More

    ನಗರಸಭೆಯಲ್ಲಿ ಬಿಜೆಪಿ ದುರಾಡಳಿತ! ಅಧ್ಯಕ್ಷೆ ಉಷಾ ದಾಸರ ರಾಜಿನಾಮೆ ಆಗ್ರಹ: ವಿಪಕ್ಷ ನಾಯಕ ಎಲ್​.ಡಿ. ಚಂದಾವರಿ

    ವಿಜಯವಾಣಿ ಸುದ್ದಿಜಾಲ ಗದಗ
    ನಗರಸಭೆಯಲ್ಲಿ ಬಿಜೆಪಿ ದುರಾಡಳಿತ ನಡೆಸುತ್ತಿದೆ. ಗದಗ ನಗರದ ಜನತೆಯ ನಿರೀೆಕ್ಷೆ ಗಳನ್ನು ಆಡಳಿತ ಪಕ್ಷ ಬಿಜೆಪಿ ಈಡೇರಿಸಲು ವಿಲವಾಗಿದೆ. ಕಳೆದ ಎರಡೂ ವರ್ಷಗಳಿಂದ ನಗರದಅಭಿವೃದ್ಧಿ ಶೂನ್ಯ. ಈ ಹಿನ್ನೆಲೆ ನಗರಸಭೆ ಅಧ್ಯಕ್ಷೆ ಉಷಾ ದಾಸರ ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿಬೇಕು. ಇಲ್ಲವಾದರೆ ಜಿಲ್ಲಾಡಳಿತ ನಗರಸಭೆಯನ್ನು ಸೂಪರ್​ ಸೀಡ್​ ಮಾಡಬೇಕು ಎಂದು ನಗರಸಭೆ ಪ್ರತಿಪಕ್ಷ ನಾಯಕ ಎಲ್​.ಡಿ. ಚಂದಾವರಿ ಆಗ್ರಹಿಸಿದರು.

    ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಮುನ್ಸಿಪಲ್​ ಹೈಸ್ಕೂಲ್​ ನಲ್ಲಿ ನೇಮಕಾತಿ, ನೀರು ಪೂರೈಕೆ ಮತ್ತು ಬೀದಿ ದೀಪ ನಿರ್ವಹಣೆ ಗುತ್ತಿಗೆ ಟೆಂಡರ್​ನಲ್ಲಿ ನಡೆದ ಅಕ್ರಮ ಕುರಿತು ಮಾತನಾಡಿದ ಅವರು, ಅಧಿಕ ಬಿಡ್​ ಮಾಡಿದವರಿಗೆ ನಿರ್ವಹಣೆ ಗುತ್ತಿಗೆ ನೀಡಿದ್ದಾರೆ. ಠರಾವು ಸಂಖ್ಯೆ 263ರ ನಡಾವಳಿಯನ್ನು ಜಿಲ್ಲಾಧಿಕಾರಿಗಳ ಮುಂದೆ ಸಮರ್ಥನೆ ಮಾಡುವ ನೈತಿಕತೆಯೂ ಆಡಳಿತ ಬಿಜೆಪಿ ಪಕ್ಷಕ್ಕೆ ಇಲ್ಲವಾಗಿದೆ. ನಗರಸಭೆಯ ಆಡಳಿತದ ವೈಲ್ಯದಿಂದ ಜಿಲ್ಲಾಡಳಿತವೇ ನಗರಸಭೆಯ ಎಲ್ಲ ನಿರ್ಣಯಗಳನ್ನು ಕೈಗೊಳ್ಳುತ್ತಿದೆ. ಆಡಳಿತ ಕೇಂದ್ರವಾಗಬೇಕಿದ್ದ ನಗರಸಭೆಯು ಬಿಜೆಪಿ ಆಡಳಿತದಲ್ಲಿ ಧರ್ಮಶಾಲೆ ಇದ್ದಂತೆ ಕಾಣುತ್ತಿದೆ ಎಂದು ವ್ಯಂಗ್ಯವಾಡಿದರು.


    ಕಳೆದ 12 ವರ್ಷಗಳ ಹಿಂದೆಯೇ ಬೀದಿ ದೀಪಗಳ ಸಮೀಕ್ಷೆ ನಡೆದಿದೆ. ಈಗ ಮತ್ತೊಮ್ಮೆ ಸಮೀಕ್ಷೆ ನಡೆಯಬೇಕು. ಗುತ್ತಿಗೆದಾರರು ಸರಿಯಾಗಿ ಕೆಲಸ ನಿರ್ವಹಿಸದೇ ಇದ್ದರೆ ಅವರನ್ನು ತೆಗೆದು ಹಾಕಿ ಬೇರೆಯವರನ್ನು ನೇಮಿಸಬೇಕು. ಟೆಂಡರ್​ ರದ್ದತಿಗೆ ಜಿಲ್ಲಾಧಿಕಾರಿ ಆದೇಶದ ನಂತರವೂ ಮತ್ತೊಬ್ಬರಿಗೆ ಗುತ್ತಿಗೆ ನೀಡಿ ಕಾನೂನು ಬಾಹಿರ ಕ್ರಮ ಅನುಸರಿಸಿದೆ. ಅ.30 ರಂದು ನಡೆದ ಠರಾವು ಸಂಖ್ಯೆ 263 ರ ನಡಾವಳಿಯನ್ನು ಜಿಲ್ಲಾಧಿಕಾರಿಗಳು ಇನ್ನೂ ರದ್ದು ಮಾಡಿಲ್ಲ. ಆದಷ್ಟು ಬೇಗ ರದ್ದತಿ ಆದೇಶ ಹೊರಡಿಸಬೇಕು. ಇಂತಹ ಹಲವು ಅಕ್ರಮಗಳು ನಗರಸಭೆಯಲ್ಲಿ ಜರುಗುತ್ತಿವೆ. ದುರಾಡಳಿತದ ಹೊಣೆಹೊತ್ತು ಅಧ್ಯಕ್ಷರು ರಾಜೀನಾಮೆ ನೀಡಬೇಕು. ಇದೇ ರೀತಿ ಆಡಳಿತ ನಡೆಸಿದರೆ ನಿರಂತರ ಪ್ರತಿಭಟನೆ ನಡೆಸಲಾಗುವುದು ಎಂದರು.

    ನಗರಸಭೆ ಹೈಸ್ಕೂಲ್​ ನೇಮಕಾತಿಯಲ್ಲಿ ಅಕ್ರಮ:
    ನಗರಸಭೆ ಹೈಸ್ಕೂಲ್​ ಪಿಟಿ ಹುದ್ದೆಗೆ ಕರೆದ ಸಂದರ್ಶನದಲ್ಲಿ 40 ಲಕ್ಷ ಅವ್ಯಹಾರ ಜರುಗಿದೆ. ಈ ವಿಷಯದಲ್ಲಿ ವಂಚನೆ, ಅಪರಾಧ, ಭ್ರಷ್ಟಾಚಾರ ನಡೆದಿದೆ. ಲೋಕಾಯುಕ್ತರು ಸ್ವಯಂ ದೂರು ದಾಖಲಿಸಿಕೊಂಡು ತನಿಖೆ ನಡೆಸಬೇಕು ಎಂದು ಚಂದಾವರಿ ಇದೇ ಸಂದರ್ಭದಲ್ಲಿ ಆಗ್ರಹಿಸಿದರು.
    ಸಂದರ್ಶನ ಕರೆಯುವ ಅಧಿಕಾರ ಪ್ರಿನ್ಸಿಪಲ್​ ಗೆ ಇರುತ್ತದೆ. ಆದರೆ, ನಗರಸಭೆ ಅಧ್ಯೆ ಮತ್ತು ಪೌರಾಯುಕ್ತರು ಸಂದರ್ಶನ ಕರೆದಿದ್ದಾರೆ. ಇದು ನಿಯಮ ಬಾಹಿರ ಕೆಲಸ ಆಗಿದೆ. ಪ್ರಿನ್ಸಿಪಲ್​ ಹೊರಗಿಟ್ಟು ಸಂದರ್ಶನ ನಡೆಸಿದ್ದಾರೆ. ಸಂದರ್ಶನ ನೋಟಿಫಿಕೇಷನ್​ ನಲ್ಲಿ ” ನೇಮಕಾತಿಗೆ ಎಂ.ಪಿ ಎಡ್​ ಶೇ.55 ಅಂಕ ಪಡೆದರೆ ಸಾಕು’ ಎಂದು ತಿಳಿಸಲಾಗಿದೆ. ಆದರೆ, ಮೆರಿಟ್​ ಮೇಲೆ ನೇಮಕ ಮಾಡಬೇಕು ಎಂಬುದು ಸರ್ಕಾರದ ನಿಯಮವೇ ಇದೆ. ಇಲ್ಲಿ ಸರ್ಕಾರದ ನಿಯಮ ಉಲ್ಲಂನೆ ಆಗಿದೆ. ಸಂದರ್ಶನ ಕರೆಯುವ ಪೂರ್ವದಲ್ಲಿ ಸಾಮಾನ್ಯ ಸಭೆಯಲ್ಲಿ ಠರಾವು ಮೂಲಕ ಸಂದರ್ಶನ ವಿಷಯಕ್ಕೆ ಅನುಮೋದನೆ ಪಡೆದಿಲ್ಲ. ಹೈಸ್ಕೂಲ್​ ಕಮಿಟಿ, ಸಾಮಾನ್ಯ ಸಭೆ ಅನುಮತಿ ಇಲ್ಲದೇ ಸಂದರ್ಶನ ನಡೆದ ಪ್ರಕ್ರಿಯೆ ಅಕ್ರಮವಾಗಿದೆ. 7 ಜನ ಸಂದರ್ಶನಕ್ಕೆ ಬಂದವರಲ್ಲಿ ಹಲವರು ಹೆಚ್ಚಿಗೆ ಅಂಕ ಪಡೆದಿದ್ದಾರೆ. ಅರ್ಹರಿಗೆ ನ್ಯಾಯ ದೊರೆತಿಲ್ಲ. ಉನ್ನತ ಶಿಕ್ಷಣ ಇಲಾಖೆ ಈ ನೇಮಕಾತಿ ಪ್ರಕ್ರಿಯೆಯನ್ನು ಸಂರ್ಪೂಣ ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿದರು.
    ಸುದ್ದಿಗೋಷ್ಠಿಯಲ್ಲಿ ಬರಕತ್​ ಅಲಿ ಮುಲ್ಲಾ, ಚಂದ್ರಶೇಕರ್​ ಕರಿಸೋಮನಗೌಡರ್​, ಮೆಹಬೂಬ್​ ಸಾಬ್​ ನದಾಫ್​, ಲಕ್ಷಿ$್ಮ ಸಿದ್ದಮನಹಳ್ಳಿ, ಶಕುಂತಲಾ ಅಕ್ಕಿ, ವಿರ್ನ್​ ಬಾನು ಮುಲ್ಲಾ, ನಮಾಜಿ, ಹೊಳೆಬಸಪ್ಪಾ ಅಕ್ಕಿ, ಅನಿಲ್​ ಸಿದ್ದಮನಹಳ್ಳಿ, ಮುನ್ನಾ ರೇಷ್ಮೆ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts