More

    ಯುಪಿ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿಗೆ ಭಾರೀ ಗೆಲುವು; ಪಕ್ಷವಾರು ವಿವರ ಇಲ್ಲಿದೆ

    ಲಖನೌ : ಉತ್ತರಪ್ರದೇಶ(ಯುಪಿ)ದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಭಾರೀ ವಿಜಯ ಸಾಧಿಸಿದೆ. ಜಿಲ್ಲಾ ಪಂಚಾಯತಿಗಳ​ ಅಧ್ಯಕ್ಷರ ಚುನಾವಣೆಯಲ್ಲಿ 75 ಸೀಟುಗಳಿಗೆ ನಡೆದ ಮತದಾನದಲ್ಲಿ, 67 ಸೀಟುಗಳು ಬಿಜೆಪಿ ಪಾಲಾಗಿವೆ. ಅಖಿಲೇಶ್​ ಯಾದವ್​ರ ಸಮಾಜವಾದಿ ಪಾರ್ಟಿಯ ತೆಕ್ಕೆಗೆ ಕೇವಲ 5 ಸೀಟುಗಳು ಬಿದ್ದಿವೆ. ಉಳಿದ ಮೂರು ಸೀಟುಗಳು ರಾಷ್ಟ್ರೀಯ ಲೋಕ ದಳ, ಜನಸತ್ತಾ ದಳ ಮತ್ತು ಓರ್ವ ಸ್ವತಂತ್ರ ಅಭ್ಯರ್ಥಿಯ ಪಾಲಾಗಿವೆ.

    2016ರ ಇದೇ ಚುನಾವಣೆಯಲ್ಲಿ ಸಮಾಜವಾದಿ ಪಾರ್ಟಿ 60 ಸೀಟುಗಳನ್ನು ಗೆದ್ದಿತ್ತು. ಈ ಬಾರಿಯ ವಿಜಯದಿಂದ ಸಿಎಂ ಯೋಗಿ ಆದಿತ್ಯನಾಥರ ಬಿಜೆಪಿ ಸರ್ಕಾರಕ್ಕೆ ಮನ್ನಣೆ ಸಿಕ್ಕ ಹಾಗಾಗಿದೆ. ಮುಂದಿನ ವರ್ಷ ನಡೆಯಲಿರುವ ರಾಜ್ಯದ ವಿಧಾನಸಭಾ ಚುನಾವಣೆಯ ದೃಷ್ಟಿಯಿಂದ, ಸ್ಥಳೀಯ ಸಂಸ್ಥೆಗಳ ಈ ಚುನಾವಣಾ ಫಲಿತಾಂಶಕ್ಕೆ ಮತ್ತಷ್ಟು ಮಹತ್ವ ಸಿಕ್ಕಿದೆ.

    ಇದನ್ನೂ ಓದಿ: ಬೆಳಗಾವಿ ಬೀದಿ ಕಾಮಣ್ಣನಿಗೆ ಮಹಿಳೆಯಿಂದ ಗೂಸಾ: ಚಪ್ಪಲಿ ಏಟು ತಿಂದವ ಏನ್‌ ಮಾಡಿದ ನೋಡಿ…

    “ಯುಪಿ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿಯ ಅದ್ಭುತ ಗೆಲುವು ಅಭಿವೃದ್ಧಿ, ಸಾರ್ವಜನಿಕ ಸೇವೆ ಮತ್ತು ಕಾನೂನು ಪರಿಪಾಲನೆಗಳಿಗೆ ಜನರು ನೀಡಿದ ಆಶೀರ್ವಾದವಾಗಿದೆ. ಇದರ ಶ್ರೇಯಸ್ಸು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ನೀತಿಗಳು ಮತ್ತು ಪಕ್ಷದ ಕಾರ್ಯಕರ್ತರ ದಣಿವರಿಯದ ಶ್ರಮಕ್ಕೆ ಸಲ್ಲುತ್ತದೆ” ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್​ ಮಾಡಿದ್ದಾರೆ. (ಏಜೆನ್ಸೀಸ್)

    ಕೋಟಿಕೋಟಿ ವರದಕ್ಷಿಣೆ ಕೊಟ್ಟರೂ ಸಂತೃಪ್ತನಾಗದ ಪತಿರಾಯ! ಹೆಂಡತಿಯನ್ನು ಆಹಾರ ಕೊಡದೆ ಕೂಡಿ ಹಾಕಿದ್ದ!

    VIDEO | ಪ್ರತಿಭಟನಾಕಾರರ ಮೇಲೆ ವಾಟರ್​ ಕ್ಯಾನನ್ಸ್​ ಪ್ರಯೋಗ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts