More

    ಕರ್ನಾಟಕ ಬಂದ್​: ಕನ್ನಡ ಪರ ಸಂಘಟನೆಗಳಿಗೆ ಶಾಸಕ ಬಸನಗೌಡ ಪಾಟೀಲ ಸವಾಲು

    ವಿಜಯಪುರ: ಡಿ. 5 ರಂದು ಬಂದ್‌ಗೆ ಕರೆ ನೀಡಿರುವ ಕನ್ನಡ ಪರ ಸಂಘಟಕರಿಗೆ ತರಾಟೆಗೆ ತೆಗೆದುಕೊಂಡಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ ಬಂದ್ ಹೇಗೆ ಮಾಡುತ್ತಾರೆ ನಾನೂ ನೋಡುತ್ತೇನೆಂದು ಸವಾಲ್ ಹಾಕಿದ್ದಾರೆ.

    ಇಲ್ಲಿನ ರಾಣಿ ಚನ್ನಮ್ಮ ಸಮುದಾಯ ಭವನದಲ್ಲಿ ಶುಕ್ರವಾರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಆಯೋಜಿಸಿದ್ದ ಸಹಕಾರ ಸಪ್ತಾಹ ದಿನಾಚರಣೆ ಹಾಗೂ ಸಮಾರೋಪ ಸಮಾರಂಭದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

    ಇದನ್ನೂ ಓದಿ: ಕಸಿನ್​ಗಳ ಮದುವೆ ಕಾನೂನು ಬಾಹಿರ; ಹರಿಯಾಣ, ಪಂಜಾಬ್​ ಹೈ ಕೋರ್ಟ್​ ಆದೇಶ

    ಶಿವಾಜಿ ಮಹಾರಾಜ ಕರ್ನಾಟಕದವರು. ವಿಜಯಪುರದ ಶಾಹಿ ಸುಲ್ತಾನರ ಆಸ್ತಾನದಲ್ಲಿ ಅವರ ತಂದೆ ಮಂತ್ರಿಯಾಗಿದ್ದರು. ಬೆಂಗಳೂರು ಪ್ರಾಂತ್ಯವನ್ನು ಅವರೇ ನೋಡಿಕೊಳ್ಳುತ್ತಿದ್ದರು. ಶಿವಾಜಿ ಇಲ್ಲದೇ ಹೋಗಿದ್ದರೆ ಇಂದು ಹಿಂದುಗಳೇ ಇರುತ್ತಿರಲಿಲ್ಲ. ಮರಾಠ ಸಮುದಾಯಕ್ಕೆ ಇನ್ನೂ ಹೆಚ್ಚಿನ ಸೌಲಭ್ಯ ನೀಡಬೇಕು. ಹಾಗೊಂದು ವೇಳೆ ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿದರೆ ದೊಡ್ಡ ಅನಾಹುತವಾಗುತ್ತದೆ ಎಂದರು.

    ಮರಾಠಾ ಭಾಷೆ, ಬೆಳಗಾವಿ ವಿಚಾರದಲ್ಲಿ ಶಿವಸೇನಾ, ಶರದ ಪವಾರ, ಆಯೋಗ್ಯ ಅಜೀತ ವವಾರ ಅವರನ್ನು ವಿರೋಧಿಸುತ್ತೇನೆ. ಹಾಗೆಯೇ ಕನ್ನಡ ನಕಲಿ ಹೋರಾಟಗಾರರನ್ನೂ ವಿರೋಧಿಸುತ್ತೇನೆ. ಕನ್ನಡ ಮತ್ತು ಸಂಸ್ಕೃತಿ ಹೆಸರಿನಲ್ಲಿ ವಾಟಾಳ್ ನಾಗರಾಜ ಹಾಗೂ ಕನ್ನಡಪರ ಸಂಘಟನೆಗಳ ಮುಖಂಡರು ಎಷ್ಟು ಅನುದಾನ ಪಡೆದಿದ್ದಾರೆ? ಬೇರೆ ಕನ್ನಡ ಪರ ಸಂಘನೆಗಳಿಗೆ ನೀಡಿದ್ದಾರಾ? ಇವರೆಲ್ಲ ಬೆಂಗಳೂರಿನ ಹೊಟೆಲ್‌ನಲ್ಲಿ ಕುಳಿತು ಆ ಹೋಟೆಲ್ ತಮ್ಮದೆಂದು ಹೇಳುತ್ತಾರೆ. ವಾಟಾಳ್ ನಾಗರಾಜನಿಂದ ನಾವೇನು ಕಲಿಯಬೇಕಾಗಿಲ್ಲ ಎಂದರು.

    ಇದನ್ನೂ ಓದಿ: ದೆಹಲಿಯಿಂದ ಗೋವಾಕ್ಕೆ ಹಾರಿದ ಸೋನಿಯಾ, ರಾಹುಲ್​; ಕಾರಣವೇನು ಗೊತ್ತಾ?

    ಕೆಪಿಎಸ್​ಸಿ ನೇಮಕಾತಿಗಳ ಸ್ಥಿತಿ-ಗತಿಯ ರಿಪೋರ್ಟ್​ ಕಾರ್ಡ್​ ಸಿದ್ಧ: ವೆಬ್​ಸೈಟ್​ನಲ್ಲಿ ಮಾಹಿತಿ ಲಭ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts