More

    ಕೆಜಿಎಫ್ ಶಾಸಕಿ ಕಾಲ್ ಸೆಂಟರ್ ಕೋಲಾರದಲ್ಲಿದೆ : ಮಾಜಿ ಶಾಸಕ ವೈ.ಸಂಪಂಗಿ

    ಬೇತಮಂಗಲ: ಕೆಜಿಎಫ್ ಕ್ಷೇತ್ರದ ಹಾಲಿ ಶಾಸಕಿ ಸಾಮಾನ್ಯ ಜನರ ಕೈಗೆ ಸಿಗುತ್ತಿಲ್ಲ. ಸಿಕ್ಕರೂ ಅವರು ಯಾವುದೇ ಕೆಲಸ ವಾಡುತ್ತಿಲ್ಲ. ಏಕೆಂದರೆ ಶಾಸಕರ ಕಾಲ್ ಸೆಂಟರ್ ಕೋಲಾರದಲ್ಲಿದೆ ಎಂದು ಶಾಸಕಿ ರೂಪಕಲಾ ವಿರುದ್ಧ ವಾಜಿ ಶಾಸಕ ವೈ.ಸಂಪಂಗಿ ಕಿಡಿ ಕಾರಿದರು.

    ತಾಲೂಕಿನ ನಾಗಶೆಟ್ಟಿಹಳ್ಳಿಯ ವೈ.ಸಂಪಂಗಿ ತೋಟದ ಮನೆಯಲ್ಲಿ ಆಗ್ನೇಯ ಪದವೀಧರ ಕ್ಷೇತ್ರ ಚುನಾವಣೆ ಹಿನ್ನೆಲೆಯಲ್ಲಿ ಭಾನುವಾರ ಏರ್ಪಡಿಸಿದ್ದ ಕಾರ್ಯಕರ್ತರು ವತ್ತು ಪದವೀಧರರ ಸಭೆಯಲ್ಲಿ ಮಾತನಾಡಿದರು. ಹಾಲಿ ಶಾಸಕರ ಬಳಿ ಏನೇ ಕೆಲಸ ಆಗಬೇಕೆಂದರೆ ಅವರ ಸಹಾಯವಾಣಿ ಕೇಂದ್ರ ಕೋಲಾರದಲ್ಲಿದೆ. ಅಲ್ಲಿಗೆ ಕರೆ ಮಾಡಬೇಕು ಅಥವಾ ದೊಡ್ಡ ಕೆಲಸವಾದರೆ ನೇರವಾಗಿ ಸಂಪರ್ಕಿಸಬೇಕು. ಅದೂ ಕೆಲಸ ಆಗೋದು ಗ್ಯಾರಂಟಿ ಇರಲ್ಲ. ಆದರೆ, ನನ್ನ ಕಾಲ್ ಸೆಂಟರ್ ಮನೆಬಾಗಿಲಿಗೆ ಬರುತ್ತದೆ. ಶಾಸಕರು ಇದುವರೆಗೂ ಎಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ ಎಂಬ ಸತ್ಯಾಸತ್ಯತೆ ತಿಳಿಸಲು ಬಹಿರಂಗ ಚರ್ಚೆಗೆ ಸಿದ್ಧ ಎಂದರು.

    ಬಿಜೆಪಿ ಜಿಲ್ಲಾಧ್ಯಕ್ಷ ವೇಣುಗೋಪಾಲ್ ಮಾತನಾಡಿ, ರಾಜ್ಯ ಮತ್ತು ಕೇಂದ್ರಗಳಲ್ಲಿ ಬಿಜೆಪಿ ಸರ್ಕಾರಗಳಿವೆ. ಹೀಗಾಗಿ ವಿಧಾನಪರಿಷತ್‌ಗೆ ಬಿಜೆಪಿ ಅಭ್ಯರ್ಥಿಯನ್ನೇ ಗೆಲ್ಲಿಸಿದರೆ ಎಲ್ಲ ಸೌಲಭ್ಯ ಪಡೆಯಬಹುದು ಎಂದರು.
    ಕೆಡಿಎ ಅಧ್ಯಕ್ಷೆ ಅಶ್ವಿನಿ, ತಾಪಂ ಸದಸ್ಯ ಡಾ.ಕೃಷ್ಣಮೂರ್ತಿ, ಜಿಲ್ಲಾ ಕಾರ್ಯದರ್ಶಿ ಧರಣಿ, ವೆಂಕಟರೆಡ್ಡಿ, ಕೆಜಿಎಫ್ ವಕೀಲ ಸಂದ ಅಧ್ಯಕ್ಷ ಕೆ.ಸಿ.ನಾಗರಾಜ್, ನಗರಸಭೆ ಸದಸ್ಯೆ ರಾಮುಮ್ಮ, ಗ್ರಾಪಂ ವಾಜಿ ಅಧ್ಯಕ್ಷ ಮುನಿಸ್ವಾಮಿರೆಡ್ಡಿ, ಮುನಿಯಪ್ಪ, ಎಬಿವಿಪಿ ಸುನೀಲ್, ಯುವ ಮುಖಂಡರಾದ ಅರುಣ್, ಸುದರ್ಶನ್, ಪುರುಷೋತ್ತಮ್ ಇತರರಿದ್ದರು.

    ಬಿಜೆಪಿಯಲ್ಲಿನ ಗುಂಪುಗಾರಿಕೆ ಬಹಿರಂಗ : ಕೆಜಿಎಫ್ ತಾಲೂಕು ಬಿಜೆಪಿಯಲ್ಲಿನ ಗುಂಪುಗಾರಿಕೆಗೆ ಇನ್ನೂ ಬ್ರೇಕ್ ಬಿದ್ದಿಲ್ಲ ಎಂಬುವುದನ್ನು ವಾಜಿ ಶಾಸಕ ವೈ.ಸಂಪಂಗಿ ಅವರ ತೋಟದ ಮನೆಯಲ್ಲಿ ಭಾನುವಾರ ಆಯೋಜಿಸಿದ್ದ ಪರಿಷತ್ ಚುನಾವಣಾ ಪ್ರಚಾರ ಸಭೆ ಮತ್ತೊಮ್ಮೆ ಸಾಬೀತು ಪಡಿಸಿದೆ.

    ಸಂಸದ ಮುನಿಸ್ವಾಮಿ ಹಾಗೂ ಜಿಲ್ಲಾಧ್ಯಕ್ಷ ವೇಣುಗೋಪಾಲ್ ಭಾಗವಹಿಸಿದ್ದ ಸಭೆಯಲ್ಲಿ ಮಾಜಿ ಶಾಸಕರ ಬೆಂಬಲಿಗರೇ ಭಾಗವಹಿಸಿದ್ದರು. ಕೆಜಿಎಫ್ ನಗರ ಘಟಕ ಅಧ್ಯಕ್ಷ ಕಮಲನಾಥನ್, ಗ್ರಾಮಾoತರ ಅಧ್ಯಕ್ಷ ಬುಜ್ಜಿನಾಯ್ಡು ಸೇರಿ ವಿರೋಧಿ ಗುಂಪಿನ ಯಾರೊಬ್ಬರೂ ಕಂಡು ಬಾರದಿದ್ದದ್ದು ಪಕ್ಷದಲ್ಲಿ ಗುಂಪುಗಾರಿಕೆ ಇದೆ ಎಂಬ ಸಂದೇಹ ಮೂಡಿಸಿದೆ.

    ಈ ಬಗ್ಗೆ ಪ್ರತಿಕ್ರಿಯಿಸಿರುವ ಸಂಸದ ಮುನಿಸ್ವಾಮಿ, ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ, ಟಿಎಪಿಎಂಸಿಎಸ್ ಚುನಾವಣೆಗೆ ಸಂಬಂಧಪಟ್ಟಂತೆ ಅವರವರ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದರು. ಇದೇ ವೇಳೆ ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಕೂಡಾ ಇದೇ ರೀತಿ ಗುಂಪುಗಾರಿಕೆ ಮಾಡುತ್ತಿದ್ದರು ಎಂಬ ಪ್ರಶ್ನೆಗೆ ಸಿಡುಕಿದ ಸಂಸದ, ಮುನಿಯಪ್ಪ ಹಾಗೂ ನನ್ನನ್ನು ಹೋಲಿಕೆ ಮಾ ಡಬೇಡಿ, ನಾನು ಪಕ್ಷ ಕಟ್ಟುವ, ಕಾರ್ಯಕರ್ತರನ್ನು ಸಂಟಿಸುವ ಕೆಲಸ ಮಾಡುತ್ತೇನೆ ಎಂದರು.

    ವಿಧಾನ ಪರಿಷತ್ ಚುನಾವಣೆಯಲ್ಲಿ ಮುಖಂಡರು, ಕಾರ್ಯಕರ್ತರು ಒಗ್ಗಟ್ಟಾಗಿ ಶ್ರಮಿಸಿ ಕೆಜಿಎಫ್‌ನಲ್ಲಿ ಹೆಚ್ಚು ಮತ ಬರುವಂತೆ ವಾಡಬೇಕು, ಯಾವ ಬೂತ್‌ಗಳಲ್ಲಿ ಎಷ್ಟು ಮತ ಬಂದಿವೆ ಎಂದು ನೋಡುತ್ತೇನೆ. ಲೀಡ್ ಬಂದ ಬೂತ್‌ಗಳ ಜವಾಬ್ದಾರಿ ಪಡೆದವರಿಗೆ ಮುಂದಿನ ದಿನಗಳಲ್ಲಿ ಉತ್ತಮ ಸ್ಥಾನ ವಾನ ನೀಡಲಾಗುವುದು ಎಂದು ಭರವಸೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts