ್ತಿ ಗ್ರಾಮ ಪಂಚಾಯಿತಿಗಿದೆ, ಇಲ್ಲಿ ಅನುದಾನವೂ ಅಧಿಕ, ಆದರೆ ಯಾವ ಕಾರಣಕ್ಕೂ ಹೊಂದಾಣಿಕೆ ಖಂಡಿತ ಬೇಡ. ಪಕ್ಷದ ನೆಲೆಗಟ್ಟಿನಲ್ಲಿ ಆಕಾಂಕ್ಷಿಗಳು ಹೆಚ್ಚಾಗುವುದು ಸಹಜ. ಗೆಲುವಿನ ಅಪೇಕ್ಷೆ, ನಿರೀಕ್ಷೆಯಲ್ಲಿ ಚುನಾವಣೆಯಲ್ಲಿ ಗೆಲುವು ನಮ್ಮ ಶಕ್ತಿಯ ಪ್ರತಿಬಿಂಬವಾಗಬೇಕು ಎಂದರು. ಓವರ್ ಹೆಡ್ ಟ್ಯಾಂಕ್ ಇರುವ ಎಲ್ಲ ಹಳ್ಳಿಗಳಿಗೂ ಕುಡಿಯುವ ನೀರಿನ ಸಮರ್ಪಕ ಯೋಜನೆ ಮತ್ತು ರಾಜ್ಯದ ಎಲ್ಲ ಕೆರೆಗಳಿಗೂ ನೀರು ಹರಿಸಿ ಸಮರ್ಪಕ ಕುಡಿಯುವ ನೀರು ಸರಬರಾಜು ವಾಡುವ ಮೂಲಕ ಅಂತರ್ಜಲ ಮಟ್ಟ ಹೆಚ್ಚಿಸುವ ಯೋಜನೆಗೆ ಆದ್ಯತೆ ನೀಡಲಾಗಿದೆ ಎಂದರು.

    ಶಾಸಕ ಬಿ.ಸಿ.ನಾಗೇಶ್ ಮಾತನಾಡಿ, ಭಾರತವಾತೆಯನ್ನು ಮತ್ತೊಮ್ಮೆ ಉಚ್ಚ್ರಾಯ ಸ್ಥಿತಿಗೆ ಕೊಂಡೊಯ್ಯುವ ಪ್ರಯತ್ನ, ಗ್ರಾಮ ರಾಜ್ಯದ ಕಲ್ಪನೆ ಸಾಕಾರಕ್ಕೆ ಎಲ್ಲರೂ ತೊಡಗಿಸಿಕೊಳ್ಳಬೇಕು. ಅಂತ್ಯೋದಯ ನಮ್ಮ ಪ್ರಮುಖ ಕಾರ್ಯಕ್ರಮ. ಇದರ ಸಾಕಾರಕ್ಕೆ ಗ್ರಾಮ ಪಂಚಾಯಿತಿ ವ್ಯವಸ್ಥೆ ಸೃಷ್ಟಿಯಾಗಬೇಕು. ಗ್ರಾಪಂ ಶಕ್ತಿಶಾಲಿಯಾದಾಗ ರಾಜ್ಯ, ದೇಶ ಸದೃಡ ಸಂಪನ್ನವಾಗುತ್ತೆ ಎಂದರು.
    ಜಿಲ್ಲಾಧ್ಯಕ್ಷ ಬಿ.ಸುರೇಶ್‌ಗೌಡ, ಸಂಸದ ಜಿ.ಎಸ್.ಬಸವರಾಜು, ಎ.ನಾರಾಯಣಸ್ವಾಮಿ, ಶಾಸಕ ಜಿ.ಬಿ.ಜ್ಯೋತಿಗಣೇಶ್, ಪಕ್ಷದ ಮುಖಂಡರಾದ ಎಂ.ಬಿ.ನಂದೀಶ್, ಕೆ.ಎಸ್.ಕಿರಣ್‌ಕುಮಾರ್, ವಿನಯ್ ಬಿದರೆ ಇದ್ದರು.

    ಸಿದ್ದರಾಮಯ್ಯ ವಿರುದ್ಧ ಈಶ್ವರಪ್ಪ ಟೀಕೆ: ಸರ್ಕಾರ ರಚನೆಗೆ ಕಾರಣರಾದ ಅನೇಕರು ಮಂತ್ರಿ ಪದವಿ ಕೇಳುವುದರಲ್ಲಿ ತಪ್ಪಿಲ್ಲ, ಹಾಗೆಯೇ ಪಕ್ಷದಿಂದ ಗೆದ್ದವರು ಆಸೆ ಪಡುವುದೂ ತಪ್ಪಲ್ಲ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಪ್ರತಿಕ್ರಿಯಿಸಿದರು. ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಯಾರು ಸಚಿವರಾಗಬೇಕು ಎಂಬುದನ್ನು ಸಿಎಂ ಬಿ.ಎಸ್.ಯಡಿಯೂರಪ್ಪ ಹಾಗೂ ಪಕ್ಷದ ಹೈಕಮಾಂಡ್ ನಿರ್ಧರಿಸಲಿದೆ, ಯೋಗೇಶ್ವರ್‌ಗೆ ಮಂತ್ರಿ ಸ್ಥಾನ ನೀಡುವ ಬಗ್ಗೆ ನಾನು ಪ್ರತಿಕ್ರಿಯಿಸುವುದಿಲ್ಲ ಎಂದರು. ಗೋಹತ್ಯೆ ನಿಷೇಧ 25 ವರ್ಷ ಹಳೆಯ ತೀರ್ಮಾನವಾಗಿದ್ದು, ಈಗ ಜಾರಿಗೆ ತರುವುದಷ್ಟೇ ಬಾಕಿ, ಹೆಣ್ಣಿಗೆ ಭಾರತೀಯ ಸಂಸ್ಕ್ಪ್ರತಿಯಲ್ಲಿ ತಾಯಿಯ ಸ್ಥಾನವಿದೆ. ಸಿದ್ದರಾಮಯ್ಯ ಹೇಳಿದಂತೆ ಅವರ ತಾಯಿಗೆ ವಯಸ್ಸಾಯಿತು ಎಂದು ಅವರನ್ನು ಆರ್‌ಎಸ್‌ಎಸ್ ಅಥವಾ ಬಿಜೆಪಿ ಕಚೇರಿ ಮುಂದೆ ತಂದು ಬಿಡಿ ಎನ್ನಲಾಗುತ್ತದೆಯೇ ಎಂದು ಪ್ರಶ್ನಿಸಿದರು. ಗೋಹತ್ಯೆ ವಿಚಾರದಲ್ಲಿ ಮುಸಲ್ಮಾನರನ್ನು ಓಲೈಸುವ ಬದಲು, ಚುನಾವಣಾ ಪ್ರಣಾಳಿಕೆಯಲ್ಲಿ ಗೋಹತ್ಯೆ ನಿಷೇಧ ತೆರವುಗೊಳಿಸುತ್ತೇವೆ ಎಂದು ಸೇರಿಸಿ, ಗ್ರಾಪಂ ಚುನಾವಣೆಗಳಲ್ಲಿ ೋಷಿಸಲಾಗಿದ್ದು ಈಗ ಗೆದ್ದು ಬರಲಿ. ಅವರಿಗೆ ಯಾವಾಗ, ಯಾವ ರೀತಿ ಹೇಳಿಕೆ ಕೊಡುತ್ತೇನೆ ಎಂಬ ಕಲ್ಪನೆಯೇ ಇರಲ್ಲ ಎಂದು ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದರು.

    ಮಾಜಿ ಸಿಎಂ ಸಿದ್ದರಾಮಯ್ಯ ಗೋವು ಶಾಪದಿಂದಲೇ ಸರ್ಕಾರ ಹಾಗೂ ಚಾಮುಂಡೆಶ್ವರಿ ವಿಧಾನಸಭಾ ಕ್ಷೇತ್ರ ಎರಡನ್ನೂ ಏಕಕಾಲದಲ್ಲಿ ಕಳೆದುಕೊಂಡರು. ಅವರಿಗೆ ಆರ್‌ಎಸ್‌ಎಸ್ ಪದ ಬಳಸುವ ಯೋಗ್ಯತೆಯೂ ಇಲ್ಲ. ಕುರುಬ ಜನಾಂಗಕ್ಕೆ ಎಸ್ಟಿ ಮೀಸಲು ಪಡೆಯುವ ಹೋರಾಟ ಕಾಗಿನೆಲೆ ಸ್ವಾಮಿಗಳ ನೇತೃತ್ವದಲ್ಲಿ ನಡೆದಿದೆ. ನಾನೆಂದಿಗೂ ಕುರುಬರ ನಾಯಕ ಎಂದು ಹೇಳಿಕೊಂಡಿಲ್ಲ. ನಾನೊಬ್ಬ ಹಿಂದುತ್ವದ ಪ್ರತಿಪಾದಕ. ಎಲ್ಲದಕ್ಕೂ ನಾನು ಲೀಡರ್ ಎಂದು ಹೇಳಿಕೊಳ್ಳುವುದು ಸಿದ್ದರಾಮಯ್ಯ.
    ಕೆ.ಎಸ್.ಈಶ್ವರಪ್ಪ ಗ್ರಾಮೀಣಾಭಿವೃದ್ಧಿ ಸಚಿವ

    ಪ್ರಧಾನ ಮಂತ್ರಿ ಗ್ರಾಮ್ ಸ್ವರಾಜ್ ಯೋಜನೆಯಲ್ಲಿ 600 ಕೋಟಿ ರೂ. ಅನುದಾನ ಗ್ರಾಪಂಗಳಿಗೆ ಬಂದಿದೆ, ಗ್ರಾಮದಲ್ಲಿನ ರಸ್ತೆ, ನೀರು, ಬೆಳಕಿನ ಜತೆಗೆ ಪಟ್ಟಣಕ್ಕೆ ಸರಿಸಮವಾಗಿ ಹಳ್ಳಿ ಬದುಕನ್ನು ರೂಪಿಸಲು ಮೋದಿಯವರ ಕೊಡುಗೆ ಅಪಾರ. ಗ್ರಾಮ ಉದ್ದಾರವಾದರೆ ರಾಜ್ಯ, ಮತ್ತು ದೇಶ ಉದ್ದಾರವಾದಂತೆ, ಉತ್ಸಾಹ ಜಯ ತರಬೇಕು.
    ಪ್ರತಾಪಸಿಂಹ ಸಂಸದ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts